ಪ್ರಸ್ತುತ ನಡೆಯುತ್ತಿರುವ ಡೆಲ್ಲಿ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಯುವ ಬ್ಯಾಟ್ಸ್ ಮನ್ ಪ್ರಿಯಾಂಶ್ ಆರ್ಯ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅವರು ಒಂದು ಓವರ್ನಲ್ಲಿ 6 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸೌಥ್ ಡೆಲ್ಲಿ ಸೂಪರ್ ಸ್ಟಾರ್ಸ್ ಮತ್ತು ನಾರ್ಥ್ ಡೆಲ್ಲಿ ಸ್ಟ್ರೈಕರ್ಸ್ ನಡುವಣ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಸೌಥ್ ಡೆಲ್ಲಿ ಸೂಪರ್ಸ್ಟಾರ್ಸ್ ಪರ ಆಡಿದ ಪ್ರಿಯಾಂಶ್, 12ನೇ ಓವರ್ನಲ್ಲಿ ಮನನ್ ಭಾರದ್ವಾಜ್ ಬೌಲಿಂಗ್ನಲ್ಲಿ ಎಲ್ಲಾ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು.
ಎಡಗೈ ಸ್ಪಿನ್ ಬೌಲರ್ ಮನನ್ ಭಾರದ್ವಾಜ್ ವಿರುದ್ಧ, ಪ್ರಿಯಾಂಶ್ ಆರ್ಯ ಮುಂಭಾಗದಲ್ಲಿ ಎಲ್ಲಾ ಸಿಕ್ಸರ್ಗಳನ್ನು ಬಾರಿಸಿದರು. ಮೊದಲ ಸಿಕ್ಸರ್ ಬಹಳ ದೂರ ಸಾಗಿತ್ತು. ಇದರ ನಂತರ, ಅವರು ಲಾಂಗ್ ಆನ್ ಕಡೆಗೆ ಸತತ ಮೂರು ಸಿಕ್ಸರ್ಗಳನ್ನು ಬಾರಿಸಿದರು. 5ನೇ ಎಸೆತದಲ್ಲಿ ಪ್ರಿಯಾಂಶ್, ಬೌಲರ್ ತಲೆಯ ಮೇಲೆ ನೇರವಾಗಿ ಸಿಕ್ಸರ್ ಬಾರಿಸಿದರು. ಓವರ್ನ ಕೊನೆಯ ಎಸೆತದಲ್ಲಿ ಚೆಂಡನ್ನು ಮತ್ತೊಮ್ಮೆ ಲಾಂಗ್ ಆಫ್ ಮೇಲೆ ಹೊರಗಡೆ ಕಳುಹಿಸಿದರು.
ಇದರೊಂದಿಗೆ ಪ್ರಿಯಾಂಶ್ ಆರ್ಯ ಅವರು ಓವರ್ನಲ್ಲಿ 6 ಸಿಕ್ಸರ್ ಬಾರಿಸಿದರು. ಆ ಮೂಲಕ ಯುವರಾಜ್ ಸಿಂಗ್ ಬಳಿಕ ಟಿ20 ಪಂದ್ಯದ ಏಕೈಕ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. 2007ರ ಟಿ20 ವಿಶ್ವಕಪ್, ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಯುವರಾಜ್ ಸಿಂಗ್ ಓವರ್ಗೆ 6 ಸಿಕ್ಸರ್ ಬಾರಿಸಿದ್ದರು.