ಆನೇಕಲ್: ಎಸಿಸಿ ಲಿಮಿಟೆಡ್ಗೆ ಸೇರಿದ RMC ಘಟಕವನ್ನು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಪುರಸಭೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಮುಂದಾದ ನೌಕರ ಅರೆಸ್ಟ್!
ಜನವಸತಿ ಪ್ರದೇಶಕ್ಕೆ ಸಿಮೆಂಟ್ ಹಾರುಬೂದಿ ವ್ಯಾಪಿಸುತ್ತಿರುವ ಹಿನ್ನೆಲೆ ಎಸಿಸಿ ಲಿಮಿಟೆಡ್ ಗೆ ಸೇರಿದ ರೆಡಿ ಮಿಕ್ಸ್ ಕಾಂಕ್ರೀಟ್ ಘಟಕ ಸೀಜ್ ಮಾಡಲಾಗಿದೆ. ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಂತಿರುವ RMC ಘಟಕ ಇದಾಗಿದ್ದು, ನಿತ್ಯ RMC ಘಟಕದಿಂದ ಸಿಮೆಂಟ್ ಬೂದಿ ಹಾರುತ್ತಿದ್ದೆ.
ಇದರಿಂದ ಇಡೀ ಏರಿಯಾ ಸಿಮೆಂಟ್ ಧೂಳಿನಿಂದ ತುಂಬಿದೆ. ಸಾರ್ವಜನಿಕರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಅಲ್ಲದೆ ಪರವಾನಗಿ ಕೂಡ ಇಲ್ಲದೆ RMC ಘಟಕ ನಡೆಸಲಾಗುತ್ತಿದೆ. ಹಾಗಾಗಿ ಇಂದು ಪುರಸಭೆ ವತಿಯಿಂದ RMC ಘಟಕ ಸೀಜ್ ಮಾಡಲಾಗಿದೆ ಎಂದು ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ಗೋಪಾಲ್ ಹೇಳಿಕೆ ನೀಡಿದ್ದಾರೆ.