ಬೆಂಗಳೂರು: ಮುಂಬೈ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯು ಪ್ರಿಸ್ಬಯೋಪಿಯಾ ಚಿಕಿತ್ಸೆಗಾಗಿ ಐ ಡ್ರಾಪ್ಸ್ಗಳನ್ನು ಮಾರುಕಟ್ಟೆಗೆ ತರಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ಪಡೆದಿದೆ. PresVu ಕಣ್ಣಿನ ಹನಿಗಳಿಗೆ ಅಂತಿಮ ಅನುಮೋದನೆಯನ್ನು ಪಡೆದುಕೊಂಡಿದೆ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಅವುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಯೋಜಿಸಿದೆ ಎಂದು ಎಂಟಾಡ್ ಫಾರ್ಮಾಸ್ಯುಟಿಕಲ್ಸ್ ಹೇಳಿದೆ.
ಹೌದು ಓದುವ ಸಂದರ್ಭದಲ್ಲಿ ಕನ್ನಡಕ ಹಾಕಿಕೊಳ್ಳುವ ಅಗತ್ಯವಿರುವುದಿಲ್ಲ. ಯಾಕೆಂದರೆ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಪಿಲೋಕಾರ್ಪೈನ್ ಬಳಸಿ ತಯಾರಿಸಿದ ಪ್ರೆಸ್ವಿವು(PresVu) ಕಣ್ಣಿನ ಹನಿಗಳನ್ನು ಬಿಡುಗಡೆ ಮಾಡಿದೆ. ಇದು ವಿದ್ಯಾರ್ಥಿಗಳಿಗೆ ಅಕ್ಷರಗಳನ್ನು ಹತ್ತಿರ ಕಾಣುವಂತೆ ಮಾಡುತ್ತದೆ. ಪ್ರೆಸ್ಬಯೋಪಿಯಾ ಸ್ಥಿತಿಯನ್ನು ಕಡಿಮೆ ಮಾಡುತ್ತದೆ. ಟೋಡ್ ಫಾರ್ಮಾಸ್ಯುಟಿಕಲ್ಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನಿಖಿಲ್ ಕೆ ಮಸೂರ್ಕರ್ ನೀಡಿರುವ ಸಂದರ್ಶನದಲ್ಲಿ ಕೇವಲ 15 ನಿಮಿಷಗಳಲ್ಲಿ ಔಷಧದ ಒಂದು ಹನಿ ಕೆಲಸ ಮಾಡಲು ಶುರು ಮಾಡುತ್ತದೆ. ಮತ್ತು ಅದರ ಪರಿಣಾಮವು 6 ಗಂಟೆಗಳವರೆಗೆ ಇರುತ್ತದೆ.
ಡಯಟ್, ವ್ಯಾಯಾಮ ಯಾವುದೂ ಇಲ್ಲದೇ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್
ಮೊದಲ ಹನಿಯ ಹಾಕಿ ಮೂರರಿಂದ ಆರು ಗಂಟೆಗಳ ಒಳಗೆ ಎರಡನೇ ಹನಿಯನ್ನೂ ಹಾಕಿದರೆ, ಪರಿಣಾಮವು ಇನ್ನೂ ಹೆಚ್ಚು ಕಾಲ ಉಳಿಯುತ್ತದೆ. ಇಲ್ಲಿಯವರೆಗೆ ಕನ್ನಡಕವನ್ನು ಹೊರತುಪಡಿಸಿ ಕಾಂಟ್ಯಾಕ್ಟ್ ಲೆನ್ಸ್ ಅಥವಾ ಕೆಲವು ಶಸ್ತ್ರಚಿಕಿತ್ಸೆಗಳ ಹೊರತಾಗಿ ಮಸುಕು ಅಥವಾ ಸಮೀಪ ದೃಷ್ಟಿಗೆ ಸಂಬಂಧಿಸಿದಂತೆ ಯಾವುದೇ ಔಷಧಿ ಆಧಾರಿತ ಪರಿಹಾರವಿರಲಿಲ್ಲ. ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ನೇತ್ರ, ಇಎನ್ಟಿ ಮತ್ತು ಚರ್ಮರೋಗ ಔಷಧಗಳಲ್ಲಿ ಪರಿಣತಿಯನ್ನು ಹೊಂದಿದೆ ಮತ್ತು 60 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ.
ಅಕ್ಟೋಬರ್ ಮೊದಲ ವಾರದಿಂದ, ಪ್ರಿಸ್ಕ್ರಿಪ್ಷನ್ ಆಧಾರಿತ ಡ್ರಾಪ್ಗಳು 350 ರೂ ಬೆಲೆಯ ಔಷಧಾಲಯಗಳಲ್ಲಿ ಲಭ್ಯವಿರುತ್ತವೆ. 40 ರಿಂದ 55 ವರ್ಷ ವಯಸ್ಸಿನ ಜನರಿಗೆ ಸೌಮ್ಯದಿಂದ ಮಧ್ಯಂತರ ಪ್ರಿಸ್ಬಯೋಪಿಯಾ ಚಿಕಿತ್ಸೆಗಾಗಿ ಔಷಧವನ್ನು ಸೂಚಿಸಲಾಗುತ್ತದೆ. ಇದೇ ರೀತಿಯ ಔಷಧಗಳು ವಿದೇಶಗಳಲ್ಲಿ ಲಭ್ಯವಿದೆ. ನೋಂದಾಯಿತ ವೈದ್ಯರ ಪ್ರಿಸ್ಕ್ರಿಪ್ಷನ್ ಮೇರೆಗೆ ಮಾತ್ರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಕಂಪನಿಯು 2022 ರ ಆರಂಭದಲ್ಲಿ DCGI ಅನುಮೋದನೆಗಾಗಿ ಅರ್ಜಿ ಸಲ್ಲಿಸಿದೆ ಮತ್ತು ಹಂತ III ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಕಂಪನಿಯನ್ನು ಕೇಳಲಾಯಿತು ಎಂದು ಮಸುರ್ಕರ್ ಮಾಹಿತಿ ನೀಡಿದ್ದಾರೆ.