ದಕ್ಷಿಣ ಕೊರಿಯಾ: ಭಾರತದಲ್ಲಿ ಮದುವೆ ಅಂದ್ರೆ ಅದ್ಧೂರಿ ಅಷ್ಟೇ ಅಲ್ಲದೇ ಬಲು ದುಬಾರಿ. ಸಾಮಾನ್ಯ ಜನಕ್ಕೆ ಆದ್ರೆ ಲಕ್ಷ ಲಕ್ಷ ದುಡ್ಡು ಖರ್ಚು ಆಗುತ್ತೆ. ಆದ್ರೆ ಇಲ್ಲಿನ ಏಷ್ಯಾ ಖಂಡದ ದಕ್ಷಿಣ ಕೊರಿಯಾ ರಾಷ್ಟ್ರದಲ್ಲಿ ವಿವಾಹವಾಗುವ ಜೋಡಿಗಳಿಗೆ ಅಲ್ಲಿನ ಸರ್ಕಾರ 31 ಲಕ್ಷ ರೂ. ಪ್ರೋತ್ಸಾಹ ಧನ ಕೊಡಲು ಮುಂದಾಗಿದೆ. ಮದುವೆಗಳನ್ನು ಪ್ರೋತ್ಸಾಹಿಸುವುದಕ್ಕೆ ಸರ್ಕಾರ ಕಂಕಣಬದ್ಧವಾಗಿದೆ. ಇನ್ನು ಮಕ್ಕಳಾದ ಮೇಲೆ ಅವರ ವಿದ್ಯಾಭ್ಯಾಸಕ್ಕೆ ಸಹ ಹೆಚ್ಚು ಖರ್ಚು ಮಾಡಲು ಸರ್ಕಾರ ಬದ್ಧವಾಗಿದೆ.
ಏಕೆಂದರೆ… ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಇದರಿಂದಾಗಿ ನವ ಜೋಡಿಗಳು ಮದುವೆಯಾಗಲು ಮತ್ತು ಹೆಚ್ಚು ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸಲು ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ. ಇದನ್ನು ಸಾಕ್ಷೀಕರಿಸಲು ದಕ್ಷಿಣ ಕೊರಿಯಾದ ಬುಸಾನ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಾಹಿತ ದಂಪತಿಗಳಿಗೆ 38,000 ಡಾಲರ್ (38 K South Korean Won – 31 ಲಕ್ಷ ರೂ.) ನೀಡುವುದಾಗಿ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಇನ್ನು ಈ ಸುದ್ದಿ ವೈರಲ್ ಆಗಿದ್ದು 23 ಮಿಲಿಯನ್ ವ್ಯೂಸ್ ಕಂಡಿದೆ.
ನೀವು ಕೊಲೆಸ್ಟ್ರಾಲ್, ಮಧುಮೇಹದಂತಹ ಕಾಯಿಲೆಯಿಂದ ಬಳಲುತ್ತಿದ್ದೀರಾ.? ಹಾಗಿದ್ರೆ ಈ ಸೊಪ್ಪನ್ನು ತಿನ್ನಿ
ದಕ್ಷಿಣ ಕೊರಿಯಾದ ಜನಸಂಖ್ಯೆಯು ವೇಗವಾಗಿ ಕಡಿಮೆಯಾಗುತ್ತಿದೆ. ಅಲ್ಲಿ ಪ್ರತಿ ಮಹಿಳೆ ಸರಾಸರಿ 0.72 ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅಂದರೆ, ಮಹಿಳೆಯು ಮಗುವನ್ನು ಸಹ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ದಕ್ಷಿಣ ಕೊರಿಯಾದ ಸರ್ಕಾರವು ಜನಸಂಖ್ಯೆಯ ಬೆಳವಣಿಗೆ ಮತ್ತು ಫಲವತ್ತತೆ ದರವನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ದಕ್ಷಿಣ ಕೊರಿಯಾದ ಜನಸಂಖ್ಯೆ ಕೇವಲ 5 ಕೋಟಿ. ಇದಲ್ಲದೆ, ಜಪಾನ್ನಲ್ಲಿಯೂ ಸಹ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿದೆ. ದಕ್ಷಿಣ ಕೊರಿಯಾದಂತೆ ಜಪಾನ್ ಕೂಡ ಕಡಿಮೆ ಜನಸಂಖ್ಯೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಹಿಂದೆ ವರ್ಷಕ್ಕೆ 50 ಲಕ್ಷ ಇದ್ದ ಜನನ ಪ್ರಮಾಣ ಈಗ 7.60 ಲಕ್ಷಕ್ಕೆ ಕುಸಿದಿದೆ.