ಹುಬ್ಬಳ್ಳಿ: ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಅಂಗವಾಗಿ ಇಲ್ಲಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸೆ. 2ರಂದು ಬೆಳಗ್ಗೆ 9 ಗಂಟೆಗೆ ನೇತ್ರದಾನ ನಡಿಗೆ (ವಾಕ್ ಥಾನ್) ಏರ್ಪಡಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ ತಿಳಿಸಿದರು.
ಕುಂದಾನಗರಿ ಬೆಳಗಾವಿಯಲ್ಲಿ ಡ್ರಗ್ಸ್ ಹಾವಳಿ: 6 ತಿಂಗಳಲ್ಲಿ ಜಪ್ತಿಯಾದ ಗಾಂಜಾ ಎಷ್ಟು ಗೊತ್ತಾ!?
ನಗರದಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಕಿಮ್ಸ್ ಆವರಣದಿಂದ ಜಾಥಾ ಆರಂಭವಾಗಿ ಹೊಸೂರ ಸರ್ಕಲ್ ಮುಖಾಂತರ ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹಾಗೂ ಕಿಮ್ಸ್ ನಿರ್ದೇಶಕ ಎಸ್.ಎಫ್. ಕಮ್ಮಾರ ಜಾಥಾಕ್ಕೆ ಚಾಲನೆ ನೀಡುವರು ಎಂದರು.
ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಮೂಢನಂಬಿಕೆಗಳು ಇವೆ. ಅವುಗಳನ್ನು ಹೋಗಲಾಡಿಸಬೇಕು. ಹೆಚ್ಚು ಜನರ ನೇತ್ರದಾನದ ವಾಗ್ದಾನ ಮಾಡಬೇಕು. ಅಲ್ಲದೇ ಯಾವುದೇ ವ್ಯಕ್ತಿ ನಿಧನರಾದಾಗ ಅವರ ಕುಟುಂಬದವರು ನೇತ್ರದಾನ ಮಾಡಲು ನಿರ್ಧಾರ ಕೈಗೊಳ್ಳಬೇಕು. ಇದರಿಂದ ದೃಷ್ಟಿಗಾಗಿ ಕಾಯುತ್ತಿರುವ ಲಾಂತರ ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಜಾಥಾದಲ್ಲಿ ಅರಿವು ಮೂಡಿಸಲಾಗುವುದು. ಐದು ನೂರಕ್ಕೂ ಹೆಚ್ಚು ಜನರು ಜಾಥಾದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.
ನೇತ್ರದಾನ ಪಾಕ್ಷಿಕ ಸಮಾರೋಪ ಸಮಾರಂಭ ಎಂ.ಎಂ. ಜೋಶಿ ಆಸ್ಪತ್ರೆಯಲ್ಲಿ ಸೆ. 4ರಂದು ಸಂಜೆ 5ಕ್ಕೆ ನಡೆಯಲಿದೆ. ಡಾ. ಕಾರ್ತಿಕ ಹೆಗಡೆಕಟ್ಟೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಿರ್ದೇಶಕ ಡಾ. ಗುರುಪ್ರಸಾದ, ಕಾನಿರ್ಯಾ ಅಂಧತ್ವ ನಿವಾರಣೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೇತ್ರದಾನ ಮಾಡಬೇಕು. ನೇತ್ರದಾನಕ್ಕೆ ವಾಗ್ದಾನ ಮಾಡುವ ಜತೆಗೆ ಜನರನ್ನು ಮನವೊಲಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಡಾ. ಅನಿಕೇತ ಶಾಸ್ತ್ರಿ, ಕುತುಬುದಿನ್ ಮುಲ್ಲಾ ಗೋಷ್ಠಿಯಲ್ಲಿದ್ದರು.