ಕೋಲಾರ:– ಹಿಂದುಳಿದ ಸಮುದಾಯವದರೆಲ್ಲರೂ ಸವಲತ್ತು ಪಡೆದುಕೊಳ್ಳಲು ಬಲಾಢ್ಯ ಸಮುದಾಯಗಳ ವಿರುದ್ಧ ಹೋರಾಟ ಮಾಡುವ ಅನಿರ್ವಾಯತೆ ಸೃಷ್ಟಿಯಾಗಿದೆ. ಇದಕ್ಕೆ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅವ್ರು ಹೇಳಿದರು.
ಜಾತಿಯ ಹೆಸರಿನಲ್ಲಿ ರಕ್ಷಣೆ ತೆಗೆದುಕೊಳ್ಳಲು ಹೋಗಬೇಡಿ: ಸಿದ್ಧುಗೆ ಜೋಶಿ ತಿರುಗೇಟು!
ನಗರದ ಕಾರಂಜಿ ಕಟ್ಟೆಯಲ್ಲಿ ಶ್ರೀ ಧರ್ಮರಾಯಸ್ವಾಮಿ ಸಮುದಾಯ ಭವನ ಉದ್ಘಾಟನಾ ಸಮಾರಂಭ ಹಾಗೂ ಮುಖಂಡರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಲಾಢ್ಯ ಸಮುದಾಯಗಳು ಹಿಂದುಳಿದ ಸಮುದಾಯಗಳನ್ನು ಮತ್ತಷ್ಟು ಶೋಷಣೆ ಮಾಡಲು ಮುಂದಾಗಿದೆ.
ಹಿಂದುಳಿದ ವರ್ಗಗಳಲ್ಲಿ ಬಹುತೇಕ ಸಣ್ಣ ಸಮುದಾಯಗಳು ತೀರ ಹಿಂದಿವೆ. ಇವುಗಳು ಬಲಾಢ್ಯ ಸಮುದಾಯಗಳ ನಡುವೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಕಾಣುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಸಮುದಾಯದವರೆಲ್ಲರೂ ಒಗ್ಗಟ್ಟಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಆದಿಶಕ್ತಿ ಮಹಾ ಸಂಸ್ಥಾನಪೀಠದ ಶ್ರೀ ಪ್ರಣವಾನಂದಪುರಿ ಸ್ವಾಮಿಗಳು, ಮಾಜಿ ವಿಧಾನ ಪರಿಷತ್ ಸದಸ್ಯ ಪಿಆರ್ .ರಮೇಶ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಹಿರಿಯ ತಿಗಳ ಸಮುದಾಯದ ಮುಖಂಡ ಎಲ್.ಎ. ಮಂಜುನಾಥ್, ಸಮಾಜ ಸೇವಕ ಎ. ಶ್ರೀನಿವಾಸ್ ಮುಂತಾದವರು ಇದ್ದರು.