ಬಾಗಲಕೋಟ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಕಂಠಿ ಬಸವೇಶ್ವರ ದೇವಸ್ಥಾನದ ಹತ್ತಿರ ಇರುವ ಮೊಹಮ್ಮದಅಲಿ ಹುಸೇನಸಾಬ ಗೋಕಾಕ ಒಡೆತನಕ್ಕೆ ಸೇರಿದ ಬಡಂಗ ಫ್ಯಾಕ್ಟರಿ, ಕಳೆದ ಎರಡು ಮೂರು ತಿಂಗಳ ಹಿಂದೆ ಮಧ್ಯರಾತ್ರಿ 1 ಗಂಟೆಗೆ ಭಾರತ್ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳು ಒಂದೇ: ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ!
ಭಾರತ ಗ್ಯಾಸ್ ಏಜೆನ್ಸಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದರು ಮತ್ತು ರಬಕವಿ ಬನಹಟ್ಟಿ ತಹಸಿಲ್ದಾರ ಸಿಬ್ಬಂದಿಯವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಿಲಿಂಡರ ಸ್ಫೋಟಕ್ಕೆ ಕರಕಲಾದ ಫ್ಯಾಕ್ಟರಿಯನ್ನು ಸಂಪೂರ್ಣ ವೀಕ್ಷಿಸಿ ಅತಿ ಶೀಘ್ರದಲ್ಲಿ ಪರಿಹಾರ ನೀಡುತ್ತೇವೆಂದು ಹೇಳಿ ಹೋದವರು ಇಲ್ಲಿಯವರೆಗೂ ನಯಾ ಪೈಸೆ ಪರಿಹಾರ ನೀಡಿಲ್ಲ.
ಇದು ಕಮರ್ಷಿಯಲ್ ಗ್ಯಾಸ್ ಇರುವುದರಿಂದ ಭಾರತ್ ಏಜೆನ್ಸಿಗೆ ಸೇರಿದ ಇನ್ಸೂರೆನ್ಸ್ ಕೂಡ ಇದೆ ಆದ್ರೂ ಭಾರತ್ ಗ್ಯಾಸ್ ಏಜೆನ್ಸಿ ಅವರು ಪರಿಹಾರ ಕೊಡೋಕೆ ಇಲ್ಲಿಯವರೆಗೂ ಮನಸ್ಸು ಮಾಡಿಲ್ಲ ಇದರಿಂದ ಬಡಂಗ ಫ್ಯಾಕ್ಟರಿ ಮಾಲೀಕ ದಿನನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಷ್ಟೇ ಅಲ್ಲದೆ ಬಾಗಲಕೋಟೆ ಜಿಲ್ಲಾಧಿಕಾರಿಗಳು ಮತ್ತು ಜಮಖಂಡಿ ಉಪವಿಭಾಗ ಅಧಿಕಾರಿಗಳಿಗೂ ಕೂಡ ಇದರ ಬಗ್ಗೆ
ಮನವಿಯನ್ನು ಸಲ್ಲಿಸಿದರು.
ಆದರೆ ಇಲ್ಲಿಯವರೆಗೂ ನಯ ಪೈಸೆ ಪರಿಹಾರ ಬಂದಿಲ್ಲ. ಸುಟ್ಟು ಕರಕಲಾದ ಬಡಂಗ ಫ್ಯಾಕ್ಟರಿ ಮಾಲೀಕರು ಮತ್ತು ಅವರ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಕೂಡಲೆ ಅಧಿಕಾರಿಗಳು ಮತ್ತು ಭಾರತ ಗ್ಯಾಸ್ ಏಜೆನ್ಸಿ ಎಚ್ಚೆತ್ತುಗೊಂಡು ಪರಿಹಾರ ನೀಡಿ ಇಲ್ಲ ಅಂದ್ರೆ ಪ್ರತಿಭಟನೆ ಮಾಡಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಬಡಂಗ್ ಫ್ಯಾಕ್ಟರಿ ಮಾಲೀಕ ಮಹಮ್ಮದಅಲಿ ಹುಸೇನಸಾಬ ಗೋಕಾಕ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ