ಬೆಂಗಳೂರು:- ನಾಗಸಂದ್ರ ಮೆಟ್ರೋ ಬಳಿಯ ಐಕಿಯಾ ಮಾಲ್ನಲ್ಲಿ ಶಾಪಿಂಗ್ಗೆ ಬಂದಿದ್ದ ವೇಳೆ ಸದಾನಂದ ಗೌಡ ಪತ್ನಿ ಕುಸಿದು ಬಿದ್ದ ಘಟನೆ ಜರುಗಿದೆ.
Breaking News: ಹೆದ್ದಾರಿಯಲ್ಲಿ ದರೋಡೆ; ರೌಡಿಶೀಟರ್ ಕಾಲಿಗೆ ಗುಂಡೇಟು!
ಹಠಾತ್ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಡಾಟಿ ಸದಾನಂದಗೌಡ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಕಾರು ಚಾಲಕ, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಇದೀಗ ವಿಷಯ ತಿಳಿದು ಪತ್ನಿ ನೋಡಲು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿವಿ ಸದಾನಂದಗೌಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ ಎನ್ನಲಾಗಿದೆ.
ಇನ್ನು ಸದಾನಂದಗೌಡ ಜೊತೆಗೆ ದಾಸರಹಳ್ಳಿಯಲ್ಲಿ ಶಾಸಕ ಮುನಿರಾಜು ಹಾಗೂ ಸುಜಾತ ಮುನಿರಾಜು ಕೂಡ ಅಸ್ಪತ್ರೆಗೆ ಆಗಮಿಸಿದ್ದಾರೆ. ಸಧ್ಯ ತೀವ್ರ ನಿಗಾ ಘಟಕದಲ್ಲಿ ಡಾಟಿ ಸದಾನಂದಗೌಡ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.