ತೃಪ್ತಿಕರ ನಿದ್ರೆಯನ್ನು ಮಾಡುವುದರಿಂದಾಗಿ ಅದರಲ್ಲೂ ವಿಕೆಂಡ್ಗಳಲ್ಲಿ ಚೆನ್ನಾಗಿ ನಿದ್ರಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಶೇಕಡಾ 20 ರಷ್ಟು ನಾವು ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಸೇರಿದಂತೆ ಹಲವು ಅಧ್ಯಯನಗಳು ಹೇಳಿವೆ. ಫವಾಯಿ ಹಾಸ್ಪಿಟಲ್ ಸೇರಿದಂತೆ ಹಲವು ವೈದ್ಯಕೀಯ ಸಂಘಟನೆಗಳು ಸೇರಿ ಮಾಡಿದ ಅಧ್ಯಯನದಲ್ಲಿ ಇಂತಹದೊಂದು ವಿಷಯ ಬಹಿರಂಗವಾಗಿದೆ. 90,903 ಜನರನ್ನು ಅಧ್ಯಯನಕ್ಕೆ ಒಳಪಡಿಸಿ ಅದರಿಂದ ಬಂದ ಫಲಿತಾಂಶದನ್ವಯ ಈ ಒಂದು ಗುಟ್ಟು ಗೊತ್ತಾಗಿದೆ. ವಿಕೇಂಡ್ಗಳಲ್ಲಿ ಸಂತೃಪ್ತವಾದ ನಿದ್ರೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ನಡುವಿನ ಸಂಬಂಧವು ಈ ಅಧ್ಯಯನ ಮೂಲಕ ಬಯಲಾಗಿದೆ.
ಒಟ್ಟು ಅಧ್ಯಯನಕ್ಕೆ ಒಳಪಡಿಸಲಾದ ಜನರಲ್ಲಿ ನಾಲ್ಕು ಗ್ರೂಪ್ಗಳನ್ನು ಮಾಡಲಾಗಿದೆ. 7 ಗಂಟೆಗಿಂತ ಕಡಿಮೆ ಮಲಗುವವರು ಯಾರು. 8 ರಿಂದ 10 ಗಂಟೆಗಳ ಕಾಲ ಮಲಗುವವರು ಯಾರು, ಹೀಗೆ ಒಟ್ಟು ನಾಲ್ಕು ಗುಂಪಗಳ ಅನ್ವಯ ಈ ಅಧ್ಯಯನವನ್ನು ಮಾಡಲಾಗಿದೆ. ಇದರಲ್ಲಿ 10 ರಿಂದ 12 ಗಂಟೆಗೂ ಹೆಚ್ಚು ಕಾಲ ನಿದ್ರಿಸುವವರಲ್ಲಿ ಹೃದಯಸಂಬಂಧಿ ಕಾಯಿಲೆಗಳು ಕಡಿಮೆ ಇವೆ ಎಂಬುದು ತಿಳಿದು ಬಂದಿದೆ. ಅವರಲ್ಲಿ ಆ ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಸುಮಾರು ಶೇಕಡಾ 21ರಷ್ಟು ಕಡಿಮೆ ಎಂದು ಅಂದಾಜಿಸಲಾಗಿದೆ.
ಒಟ್ಟಾರೆ ನಿದ್ರೆಯೂ ಕೂಡ ನಮ್ಮ ದೈನಂದಿನ ಚಟುವಟಿಕೆಗಳ ಒಂದು ಭಾಗ. ಹೀಗಾಗಿ ಸಮಯ ಸಿಕ್ಕಾಗ ಚೆನ್ನಾಗಿ ನಿದ್ರಿಸಿ, ನಿಮ್ಮ ಹೃದಯದ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎನ್ನುತ್ತಾರೆ ವೈದ್ಯರು,