ಬೆಂಗಳೂರು: ತಾವು ಓಡಿಸುತ್ತಿದ್ದ 1981 ರ ಮಾಡೆಲ್ ಹಳೇ ಎಝಡಿ ರೋಡ್ ಕಿಂಗ್ ಬೈಕ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೊಸ ರೂಪ ಕೊಟ್ಟಿದ್ದಾರೆ. 43 ವರ್ಷದ ಹಳೇಯದಾದ 1981ರ ಮಾಡೆಲ್ನ ಸಿಎಇ 7684 ನಂಬರಿನ ಎಝಡಿ ರೋಡ್ ಕಿಂಗ್ ಬೈಕ್ ಅವರ ಮನೆಯಲ್ಲಿತ್ತು. ಈ ಬೈಕ್ ಅವರು ವಿದ್ಯಾರ್ಥಿ ಜೀವನ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ನ ರಾಜಕೀಯ ಚಟುವಟಿಕೆಗಳಿಗೆ ಡಿಕೆಶಿ ಬಳಸುತ್ತಿದ್ದರು. ಇಂದಿಗೂ ಈ ಬೈಕ್ ಡಿಕೆಶಿ ಪಾಲಿಗೆ ಲಕ್ಕಿ ಬೈಕ್ ಎನಿಸಿಕೊಂಡಿದೆ.
ತಮ್ಮ ವಿದ್ಯಾರ್ಥಿ ಜೀವನಕ್ಕೆ ಸಾಕ್ಷಿಯಾಗಿದ್ದ ಅವರ ಈ ಬೈಕನ್ನು ಕಳೆದ ಮೂವತ್ತು ವರ್ಷಗಳಿಂದ ಹಾಗೆಯೇ ನಿಲ್ಲಿಸಿದ್ದರು. ನಿಲ್ಲಿಸಿದ್ದಲ್ಲಿಯೇ ಎಝಡಿ ರೋಡ್ ಕಿಂಗ್ ತುಕ್ಕು ಹಿಡಿದಿತ್ತು. ತುಕ್ಕು ಹಿಡಿದ ತಮ್ಮ ಲಕ್ಕಿ ಬೈಕ್ಗೆ ವಿಂಟೇಜ್ ಬೈಕ್ ಸಿದ್ಧಪಡಿಸುವ ಕ್ರೇಜ್ ಹೊಂದಿರುವ ಸುಪ್ರೀತ್ ಅವರಿಂದ ಈಗ ಹೊಸ ರೂಪ ಕೊಡಲಾಗಿದೆ. ದೇಶದ ವಿವಿಧ ಭಾಗ ಹಾಗೂ ವಿದೇಶದಿಂದ ಬೈಕಿನ ಕೆಲ ಬಿಡಿ ಭಾಗಗಳನ್ನು ಆಮದು ಮಾಡಿಸಿಕೊಂಡು ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಡಿಕೆಶಿ ತಮ್ಮ ಕಾಲೇಜು ದಿನಗಳಲ್ಲಿ ಓಡಾಡುತ್ತಿದ್ದ ಬೈಕ್ ರಿಪೇರಿ ಮಾಡಿಸಿದ್ದಾರೆ.