ಬೆಂಗಳೂರು:- ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ಹಿನ್ನೆಲೆ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ.
ಕೆಲಸ ಇದ್ದರೆ ಈಗಲೇ ಮಾಡಿಕೊಳ್ಳಿ: ಸೆಪ್ಟೆಂಬರ್ʼನಲ್ಲಿ ಬ್ಯಾಂಕ್ʼಗಳಿಗೆ 15 ದಿನ ರಜೆ – RBI ಪಟ್ಟಿ ಇಲ್ಲಿದೆ
ಆದರೆ ಬಳ್ಳಾರಿ ಜೈಲು ಯಾಕೋ ದರ್ಶನ್ ಗೆ ಅಡ್ಜಸ್ಟ್ ಆಗ್ತಿಲ್ಲ. ನಟ ದರ್ಶನ್ ಆವರು ಆರೋಗ್ಯ, ತಾಂತ್ರಿಕ ತೊಂದರೆ ನೆಪವೊಡ್ಡಿ ವಕೀಲರ ಮೂಲಕ ಬೆಂಗಳೂರಿಗೆ ಶಿಫ್ಟ್ ಆಗಲು ಪ್ಲ್ಯಾನ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ವಕೀಲರ ಮೂಲಕ ಕೋರ್ಟ್ಗೆ ಮನವಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಹಿಂದೆ ಕೋರ್ಟ್ನಲ್ಲಿ ಮನೆಯೂಟ ಕೇಳಿದಾಗ ನಿರಾಕರಣೆ ಮಾಡಿತ್ತು. ಇದೇ ವಾರದಲ್ಲಿ ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗುವ ಸಾಧ್ಯತೆ ಇದೆ. ಇದರ ಮಧ್ಯೆ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲು ಕೋರ್ಟ್ ಒಪ್ಪಿಗೆ ನೀಡುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ.
ಬೆಂಗಳೂರಿಗೆ ಶಿಫ್ಟ್ ಆಗಬೇಕು ಅಂದರೆ ದರ್ಶನ್ಗೆ ಮೇಜರ್ ಸಮಸ್ಯೆ ಇರಬೇಕು. ಅದರಲ್ಲೂ ಹಾರ್ಟ್ ಸಮಸ್ಯೆ, ಕಿಡ್ನಿ ಸಂಬಂಧಿಸಿದ ಗಂಭೀರ ಸಮಸ್ಯೆ ಇರಬೇಕು. ಆಗ ಮಾತ್ರ ಯಾವುದೇ ಕೈದಿಯನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇರುತ್ತೆ. ಆದರೆ ದರ್ಶನ್ ಅವರಿಗೆ ಸ್ಪೈನಲ್ ಕಾರ್ಡ್, ಎಡಗೈ ಮೂಳೆ ನೋವು ಮಾತ್ರ ಇದೆ. ಇದು ಜೈಲ್ ರೂಲ್ಸ್ ಪ್ರಕಾರ ಮೇಜರ್ ಸಮಸ್ಯೆ ಅಲ್ಲ ಎನ್ನಲಾಗುತ್ತಿದೆ.
ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ಬೇಲ್ಗೆ ಅರ್ಜಿ ಹಾಕುವ ಸಾಧ್ಯತೆ ಇದೆ. ಬೇಲ್ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಜೈಲ್ ಟು ಜೈಲ್ ಶಿಫ್ಟ್ ಮಾಡುವುದು ಅನುಮಾನವಿದೆ. ದರ್ಶನ್ಗೆ ಈಗಿರುವ ಸಮಸ್ಯೆಗೆ ಚಿಕಿತ್ಸೆ ನೀಡಲು ಜೈಲಲ್ಲೇ ನುರಿತ ವೈದ್ಯರಿದ್ದಾರೆ. ಕಿಡ್ನಿ ಸಮಸ್ಯೆ, ಹಾರ್ಟ್ ಸಮಸ್ಯೆ ಇದ್ದರೆ ಜೈಲಿನಲ್ಲೇ ಟ್ರೀಟ್ಮೆಂಟ್ಗೆ ಬಳ್ಳಾರಿಯಲ್ಲೇ ಖಾಸಗಿ ವೈದ್ಯರಿದ್ದಾರೆ. ಬಳ್ಳಾರಿಯಲ್ಲೂ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಇದ್ದಾವೆ ಅಲ್ಲಿ ಚಿಕಿತ್ಸೆ ನೀಡೋದಕ್ಕೆ ಅವಕಾಶ ಇದೆ. ಗಂಭೀರ ಸಮಸ್ಯೆಗೆ ಬಳ್ಳಾರಿಯಲ್ಲಿನ ಚಿಕಿತ್ಸೆ ಕೊಡಲು ಆಗದೇ ಹೋದರೆ ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ