ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನಲ್ಲಿ ಈ ಬಾರಿ ಅನ್ನದಾತರ ಜಮೀನುಗಳಲ್ಲಿ ಮೆಕ್ಕೆಜೋಳ ಅದ್ಧೂರಿಯಾಗಿ ಬೆಳೆದು ನಿಂತಿದೆ.
ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಈ ಬಾರಿ ಮೆಕ್ಕೆಜೋಳ ಬೆಳೆಯನ್ನು ಅದ್ಧೂರಿಯಾಗಿ ಬೆಳೆಯಲಾಗಿದೆ. ಕಳೆದ 2 ವರ್ಷಗಳಿಂದ ಹತ್ತಿ ಬೆಳೆ ರೈತರಿಗೆ ಭಾರೀ ನಷ್ಟವನ್ನು ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲಾ ರೈತರು ಮೆಕ್ಕೆಜೋಳ ಫಸಲಿನತ್ತ ಮುಖ ಮಾಡಿದ್ದಾರೆ.
ಕಡಿಮೆ ಖರ್ಚು ಮತ್ತು ಅಲ್ಪ ಮಳೆಯಾದರೆ ಸಾಕು ಮೆಕ್ಕೆಜೋಳ ಫಸಲು ಅದ್ಧೂರಿಯಾಗಿ ಬೆಳೆದು ನಿಲ್ಲಲಿದೆ. ಇದರ ಜೊತೆ ಜೊತೆಗೆ ಈ ಬಾರಿ ಮಳೆ ಕೂಡ ಉತ್ತಮವಾಗಿ ಬೀಳುತ್ತಿರುವುದರಿಂದ ಮೆಕ್ಕೆಜೋಳ ಉತ್ತಮ ಇಳುವರಿ ಕೊಡುತ್ತೆ ಎಂದು ಹೇಳಲಾಗುತ್ತಿದೆ.
ಇನ್ನೂ ಕೆಲ ರೈತರು ಹೊಗೆಸೊಪ್ಪು ಹಾಗೂ ಶುಂಠಿ ಬೆಳೆ ಬೆಳೆದಿದ್ದು, ಅವುಗಳು ಕೂಡ ಈ ಬಾರಿ ಉತ್ತಮ ಆದಾಯ ತಂದುಕೊಡಲಿವೆ ಅಂತಾ ಹೇಳಲಾಗುತ್ತಿದೆ.
ಕಳೆದ ವರ್ಷ ಮಳೆ ಕಡಿಮೆಯಾದ ಪರಿಣಾಮ ಮೆಕ್ಕೆಜೋಳ ಅಧಿಕ ಇಳುವರಿ ಕೊಟ್ಟಿರಲಿಲ್ಲ. ಆದರೆ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಮೆಕ್ಕೆ ಜೋಳ ಬೆಳೆ ರೈತರ ಬದುಕನ್ನು ಹಸನಾಗಿಸಲಿದೆ ಎಂದು ಅಂದಾಜಿಸಲಾಗಿದೆ.
ಆನಗೋಡು, ಅಣಜಿ, ಮಾಯಕೊಂಡ ಹೋಬಳಿಗಳ ನೂರಾರು ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆ ಸಂಪೂರ್ಣವಾಗಿ ಬೆಳೆದು ನಿಂತಿದ್ದು, ಕಾಳು ಕಟ್ಟಿವೆ.
ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರ್ ಮೂರ್ತಿ, ಈ ಬಾರಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಉತ್ತಮ ಧಾರಣೆ ಸಿಗುವ ನಿರೀಕ್ಷೆಯಿದ್ದು, ಪ್ರಸ್ತುತ 3200ರ ಗಡಿ ದಾಟಿದೆ. ಬೆಳೆ ಕಟಾವಿನ ನಂತರ ದಾವಣಗೆರೆ ಮಾರುಕಟ್ಟೆಯಲ್ಲಿ 3500 ರೂ.ಗಿಂತ ಹೆಚ್ಚಿನ ದರ ಸಿಗಬಹುದೆಂಬ ನಿರೀಕ್ಷೆ ಇದೆ ಎಂದರು.