ಕೇಂದ್ರ ಸರ್ಕಾರ ಅನೇಕ ಯೋಜನೆಯನ್ನು ಜಾರಿಗೆ ತರುತ್ತದೆ. ಅದರಲ್ಲಿ ಪ್ರಮುಖವಾಗಿ ಯಶಸ್ವಿನಿ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಲು ಎಲ್ಲಾ ಜನರಿಗೂ ಅವಕಾಶ ನೀಡಲಾಗಿದೆ.
ಈ ಕಾರ್ಡನ್ನು ಹೇಗೆ ಪಡೆದುಕೊಳ್ಳುವುದು..? ಅರ್ಹತೆ ಏನು..? ಅರ್ಜಿ ಎಲ್ಲಿ ಸಲ್ಲಿಸಬೇಕು..? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು.. ? ಹೊಸದಾಗಿ ಕಾರ್ಡ್ ಪಡೆಯುವುದು ಹೇಗೆ..? ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು
ಏನಿದು ಯಶಸ್ವಿನಿ ಯೋಜನೆ
ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು ‘ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ’. ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು.
ಯೋಜನೆಯ ಫಲಾಭವಿಯಾಗಲು ಇರಬೇಕಾದ ಅರ್ಹತೆಗಳೇನು**?:**
ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು :
- ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ.
- ನಿಮ್ಮ ರೇಷನ್ ಕಾರ್ಡ್ ಚೀಟಿ.
- ಇತ್ತೀಚೆಗೆನಾ ನಿಮ್ಮ ಭಾವಚಿತ್ರ.
- ಜಾತಿಯ ಪ್ರಮಾಣ ಪತ್ರದ ಆರ್ ಟಿ ನಂಬರ್ ಸಲ್ಲಿಸಬೇಕು.
ಯಾವ ಯಾವ ಕಾಯಿಲೆ ಗುಣಪಡಿಸಿಕೊಳ್ಳಬಹುದು :
- ಹೃದಯ ಸಂಬಂಧಿ ರೋಗಗಳು.
- ಕಿವಿಗೆ ಸಂಬಂಧಿಸಿದ ಚಿಕಿತ್ಸೆ.
- ಮೂಗು ಹಾಗೂ ಗಂಟಲು ವ್ಯಾದಿಗಳ ಚಿಕಿತ್ಸೆ.
- ದೇಹದ ನರಗಳಿಗೆ ಸಂಬಂಧಿಸಿದ ಚಿಕಿತ್ಸೆ.
- ಈ ಮೇಲ್ಕಂಡ ಚಿಕಿತ್ಸೆಯನ್ನು ಪಡೆಯಬಹುದು ಇನ್ನೂ ಕೆಲವೊಂದು ಚಿಕಿತ್ಸೆಯ ಸೌಲಭ್ಯ ನಿಮಗೆ ಯಶಸ್ವಿನಿ ಕಾಡಿನ ಮೂಲಕ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.
ಪ್ರಮುಖವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡಿನಲ್ಲಿ 1,560 ಕಾಯಿಲೆಗಳನ್ನು ಯಶಸ್ವಿನಿ ಯೋಜನೆಯ ಮೂಲಕ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ.