ಪುಣೆ: ಬೈಕ್ನಲ್ಲಿ ಬಂದು ಪುಣೆ ಮಾಜಿ ಕಾರ್ಪೋರೇಟರ್ ವನರಾಜ್ ಹತ್ಯೆ ಗೈದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ. ಭಾನುವಾರ ತಡರಾತ್ರಿ ಸುಮಾರು 9:30ರ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ ಅಂದೇಕರ್ ಮೇಲೆ ದಾಳಿ ಮಾಡಿದ್ದಾರೆ.
ಹರಿತವಾದ ಆಯುಧಗಳಿಂದ ಅಂದೇಕರ್ ಕುತ್ತಿಗೆ ಹಾಗೂ ತಲೆಗೆ ಹಲ್ಲೆ ನಡೆಸಿದ್ದಾರೆ. ತೀರ್ವವಾದ ದಾಳಿಯಿಂದ ಅಂದೇಕರ್ ಮೃತಪಟ್ಟಿರು ಸಾಧ್ಯತೆಗಳು ಇವೆ. ಮೃತರ ಅಂಗಿಯಲ್ಲಿ ಖಾಲಿ ಕಾರ್ಟ್ರಿಡ್ಜ್ ಕಂಡುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರವೀಣ್ ಪಾಟೀಲ್ ಹೇಳಿದ್ದಾರೆ.
ಯುವ ಜನತೆಗೆ ಬಂಪರ್ ಆಫರ್: ಇಲ್ಲಿ ಮದುವೆಯಾದವರಿಗೆ ಸರ್ಕಾರದಿಂದ ಸಿಗುತ್ತೆ ₹31 ಲಕ್ಷ..!
ದಾಳಿಯ ಹಿಂದೆ ಅಂದೇಕರ್ ಸಂಬಂಧಿಕರ ಪಾತ್ರವಿದೆ ಎಂದು ಶಂಕಿಸಿ ಕುಟುಂಬಸ್ಥರು ಎಫ್ಐಆರ್ (FIR) ದಾಖಲಿಸಿದ್ದಾರೆ. ಅಂದೇಕರ್ ದೇಹದಲ್ಲಿ 5 ಬಾರಿ ಗುಂಡು ಹಾರಿಸಿರುವ ಗುರುತು ಹಾಗೂ ಚೂಪಾದ ಶಸ್ತ್ರಗಳಿಂದ ಚುಚ್ಚಿರುವ ಗಾಯಗಳ ಗುರುತುಗಳಿವೆ ಎಂದು ಶವ ಪರೀಕ್ಷೆಯ ವೇಳೆ ತಿಳಿದು ಬಂದಿದೆ ಎಂದು ಹೇಳಿದರು. ಪ್ರಕರಣ ಸಂಬಂಧ 10 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.