ಪ್ಯಾರಿಸ್: ಪ್ರಸ್ತುತ ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 3ನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶೂಟರ್ ರುಬಿನಾ ಫ್ರಾನ್ಸಿಸ್ ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಇದು ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸಿದ 5ನೇ ಪದಕವಾಗಿದೆ.
22 ಶಾಟ್ಗಳ ಬಳಿಕ 211.1 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದ ರುಬಿನಾ ಬೆಳ್ಳಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದ್ರೆ, ಟರ್ಕಿಯ ಐಸೆಲ್ ಓಜ್ಗಾನ್, ರುಬಿನಾರನ್ನು ಹಿಂದಿಕ್ಕಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅಂತಿಮವಾಗಿ ರುಬಿನಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
Nitin Gadkari: ರಸ್ತೆ ಅಪಘಾತಗಳಿಗೆ ಇಂಜಿನಿಯರ್ʼಗಳೇ ಪ್ರಮುಖ ಕಾರಣ: ಸಚಿವ ನಿತಿನ್ ಗಡ್ಕರಿ
ಇರಾನ್ನ ಸರೆಹ್ ಜವನ್ಮಾರ್ಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇನ್ನೂ ಭಾರತೀಯ ಬಿಲ್ಲುಗಾರ್ತಿ ಶೀತಲ್ ದೇವಿ ಕೂಡ ಆಕ್ಷನ್ನಲ್ಲಿದ್ದಾರೆ. ಗುರುವಾರ ನಡೆದ ಆರ್ಮ್ಲೆಸ್ ಬಿಲ್ಲುಗಾರ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ 2ನೇ ಸ್ಥಾನ ಗಳಿಸಿರುವ ಶೀತಲ್ ದೇವಿ ನೇರವಾಗಿ 16ನೇ ಸುತ್ತಿಗೆ ಪ್ರವೇಶಿಸಿದ್ದಾರೆ.