ಕೆ.ಆರ್.ಪುರ: ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳ ವರದಾನ:ಡಾ.ಹೆಚ್ ಎಂ.ಚಂದ್ರಶೇಕರ್
ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳಗಳು ವರದಾನವಾಗಿವೆ.ಉದ್ಯೊಗ ಮೇಳ ಸದುಪಯೋಗಪಡೆದುಕೊಂಡು ಜೀವನ ರೂಪಿಸಿಕೊಳ್ಳಿ ಎಂದು ಸಿಲಿಕಾನ್ ಸಿಟಿ ಕಾಲೇಜು ಅಧ್ಯಕ್ಷ ಡಾ.ಹೆಚ್ ಎಂ.ಚಂದ್ರಶೇಕರ್ ತಿಳಿಸಿದರು.
ಕೆಆರ್ ಪುರದ ಸಿಲಿಕಾನ್ ಸಿಟಿ ಕಾಲೇಜು ಅಟನಾಮಸ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.
ದೇಶದ ಯುವಜನತೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬಂಡವಾಳದ ಕೊರತೆ ಕಾಡುತ್ತಿದೆ. ಸರ್ಕಾರಿ ಉದ್ಯೋಗಗಳು ಗಗನ ಕುಸುಮವಾಗಿವೆ. ಆದ್ದರಿಂದ ಇಂತಹ ಉದ್ಯೋಗ ಮೇಳಗಳು ಪದವೀಧರರಿಗೆ ಸಹಾಯಕವಾಗುತ್ತವೆ ಎಂದರು.
ಪ್ರತಿ ಸರ್ಕಾರಿ ಕಾಲೇಜುಗಳಲ್ಲಿ ಇಂತಹ ಮೇಳಗಳನ್ನು ಆಯೋಜಿಸುವುದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದವಿಯ ಕೊನೆ ಹಂತದಲ್ಲಿರುವಾಗಲೇ ಉದ್ಯೋಗ ದೊರೆಯುತ್ತದೆ. ದೊಡ್ಡ ಕಂಪನಿಗಳಲ್ಲಿ ಉದ್ಯೋಗ ದೊರೆತರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ದೇಶ ವಿದೇಶಗಳಲ್ಲಿ ಸಂಚಾರ ಮಾಡಿದಾಗ ಅಲ್ಲಿನ ಶಿಕ್ಷಣ ಹಾಗೂ ಉದ್ಯೋಗ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಬಂದಿದ್ದೇನೆ, ಶ್ರೀಲಂಕದಲ್ಲಿ ಶಿಕ್ಷಣ ಇದೆ ಆದರೆ ಪ್ಲೇಸ್ ಮೆಂಟ್ ಇಲ್ಲ ಎಂದು ಹೇಳಿದರು.
ನಮ್ಮ ದೇಶದಲ್ಲಿ ಅವಕಾಶಗಳು ಹೆಚ್ಚಾಗಿವೆ. ಅದರ ಸದುಪಯೋಗ ಮಾಡಿಕೊಳ್ಳಿ, ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಪ್ರತೀ ವರ್ಷ ಉದ್ಯೋಗ ಮೇಳ ಆಯೋಜನೆ ಮಾಡುತ್ತಿದ್ದೇವೆ ಎಂದರು.
ಉದ್ಯೋಗ ಮೇಳಕ್ಕೆ ನಲವತ್ತು ಕಂಪನಿಗಳು ಬಂದಿದ್ದು ರೋಟರಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.ಪದವೀಧರ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಿ ಎಂದರು.
ರೋಟರಿ ಬೆಂಗಳೂರು ಮಾನ್ಯತಾ ಅಧ್ಯಕ್ಷ ರೋಟರಿಯನ್ ರವೀಂದ್ರ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಆಯ್ಕೆ ಮಾಡಿಕೊಳ್ಳಿ, ಬಂದಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದರು.
ಉದ್ಯೋಗ ಮೇಳ ಆಯೋಜಕ ಡೆವಲಪ್ಸ್ ಕಂಪನಿ ಸಿಇಒ ತೇಜಸ್ ಗೌಡ, ಕಾಲೇಜಿನ ನಿರ್ದೇಶಕ ಹೆಚ್ .ಎಂ.ಮುಕುಂದ, ರೋಟರಿಯನ್ ಜಗದೀಶ್ ರೆಡ್ಡಿ, ಕಾಲೇಜು ಸಿಇಒ ದನ್ಯತೇಜಸ್, ಸಿಒಒ ಭಾನು ಪ್ರಧ್ಯುನ್ನ, ಎಕ್ಸಾಮಿನೇಷನ್ ಕಂಟ್ರೋಲರ್ ಡಾ.ಆದಿಲಕ್ಷ್ಮಿ, ಪ್ರೊ.ಗುರುಪ್ರಸಾದ್, ಸ್ಟೂಡೆಂಟ್ ಕೌನ್ಸಿಲರ್ ಪ್ರೊ.ಜ್ಯೋತಿ ಗುಪ್ತ ಮತ್ತಿತರರಿದ್ದರು