ಎರಡು ವರ್ಷಗಳ ಹಿಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರಿಚಯ ಮಾಡಿದ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಲಖನೌ ಸೂಪರ್ ಜಯಂಟ್ಸ್ ತಂಡದ ಫೀಲ್ಡಿಂಗ್ ಕೋಚ್ ಹಾಗೂ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ ಜಾಂಟಿ ರೋಡ್ಸ್ ಇದೀಗ ಅಸಮಾಧಾನ ಹೊರಹಾಕಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಹೊರತಾಗಿ ಪ್ರಯೋಗಾರ್ಥವಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲೂ ಈ ನಿಯಮದ ಬಳಕೆ ಮಾಡಲಾಗಿತ್ತು.
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕಾರಣ ಹೈ ಸ್ಕೋರಿಂಗ್ ಪಂದ್ಯಗಳು ಹೆಚ್ಚು ಹೆಚ್ಚು ಮೂಡಿಬರುತ್ತಿದ್ದು, ಇದರಿಂದ ತಂಡಗಳಲ್ಲಿ ಆಲ್ರೌಂಡರ್ಗಳ ಮಹತ್ವ ಇಲ್ಲವಾದಂತ್ತಾಗಿದೆ. ಹೆಚ್ಚು ಹೆಚ್ಚು ರನ್ ಬಂದಷ್ಟೂ ಆಟದ ರೋಚಕತೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.
ಜಾಂಟಿ ರೋಡ್ಸ್ಗೂ ಮುನ್ನ ಕ್ರಿಕೆಟ್ ಲೋಕದ ಹಲವು ದಿಗ್ಗಜರು ಈ ನಿಯಮದ ಬಗ್ಗೆ ಅಸಮಾಧಾನ ಹೊರಾಹಾಕಿದ್ದಾರೆ. ಐಪಿಎಲ್ 2024 ಟೂರ್ನಿ ವೇಳೆಯೇ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಬೇಸರ ಹೊರಹಾಕಿದ್ದರು.
“ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಬಗ್ಗೆ ನಾನು ಇನ್ನು ಆಲೋಚಿಸುತ್ತಲೇ ಇದ್ದೇನೆ. ಅದ್ಯಕ್ಕಂತೂ ಈ ನಿಯಮ ತಂಡಗಳಲ್ಲಿ ಆಲ್ರೌಂಡರ್ನ ಮಹತ್ವವನ್ನೇ ಕಿತ್ತುಹಾಕಿದೆ. ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಆಲ್ರೌಂಡರ್ನ ಪಾತ್ರ ಅತ್ಯಂತ ಮಹತ್ವದ್ದು.