ದೈನಂದಿನ ಜೀವನದಲ್ಲಿ ಹಲವು ಸೊಪ್ಪನ್ನು ಸೇವಿಸುತ್ತೀವಿ. ಕರಿಬೇವು, ಕೊತ್ತಂಬರಿ, ಮೆಂತೆ, ಪಾಲಕ್, ಸಬ್ಸಿಗೆ, ನುಗ್ಗೆ ಸೊಪ್ಪು ಹೀಗೆ. ಎಲ್ಲಾ ಸೊಪ್ಪುಗಳು ತಮ್ಮದೇ ಆದ ವೈಶಿಷ್ಟö್ಯ ಹೊಂದಿದ್ದು ನಮ್ಮ ಆರೋಗ್ಯದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವಿಸುತ್ತವೆ. ಆದೇ ರೀತಿ ಹರಿವೇ ಸೊಪ್ಪು ಸಹ ತನ್ನದೇ ಗುಣಗಳನ್ನು ಹೊಂದಿದೆ. ನಮ್ಮ ಆರೋಗ್ಯದಲ್ಲಿ ಇದು ಮಹತ್ವದ ಪಾತ್ರವಹಿಸುತ್ತದೆ.
ಹರಿವೆ ಸೊಪ್ಪು ಡಯೆಟ್ ಮಾಡುವವರಿಗೆ ಉತ್ತಮ. ಇದರಲ್ಲಿ ವಿಟಮಿನ್ ಸಿ ಇದ್ದು, ಕಬ್ಬಿಣಾಂಶ ಒದಗಿಸುವುದು, ರಕ್ತನಾಳ ರೂಪಿಸುವುದು, ಸ್ನಾಯು ಸರಿಪಡಿಸುತ್ತದೆ. ಇದರಲ್ಲಿ ಪೊಟ್ಯಾಶಿಯಂ ಮತ್ತು ಫೈಬರ್ ಹೆಚ್ಚಿದ್ದು, ವಿಟಮಿನ್ ಎ ಹೇರಳವಾಗಿದೆ.
ಪ್ರಯೋಜನಗಳು
- ಹಲವು ಬಣ್ಣಗಳಲ್ಲಿ ಹರಿವೆ ಸೊಪ್ಪು ಕಾಣಸಿಗುತ್ತವೆ. ಹಸಿರು, ಗುಲಾಬಿ ಮಿಶ್ರಿತ ನೇರಳೆ ಬಣ್ಣ, ಗೋಲ್ಡನ್ ಬಣ್ಣದಲ್ಲೂ ಸಿಗುತ್ತವೆ. ಹರಿವೆ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತವೆ.
- ಹರಿವೆ ಸೊಪ್ಪಿನಲ್ಲಿ ಪೊಟ್ಯಾಶಿಯಂ, ನ್ಯೂಟ್ರಿನ್, ಫೈಬರ್, ವಿಟಮಿನ್ ಅಂಶಗಳು ಹೇರಳವಾಗಿದ್ದು ಹೃದಯ ಸಂಬAಧಿ ಖಾಯಿಲೆಯನ್ನು ನಿಯಂತ್ರಿಸುವ ಗುಣ ಹೊಂದಿದೆ.
- ಈ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯೂಟ್ರೀಷನ್ ಹಾಗೂ ಆಯಂಟಿ ಆಕ್ಸಿಡೆಂಟ್ ಇದ್ದು, ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೇರಳವಾದ ನ್ಯೂಟ್ರೀಶನ್ ಒದಗಿಸುತ್ತದೆ.
- ಒಂದು ಕಟ್ಟು ಹರಿವೆ ಸೊಪ್ಪಿನಲ್ಲಿ 30ರಷ್ಟು ಕ್ಯಾಲೋರಿ ಇರುತ್ತದೆ. ಕೊಬ್ಬನ್ನು ಕರಗಿಸಬಲ್ಲ ಈ ಸೊಪ್ಪು ತೂಕ ಕಡಿಮೆ ಮಾಡಿಕೊಳ್ಳಲು ಇದು ನೆರವಾಗುತ್ತದೆ.
- ರಕ್ತದಲ್ಲಿ ಜೀವಕೋಶ ಹೆಚ್ಚಲು ಕಬ್ಬಿಣಾಂಶ ಬಹಳ ಮುಖ್ಯ. ಇದು ಹರಿವೆ ಸೊಪ್ಪಿನಲ್ಲಿ ಹೇರಳವಾಗಿದೆ. ಪ್ರತೀ ದಿನ ಈ ಸೊಪ್ಪು ಸೇವಿಸುವುದರಿಂದ ಅನಿಮಿಯಾದಿಂದ ಮುಕ್ತರಾಗಬಹುದು.
- ಡಯೆಟನಲ್ಲಿ ದಿನ ಹರಿವೆ ಸೊಪ್ಪನ್ನು ಸೇರಿಸಿಕೊಳ್ಳುವುದರಿಂದ ದೇಹಕ್ಕೆ ವಿಟಮಿನ್ ಸಿ ಸಿಗುತ್ತದೆ. ಜೊತೆಗೆ ಇನ್ಫೆಕ್ಷನ್ಗೆ ಹಾಗೂ ಗಾಯಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ.
- ರಕ್ತದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಶಕ್ತಿ ಈ ಹರಿವೆ ಸೊಪ್ಪಿನಲ್ಲಿದೆ. ಫೈಬರ್ ಹೆಚ್ಚಿನ ಪ್ರಮಾಣದಲ್ಲಿದ್ದು, ಇದನ್ನು ದೈನಂದಿನ ಆಹಾರ ಪದಾರ್ಥಗಳಲ್ಲಿ ಸೇವಿಸಿದರೆ ಒಳ್ಳೆಯ ರಿಸಲ್ಟ್ ಪಡೆಯಬಹುದು.
- ಟೈಪ್ 2 ಡಯಾಬಿಟಿಸ್ ಹೊಂದಿರುವವರಿಗೆ ರಕ್ತದಲ್ಲಿನ ಶುಗರ್ ಕಡಿಮೆ ಮಾಡುತ್ತದೆ. ಜೊತೆಗೆ ಇದರ ಎಲೆಗಳಲ್ಲಿ ಪ್ರೋಟೀನ್ ಹೆಚ್ಚಿದ್ದು ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
- ಹರಿವೆ ಸೊಪ್ಪಿನ ಬೀಜದಿಂದಲೂ ಆರೋಗ್ಯ ಸದೃಢವಾಗಿಟ್ಟುಕೊಳ್ಳಬಹುದು. ಹೌದು ಇದರ ಬೀಜದಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೇರಳವಾಗಿದ್ದು, ಮೂಳೆ ಬಲಿಷ್ಠವಾಗಿರುವಂತೆ ನೋಡಿಕೊಳ್ಳುತ್ತದೆ.