ದೇಶದಲ್ಲಿ ಹಬ್ಬದ ಸೀಸನ್ ಶುರುವಾಗಿದ್ದು, ಮುಂಬರುವ ತಿಂಗಳು ಅಂದರೆ, ಸೆಪ್ಟೆಂಬರ್ನಲ್ಲಂತೂ ಒಂದರ ಹಿಂದೊಂದು ಹಬ್ಬಗಳಿವೆ. ಹೀಗಾಗಿ ಬ್ಯಾಂಕುಗಳಿಗೆ ಸಾಲುಸಾಲು ರಜೆಗಳಿದ್ದು, ಬ್ಯಾಂಕಿಂಗ್ ಕೆಲಸಗಳ ಮೇಲೆ ಪರಿಣಾಮ ಬೀರಲಿದೆ. ರಿಸರ್ವ್ ಬ್ಯಾಂಕ್ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲಿವೆ. ಅಂದರೆ ಸುಮಾರು ಅರ್ಧ ತಿಂಗಳ ಕಾಲ ಬ್ಯಾಂಕ್ಗಳಿಗೆ ರಜೆ ಇರಲಿದೆ.
Nitin Gadkari: ರಸ್ತೆ ಅಪಘಾತಗಳಿಗೆ ಇಂಜಿನಿಯರ್ʼಗಳೇ ಪ್ರಮುಖ ಕಾರಣ: ಸಚಿವ ನಿತಿನ್ ಗಡ್ಕರಿ
ನಮ್ಮ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ. ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ (15 ಆಗಸ್ಟ್) ಮತ್ತು ಗಾಂಧಿ ಜಯಂತಿ (2 ಅಕ್ಟೋಬರ್) ರಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದಲ್ಲದೇ ಹೋಳಿ, ದೀಪಾವಳಿ, ಕ್ರಿಸ್ಮಸ್, ಈದ್, ನಾನಕ್ ಜಯಂತಿ, ಗುಡ್ ಫ್ರೈಡೇ ಸೇರಿದಂತೆ ಬಹುತೇಕ ಹಬ್ಬಗಳ ದಿನದಂದು ಮುಚ್ಚಿರುತ್ತವೆ. ಹಾಗಂತ ಎಲ್ಲಾ ಹಬ್ಬಕ್ಕೂ ರಜೆ ಇರಲ್ಲ. ಹಬ್ಬದ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುತ್ತವೆ. ಇದೆಲ್ಲದರ ಜೊತೆಯಲ್ಲಿ ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸಹ ಬ್ಯಾಂಕ್ಗಳು ಮುಚ್ಚಿರುತ್ತವೆ.
ಸೆಪ್ಟೆಂಬರ್ ಬ್ಯಾಂಕ್ ರಜೆಗಳು
ಸೆಪ್ಟೆಂಬರ್ 1, 2024 – ಭಾನುವಾರ
ಸೆಪ್ಟೆಂಬರ್ 4, 2024 – ಶ್ರೀಮಂತ ಶಂಕರದೇವ್ ತಿರೋಭವ ತಿಥಿ (ಗುವಾಹಟಿ)
ಸೆಪ್ಟೆಂಬರ್ 7, 2024 – ಗಣೇಶ ಚತುರ್ಥಿ
ಸೆಪ್ಟೆಂಬರ್ 8, 2024 – ಭಾನುವಾರ
ಸೆಪ್ಟೆಂಬರ್ 14, 2024 – ಎರಡನೇ ಶನಿವಾರ
ಸೆಪ್ಟೆಂಬರ್ 15, 2024 – ಭಾನುವಾರ
ಸೆಪ್ಟೆಂಬರ್ 16, 2024 – ಬರವಾಫತ್
ಸೆಪ್ಟೆಂಬರ್ 17, 2024 – ಮಿಲಾದ್-ಉನ್-ನಬಿ(ಗ್ಯಾಂಗ್ಟಾಕ್)
ಸೆಪ್ಟೆಂಬರ್ 18, 2024 – ಪಾಂಗ್-ಲಹಬ್ಸೋಲ್ (ಗ್ಯಾಂಗ್ಟಾಕ್)
ಸೆಪ್ಟೆಂಬರ್ 20, 2024 – ಈದ್-ಎ-ಮಿಲಾದ್-ಉಲ್-ನಬಿ (ಜೆಕೆ)
ಸೆಪ್ಟೆಂಬರ್ 21, 2024 – ಶ್ರೀ ನಾರಾಯಣ ಗುರು ಸಮಾಧಿ ದಿನ
ಸೆಪ್ಟೆಂಬರ್ 22, 2024 – ಭಾನುವಾರ
ಸೆಪ್ಟೆಂಬರ್ 23, 2024 – ಮಹಾರಾಜ ಹರಿ ಸಿಂಗ್ (JK) ಜನ್ಮ ವಾರ್ಷಿಕೋತ್ಸವ
ಸೆಪ್ಟೆಂಬರ್ 28, 2024 – ನಾಲ್ಕನೇ ಶನಿವಾರ
ಸೆಪ್ಟೆಂಬರ್ 29, 2024 – ಭಾನುವಾರ
ಸೆಪ್ಟೆಂಬರ್ ತಿಂಗಳಲ್ಲಿ 15 ದಿನ ರಜೆಗಳಿದ್ದರೂ ಗ್ರಾಹಕರು ಆನ್ಲೈನ್ ಮೂಲಕ ವ್ಯವಹಾರ ನಡೆಸಬಹುದು. ಹಣ ಬೇಕಿದ್ದರೆ ಎಟಿಎಂ ಮೂಲಕ ಡ್ರಾ ಮಾಡಿಕೊಳ್ಳಬಹುದು. ಹಾಗಾಗಿ ಕ್ಯಾಶ್ ಸಮಸ್ಯೆ ಉಂಟಾಗಲ್ಲ. ರಜೆದಿನಗಳಲ್ಲಿಯೂ ಆನ್ಲೈನ್ ವ್ಯವಹಾರ ನಡೆಸಬಹುದು. ಎಟಿಎಂಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.