ಕೋಲಾರ : ಬೆಂಗಳೂರು ಉತ್ತರ ವಿವಿಯ 4ನೇ ವಾರ್ಷಿಕ ಘಟಿಕೋತ್ಸವದಲ್ಲಿ ಜನಪದ ಕಲಾವಿದ ಬಿ ವಿ ವೆಂಕಟಗಿರಿಯಪ್ಪ, ಪ್ರೋ ಕೆ. ಎಸ್ ಅನಂತ ಕೃಷ್ಣ, ಡಿ. ಎ. ಕಲ್ಪಜಾ ಈ ಮೂವರು ಮಂದಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹಲ್ಲೋಟ್ ಪ್ರದಾನ ಮಾಡಲಿದ್ದಾರೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಿರಂಜನ ಅವರು ಹೇಳಿದರು.
ಜಾತಿಯ ಹೆಸರಿನಲ್ಲಿ ರಕ್ಷಣೆ ತೆಗೆದುಕೊಳ್ಳಲು ಹೋಗಬೇಡಿ: ಸಿದ್ಧುಗೆ ಜೋಶಿ ತಿರುಗೇಟು!
ನಗರದ ಹೊರವಲಯದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವ್ರು, ಬೆಂಗಳೂರು ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವವು ಸೋಮವಾರ ಸೆಪ್ಟೆಂಬರ್ 2ರಂದು ಕೋಲಾರದ ನಂದಿನಿ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲು ರಾಜ್ಯದ ರಾಜ್ಯಪಾಲರು ಸೂಚಿಸಿದ್ದಾರೆ ಎಂದರು.
ನಾಟಕ ಹಾಗೂ ಜಾನಪದ ಕ್ಷೇತ್ರದಲ್ಲಿ ಕೋಲಾರ ಜಿಲ್ಲೆಯ ಬಿ ವಿ ಗಿರಿ ವೆಂಕಟಗಿರಿಯಪ್ಪ, ವಾಸ್ತು ಶಿಲ್ಪ ಶಿಕ್ಷಣಕ್ಕೆ ಕೊಡುಗೆಗಾಗಿ ಬೆಂಗಳೂರಿನ ಪ್ರೊಫೆಸರ್ ಕೆಎಸ್ ಅನಂತ ಕೃಷ್ಣ ಹಾಗೂ ವೈದ್ಯಕೀಯ ಹಾಗೂ ಸಮಾಜ ಸೇವಕವಾಗಿ ವೈದೇಹಿ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷೆ ಡಿಎ ಕಲ್ಪಜಾ ಅವರುಗಳಿಗೆ ಗೌರವ ಡಾಕ್ಟರ್ ನೀಡಲಾಗುತ್ತಿದೆ ಎಂದರು.
ಸಪ್ಟೆಂಬರ್ 2 ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ನಾಲ್ಕನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದು, ಡಾ. ಈ ಕೆ. ಈರೇಶಿ ನಿವೃತ್ತ ಪ್ರಾಧ್ಯಾಪಕರು ವಾಣಿಜ್ಯಶಾಸ್ತ್ರ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯ ಇವರು ಘಟಕ ಉತ್ಸವ ಭಾಷಣ ಮಾಡಲಿದ್ದಾರೆ.
ಉನ್ನತ ಶಿಕ್ಷಣ ಸಚಿವರು ಹಾಗೂ ಸಮ ಕುಲಾ ಧಿಪತಿಗಳು ಡಾ. ಎಂ ಸಿ ಸುಧಾಕರ್ ಅವರು ಘಟಿಕೋತ್ಸವದ ಉಪಸ್ಥಿತರು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಪದವಿಗಳಲ್ಲಿ ಮೊದಲ ರ್ಯಾಂಕ್ ಗಳಿಸಿದ 44 ವಿದ್ಯಾರ್ಥಿಗಳಿಗೆ ಕುಲಾಧಿಪತಿಗಳು ಬಂಗಾರದ ಪದಕ ವಿತರಿಸಲಿದ್ದಾರೆ ಎಂದರು.
ಈ ವರ್ಷ ಒಟ್ಟು 29,152 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ, ಪದವಿಯಲ್ಲಿ 20 ಸಾವಿರದ 784 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿಯಲ್ಲಿ 3 ಸಾವಿರ ದ 017, ಬಿ. ಇಡಿ ಮತ್ತು ಬಿ ಪಿ ಇ ಡಿ ನಲ್ಲಿ 1, 813, ಸ್ವಾಯತ್ತ ಕಾಲೇಜು ವಿದ್ಯಾರ್ಥಿಗಳು 3,538 ಪದವಿ ಪಡೆಯಲಿ ದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿವಿಯ ಸಿಂಡಿಕೇಟ್ ಸದಸ್ಯರಾದ ಅರ್ಬಾಜ್ ಪಾಷಾ, ಗೋಪಾಲಗೌಡ, ವೆಂಕಟೇಶಪ್ಪ, ಮತ್ತಿರರು ಇದ್ದರು.