ಹುಬ್ಬಳ್ಳಿ:- ಕೊಲೆ ಪ್ರಕರಣದಲ್ಲಿ ನಟ ದರ್ಶನ್ ರನ್ನು ಬಂಧಿಸಿ ಕಾನೂನಿನಲ್ಲಿ ಎಲ್ಲರೂ ಒಂದೇ ಎಂದು ತೋರಿಸಿಕೊಟ್ಟ ACP ಚಂದನ್ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
Crime News: Sorry Mom, ತಾಯಿ ಕೊಂದು ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ ಮಗ!
ಕೆಪಿಎಸ್ಸಿ ಪರೀಕ್ಷಾರ್ಥಿಗಳ ವಿರುದ್ಧ ದರ್ಪ ತೊರುತ್ತಿದ್ದಾರೆ ಎಂದು ಎಸಿಪಿ ಚಂದನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗಾಗಿ ಸರ್ಕಾರಿ ರಜಾ ದಿನ ಹೊರತು ಬೇರೆ ದಿನ ಪರೀಕ್ಷೆ ನಡೆಸಿದ್ದ ಕಾರಣ ಪ್ರತಿಭಟಿಸುತ್ತಿದ್ದ ಪರೀಕ್ಷಾರ್ಥಿಗಳ ವಿರುದ್ಧ ಶಾಸಕ ಧೀರಜ್ ಮುನಿರಾಜು ಎದುರಲ್ಲೆ ಪರೀಕ್ಷಾರ್ಥಿಗಳ ಮೇಲೆ ದರ್ಪ ತೊರಿ ಸಮಾಜದಲ್ಲಿ ಹೀರೋ ತರ ಆಡುತ್ತಿದ್ದಾನೆ ಎಂದು ಎಸಿಪಿ ಚಂದನ್ ವಿರುದ್ದ ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಎಸಿಪಿ ಚಂದನ್ ಏನಂತ ತಿಳಿದುಕೊಂಡಿದ್ದಾರೆ.? ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ ಅಧಿಕಾರಿಗಳು ಕಾನೂನು, ನ್ಯಾಯಾಲಯ ಹಾಗೂ ಪ್ರಜಾಪ್ರಭುತ್ವದ ಆಶಯದಂತೆ ನಡೆದುಕೊಳ್ಳಬೇಕೆ ಹೊರತು ಸಮಾಜದಲ್ಲಿ ಹೀರೋ ಆಗುವುದಕ್ಕೆ ಪರೀಕ್ಷಾರ್ಥಿಗಳ ವಿರುದ್ಧ ದರ್ಪ ತೊರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆಯೋಗವು ಆಗಸ್ಟ್ 27ರ ಬುಧುವಾರ ಪರೀಕ್ಷೆ ನಡೆಸಲು ನಿರ್ಧರಿಸಿದ್ದರಿಂದ, ರಜಾದಿನಗಳಲ್ಲಿ ಪರೀಕ್ಷೆ ನಡೆಸಲು ಆಗ್ರಹಿಸುವುದರೊಂದಿಗೆ, ಪ್ರಶ್ನೆ ಪತ್ರಿಕೆಯನ್ನು ನಿಯಮಾನುಸಾರ ಒಂದು ವಾರಗಳ ಮುಂಚೆ ಮುದ್ರಿಸಬೇಕಿತ್ತು, ಆದರೆ ಆಯೋಗವು ಒಂದು ತಿಂಗಳ ಮುಂಚೆಯೇ ಮುದ್ರಿಸಿದ್ದ ಕಾರಣ ಸೋರಿಕೆಯಾಗುವ ಸಾಧ್ಯತೆಗಳು ಹೆಚ್ಚು ಎಂದು ಆಯೋಗದ ವಿರುದ್ಧ ಪರೀಕ್ಷಾರ್ಥಿಗಳು ಶಾಂತವಾಗಿ ಪ್ರತಿಭಟಿಸುತ್ತಿದ್ದರು.
ಶಾಂತವಾಗಿ ಪ್ರತಿಭಟಿಸುತ್ತಿದ್ದ ಪರೀಕ್ಷಾರ್ಥಿಗಳ ಮೇಲೆ ಪೊಲೀಸರು ಏಕಾ ಏಕಿ ದಾಳಿ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುವುದರೊಂದಿಗೆ, ಪರೀಕ್ಷಾರ್ಥಿಗಳನ್ನು ಇಡೀ ದಿನ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ. ಜೊತೆಗೆ ಪರೀಕ್ಷಾರ್ಥಿಗಳ ಪರವಾಗಿ ಬಂದಂತಹ ಶಾಸಕ ಧೀರಜ್ ಮುನಿರಾಜೂ ಸೇರಿದ್ದಂತೆ ಹಲವರನ್ನೂ ಯಾವುದೇ ಆಗ್ರಹಗಳನ್ನು ಕೇಳದೆ ದರ್ಪ ತೋರಿ ಹೊರ ಹಾಕುತ್ತಾರೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ತೆಲೆಗೆ ಏಟು ಬಿದ್ದು, ತ್ರೀವ ರಕ್ತಸ್ತ್ರಾವವಾದರೂ ಪೊಲೀಸರು ಪರೀಕ್ಷಾರ್ಥಿಗಳ ಮೇಲಿನ ದರ್ಪ ಮುಂದುವರೆಸಿದ್ದಾರೆ.
ದರ್ಶನ್ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದೆ ಆದರಂತೆ ದರ್ಶರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವ ಮೂಲಕ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಆದೇ ರೀತಿ ಕೆಪಿಎಸ್ಸಿ ವಿರುದ್ಧ ಪ್ರತಿಭಟಿಸುತ್ತಿರುವ ಪರೀಕ್ಷಾರ್ಥಿಗಳ ಮೇಲೆ ದರ್ಪ ತೋರುತ್ತಿರುವ ಎಸಿಪಿ ಚಂದನ್ ಮೇಲೂ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಆಗ್ರಹಿಸುತ್ತೆನೆ ಎಂದರು.