ಸೆಕ್ಸ್ ಎನ್ನುವುದು ಸುಖದ ಪರಾಕಾಷ್ಠೆ ನೀಡುವಂತಹದ್ದು. ವಿವಾಹಿತರು ಪ್ರತಿನಿತ್ಯ ಅಥವಾ ತಮ್ಮ ಅನುಕೂಲಕ್ಕೆ ಅನುಗುಣವಾಗಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು. ಸೆಕ್ಸ್ ಬಗ್ಗೆ ಪ್ರತಿಯೊಬ್ಬರಿಗೂ ಎಲ್ಲಾ ವಿಚಾರಗಳು ತಿಳಿದಿರುವುದಿಲ್ಲ. ಇದು ಅನುಭವದಿಂದ ಬರುವುದು. ನೀವು ಅನುಭವಿಯಾಗಿದ್ದರೂ ಅಥವಾ ಮೊದಲ ಸಲ ಸೆಕ್ಸ್ ನಡೆಸುತ್ತಿದ್ದರೂ ಕೆಲವೊಂದು ವಿಚಾರಗಳನ್ನು ನೀವು ತುಂಬಾ ಗಂಭೀರವಾಗಿ ಪರಿಗಣಿಸಬೇಕು.
ನೀವು ಹಾಸಿಗೆಯಲ್ಲಿದ್ದಾಗ, ಲೈಂಗಿಕತೆಯನ್ನು ಹೊಂದುವಾಗ ನಿಮ್ಮ ಎಲ್ಲಾ ರೀತಿಯ ವರ್ತನೆ ಸರಿಯಾಗಿರಬೇಕು. ಆಗ ಮಾತ್ರ ಲೈಂಗಿಕ ಕ್ರಿಯೆ ಅರ್ಥಪೂರ್ಣವಾಗಿದ್ದು, ಖುಷಿಯನ್ನು ನೀಡಲು ಸಾಧ್ಯ. ಮಾನಸಿಕವಾಗಿ ಸಿದ್ಧರಿಲ್ಲದೆ ಬಲವಂತವಾಗಿ ತೊಡಗಿಕೊಳ್ಳುವ ಲೈಂಗಿಕ ಕ್ರಿಯೆ ಶಿಕ್ಷೆಯಂತೆ ಭಾಸವಾಗುತ್ತದೆ. ಅದರಲ್ಲೂ ಹಾಸಿಗೆಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾಗ ನೀವು ಈ ಕೆಲವು ತಪ್ಪುಗಳನ್ನು ಮಾಡಲೇಬಾರದು.
ಭಾವನಾತ್ಮಕ ಸಂಬಂಧ ಉತ್ತಮವಾಗಿರಲಿ: ಹಾಸಿಗೆಯಲ್ಲಿ, ನೀವು ಮಾಡುತ್ತಿರುವ ಚಲನೆಗಳು ಸರಿಯಾಗಿವೆ ಮತ್ತು ಪರಿಪೂರ್ಣವೆಂದು ಎಂದಿಗೂ ಊಹಿಸಬೇಡಿ. ನಿಮ್ಮ ಸಂಗಾತಿಗೆ ಏನು ಬೇಕು, ಏನು ಮಾಡಿದರೆ ಇಷ್ಟ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಅದು ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಅಸಮಾಧಾನವನ್ನು ಮಧ್ಯೆ ತರಬೇಡಿ: ಪ್ರತಿ ದಿನ ಒಂದೇ ರೀತಿ ಇರುವುದಿಲ್ಲ. ನೀವು ಈ ದಿನ ಸಂಪೂರ್ಣ ನಿರಾಶೆ, ಸೋಲು, ದುಃಖವನ್ನು ಅನುಭವಿಸರಬಹುದು. ಆದರೆ ಈ ಹತಾಶೆಯನ್ನು ಹಾಸಿಗೆಯ ವರೆಗೆ ತರಬೇಡಿ. ನೀವು ಮಲಗಲು ಬಂದಾಗ, ಎಲ್ಲಾ ನಕಾರಾತ್ಮಕತೆಯನ್ನು ತೊಡೆದುಹಾಕಿ ಮತ್ತು ನಿಮ್ಮ ಹಾಸಿಗೆ ಧನಾತ್ಮಕ ಸ್ಥಳವಾಗಿರಲಿ, ಅದು ನಿಮ್ಮಿಬ್ಬರಿಗೂ ಮಾತ್ರ. ನೀವು ಅಸಮಾಧಾನಗೊಂಡಿದ್ದರೆ, ಇನ್ನೊಂದು ಕೋಣೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಅದರ ಬಗ್ಗೆ ಮಾತನಾಡಿ ಮತ್ತು ನಿಮ್ಮ ಸಮಸ್ಯೆಗಳನ್ನು ಪರಿಹರಿಸದ ನಂತರವಷ್ಟೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಿ
ಸಂಭೋಗಿಸಲು ಒತ್ತಡವನ್ನು ಅನುಭವಿಸಬೇಡಿ: ದಂಪತಿಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ಇಬ್ಬರಲ್ಲಿ ಯಾರಾದರೂ ಕೆಲವೊಮ್ಮೆ ತಮ್ಮ ಸಂಗಾತಿಯು ಹಾಸಿಗೆಯಲ್ಲಿ ಏನು ಮಾಡುತ್ತಿದ್ದಾರೋ ಅದು ಸರಿ ಎಂದು ನಟಿಸುತ್ತಾರೆ. ಅವರು ಮಾಡುವ ಮನಸ್ಥಿತಿಯಲ್ಲಿ ಇಲ್ಲದಿದ್ದರೂ, ಅವರು ಅದನ್ನು ಮಾಡುತ್ತಾರೆ, ಅದು ಅವರನ್ನು ಪ್ರಚೋದಿಸುತ್ತದೆ ಮತ್ತು ಅಂತಿಮವಾಗಿ ಅದು ಜಗಳಕ್ಕೆ ಕಾರಣವಾಗಬಹುದು. ಸಂಭೋಗವಿಲ್ಲದೆ ಭೌತಿಕ ದೇಹವನ್ನು ಪ್ರಶಂಸಿಸಲು, 10 ರಿಂದ 15 ನಿಮಿಷಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಅದು ಬಹಳ ಮುಖ್ಯ. ಮನಸ್ಸು ಒಪ್ಪಿಗೆಯ ಸ್ಥಿತಿಯಲ್ಲಿದ್ದಾಗ ಮಾತ್ರ ಸಂಭೋದಲ್ಲಿ ತೊಡಗಿಸಿಕೊಳ್ಳಿ.
ಸಂಗಾತಿಯ ದೇಹವನ್ನು ಟೀಕಿಸಬೇಡಿ: ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ. ಆದರೆ ಪ್ರತಿ ದೇಹದ ರೂಪವೂ ತನ್ನದೇ ರೀತಿಯಲ್ಲಿ ಸುಂದರವಾಗಿದೆ. ಸಂಗಾತಿ ತೆಳ್ಳಗೆ, ದಪ್ಪ, ಕುಳ್ಳಗೆ, ಕಪ್ಪು ಇರುವ ಬಗ್ಗೆ ಹಾಸಿಗೆಯಲ್ಲಿರುವಾಗ ಟೀಕಿಸಬೇಡಿ. ಅವರ ದೇಹದಲ್ಲಿರುವ ಗುರುರುಗಳು, ಮಚ್ಚೆಗಳನ್ನು ಹಂಗಿಸಬೇಡಿ. ಇದು ನಿಮ್ಮ ಸಂಗಾತಿಯ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ನಾವು ಬೆತ್ತಲೆಯಾಗಿದ್ದಾಗ ನಾವು ಹೆಚ್ಚು ದುರ್ಬಲರಾಗಿದ್ದೇವೆ.!
ಮಾಜಿ ಬಾಯ್ಫ್ರೆಂಡ್, ಗರ್ಲ್ಫ್ರೆಂಡ್ ಬಗ್ಗೆ ಮಾತನಾಡಬೇಡಿ: ಬೆಡ್ನಲ್ಲಿದ್ದಾಗ ಯಾವಾಗಲೂ ಖುಷಿಯ ವಿಚಾರವನ್ನಷ್ಟೇ ಮಾತನಾಡಿ. ಸಂಗಾತಿಯ ಜೊತೆ ಖುಷಿಯಾಗಿ ಕಳೆದಿರುವ ಹಿಂದಿನ ಕ್ಷಣಗಳನ್ನು ನೆನಪಿಸಿ ಅವರನ್ನು ರೋಮಾಂಚನಗೊಳಿಸಿ. ಬದಲಿಗೆ ಅವರಿಗೆ ಇಷ್ಟವಿಲ್ಲದ ವಿಚಾರಗಳ ಬಗ್ಗೆ ಮಾತನಾಡಲು ಹೋಗಬೇಡಿ. ಮಾಜಿ ಗರ್ಲ್ಫ್ರೆಂಡ್, ಬಾಯ್ ಫ್ರೆಂಡ್ ಬಗ್ಗೆಯಂತೂ ಅಪ್ಪಿ ತಪ್ಪಿಯೂ ಮಾತನಾಡಬೇಡಿ. ಇದು ನಿಮ್ಮ ರೊಮ್ಯಾಂಟಿಕ್ ಕ್ಷಣವನ್ನು ಹಾಳು ಮಾಡಬಹುದು.