ತರುಣ್ ಸುಧೀರ್ ಹಾಗೂ ಸೋನಲ್ ಅವರದ್ದು ಅಂತರ್ಧಮೀಯ ವಿವಾಹವಾಗಿದ್ದು, ಎರಡೂ ಕಡೆಯ ಮನೆಯವರು ಇವರ ಮದುವೆಗೆ ಒಪ್ಪಿ, ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ.
ತರುಣ್ ಸುಧೀರ್ ಹಾಗೂ ಸೋನಲ್ ಈ ವರ್ಷದ ಆರಂಭದಲ್ಲಿಯೇ ಮದುವೆ ಆಗಬೇಕಿತ್ತು. ಆದರೆ ಕಾರಣಾಂತರದಿಂದ ಮದುವೆ ತಡವಾಯ್ತು. ಕೊನೆಗೆ ಆಗಸ್ಟ್ 11 ರಂದು ಈ ಜೋಡಿ ಸಪ್ತಪದಿ ತುಳಿದರು.
ತರುಣ್ ಸುಧೀರ್ ಹಾಗೂ ಸೋನಲ್ರ ವಿವಾಹದಲ್ಲಿ ದರ್ಶನ್ ಅವರದ್ದು ಪ್ರಮುಖ ಪಾತ್ರವಿದೆ ಎನ್ನಲಾಗಿತ್ತು. ಇಬ್ಬರ ಪ್ರೀತಿಗೆ ದರ್ಶನ್ ಸಹ ಕಾರಣವಂತೆ. ಸೋನಲ್, ತರುಣ್ ಅವರ ಪ್ರೇಮನಿವೇದನೆ ಒಪ್ಪಿದ್ದು ದರ್ಶನ್ರಿಂದ ಎನ್ನಲಾಗಿದೆ.
ತರುಣ್ ಸುಧೀರ್ ಮತ್ತು ಸೋನಲ್ ನಡುವೆ ‘ರಾಬರ್ಟ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಪ್ರೇಮವಾಯ್ತಂತೆ. ತರುಣ್ ‘ರಾಬರ್ಟ್’ ಸಿನಿಮಾ ನಿರ್ದೇಶಿಸಿದ್ದರು. ಸೋನಲ್ ಆ ಸಿನಿಮಾದಲ್ಲಿ ನಟಿಸಿದ್ದರು.
ತರುಣ್ ಸುಧೀರ್ ಹಿಂದು ಕುಟುಂಬದವರಾದರೆ ಸೋನಲ್ ಕ್ರಿಶ್ಚಿಯನ್ ಧರ್ಮೀಯರು. ಈ ಇಬ್ಬರ ವಿವಾಹದಿಂದ ಎರಡು ಧರ್ಮಗಳ ಸಮ್ಮಿಲನ ಆದಂತಾಗಿದೆ.
ಇದೀಗ ಬೆಂಗಳೂರಿನ ಚರ್ಚ್ ಒಂದರಲ್ಲಿ ಭಾನುವಾರದಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಈ ಜೋಡಿ ಮತ್ತೆ ಮದುವೆ ಆಗಿದೆ. ಇಬ್ಬರೂ ಬಿಳಿ ಬಣ್ಣದ ಉಡುಗೆ ತೊಟ್ಟು ಮದುವೆ ಸಂಭ್ರಮವನ್ನು ಎಂಜಾಯ್ ಮಾಡಿದ್ದಾರೆ.
ಆಗಸ್ಟ್ 11 ರಂದು ಈ ಜೋಡಿ ಬೆಂಗಳೂರಿನ ಆರ್ಆರ್ ನಗರದ ಬಳಿಕ ಕಲ್ಯಾಣ ಮಂಟಪದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ವಿವಾಹವಾಗಿದ್ದರು. ಕುಟುಂಬ ಸದಸ್ಯರು, ಆತ್ಮೀಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.