ಬಿಸಿಸಿಐ ಪುರುಷರ ಆಯ್ಕೆ ಸಮಿತಿಯ ಸದಸ್ಯರಾಗಿ ಅಜಯ್ ರಾತ್ರಾ ಅವರನ್ನು ನೇಮಕ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ. ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯಲ್ಲಿ ಸಲಿಲ್ ಅಂಕೋಲಾ ಬದಲಿಗೆ ರಾತ್ರಾ ಅವರು ನೇಮಕಗೊಂಡಿದ್ದಾರೆ.
“ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕ್ರಿಕೆಟ್ ಸಲಹಾ ಸಮಿತಿಯು ಮಂಗಳವಾರ ಅಜಿತ್ ಅಗರ್ಕರ್ ನೇತೃತ್ವದ ಪುರುಷರ ಆಯ್ಕೆ ಸಮಿತಿಯ ನೂತನ ಸದಸ್ಯರಾಗಿ ಅಜಯ್ ರಾತ್ರಾ ಅವರನ್ನು ಆರಿಸಿದೆ. ಈ ಸಮಿತಿಯಲ್ಲಿ ಸಲಿಲ್ ಅಂಕೋಲಾ ಬದಲಿಗೆ ರಾತ್ರಾ ಅವರು ಕಾರ್ಯನಿರ್ವಹಿಸಲಿದ್ದಾರೆ.
42ರ ಪ್ರಾಯದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಅಜಯ್ ರಾತ್ರಾ ಅವರು ಹರಿಯಾಣ ಪರ ದೇಶಿ ಕ್ರಿಕೆಟ್ನಲ್ಲಿ 99 ಪ್ರಥಮ ದರ್ಜೆ ಪಂದ್ಯಗಳು, 89 ಲಿಸ್ಟ್ ‘ಎ’ ಪಂದ್ಯಗಳು ಮತ್ತು 17 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಜಯ್ ರಾತ್ರಾ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 4029 ರನ್, ಲಿಸ್ಟ್ ‘ಎ’ ನಲ್ಲಿ 1381 ರನ್ ಮತ್ತು ಟಿ20 ಕ್ರಿಕೆಟ್ನಲ್ಲಿ 191 ರನ್ ಗಳಿಸಿದ್ದಾರೆ.
ರಾತ್ರಾ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಅವರು ತಮ್ಮೊಂದಿಗೆ ದೇಶಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನ ಅನುಭವವನ್ನು ಹೊಂದಿದ್ದಾರೆ. ಭಾರತ ಪರ ಆಡಿದ 6 ಟೆಸ್ಟ್ ಪಂದ್ಯಗಳಲ್ಲಿ ಅಜಯ್ ರಾತ್ರಾ 18ರ ಸರಾಸರಿಯಲ್ಲಿ 163 ರನ್ ಗಳಿಸಿದ್ದರು. ಅವರ ಹೆಸರಿನಲ್ಲಿ ಟೆಸ್ಟ್ನಲ್ಲಿ ಶತಕವೂ ಇದೆ. ಇದಲ್ಲದೇ 12 ಏಕದಿನ ಪಂದ್ಯಗಳಲ್ಲಿ ರಾತ್ರಾ ಅವರ ಬ್ಯಾಟ್ನಿಂದ 90 ರನ್ಗಳು ಮೂಡಿ ಬಂದಿವೆ,” ಎಂದು ,” ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.