ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ದಿನ ಕಳೆಯುತ್ತಲೇ ಇದೆ. ಪತಿ ದರ್ಶನ್ ನನ್ನು ಹೊರತರಲು ವಿಜಯಲಕ್ಷ್ಮಿ ಕೂಡ ಸಾಕಷ್ಟು ಕಾನೂನು ಹೋರಾಟ ಮಾಡುತ್ತಲೇ ಇದ್ದಾರೆ. ಇನ್ನು ದರ್ಶನ್ರನ್ನು ಹೊರ ತರುವ ಉದ್ದೇಶದಿಂದ ನ್ಯಾಯಾಲಯ, ಕೇಸ್, ದೇವರು ಹೀಗೆ ಹಲವು ರೀತಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಮೆದುಳಿನ ಕ್ಯಾನ್ಸರ್ ಇದ್ರೆ ಭಯ ಬೇಡ: ರಕ್ತ ಪರೀಕ್ಷೆ ಮೂಲಕ ಗಂಟೆಯೊಳಗೆ ಪತ್ತೆ ಹಚ್ಚಬಹುದು!
ಇನ್ನು ದರ್ಶನ್ ಜೈಲಿಗೆ ಹೋದಾಗಿನಿಂದ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೈಲಿಗೆ ಆಗಾಗ ಆಗಮಿಸುತ್ತಲೇ ಇದ್ದಾರೆ. ಬರುವಾಗ ದೇವರ ಪ್ರಸಾದ, ಹಣ್ಣು ಹೀಗೆ ಏನಾದರೊಂದು ಕೊಟ್ಟು ಹೋಗುತ್ತಾರೆ. ಇನ್ನು ಇತ್ತೀಚೆಗೆ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದಾರೆಂಬ ಆರೋಪದ ಹಿನ್ನೆಲೆ ಇತ್ತೀಚೆಗೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಇದೀಗ ಇಂದು ರಂದು ಮತ್ತೆ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿಯವರು ಬಳ್ಳಾರಿ ಜೈಲಿಗೆ ಮೊದಲ ಬಾರಿಗೆ ಭೇಟಿ ಮಾಡಲು ಬಂದಿದ್ದಾರೆ. ಇಂದು ಬಳ್ಳಾರಿ ಜೈಲಿಗೆ ಬಂದು ಪತಿಯನ್ನು ಭೇಟಿಯಾಗಲು ವಿಜಯಲಕ್ಷ್ಮಿ ಬಂದಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ದರ್ಶನ್ ಆಪ್ತ ಆಗಮಿಸಿದ್ದಾರೆ. ಇನ್ನು ಬರುವಾಗ ಡ್ರೈ ಪ್ರೂಟ್ಸ್ ಹಾಗೂ ಬ್ಯಾಗ್ ಒಂದನ್ನು ಸಹ ತಂದಿದ್ದರು.
ಇದನ್ನು ನೋಡಿ ಜೈಲು ಸಿಬ್ಬಂದಿಗಳು ಪರಿಶೀಲಿಸಿದ್ದು, ಬ್ಯಾಗ್ನಲ್ಲಿ ಬಟ್ಟೆ ಇರುವುದಾಗಿ ವರದಿಯಾಗಿದೆ. ಇನ್ನು ನಟ ದರ್ಶನ್ ಅವರು ಜೈಲಿಗೆ ಹೋದ ನಂತರ ವಿಜಯಲಕ್ಷ್ಮಿಯವರು ಸತತ 9ನೇ ಬಾರಿ ಭೇಟಿಗೆ ಆಗಮಿಸಿದ್ದಾರೆ.
ಇನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ 3 ದಿನ ಕಳೆಯುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಭೇಟಿಗೆ ಆಗಮಿಸಿದ್ದಾರೆ. ಇನ್ನು ಈ ಬ್ಯಾಗ್ನಲ್ಲಿ ಬೆಂಗಳೂರಿನಿಂದ ಡ್ರೈಫ್ರೂಟ್ಸ್, ಹಣ್ಣು-ಹಂಪಲು, ಬಟ್ಟೆಯನ್ನ ತೆಗೆದುಕೊಂಡು ಬಂದಿದ್ದು, ಈ ವೇಳೆ ದರ್ಶನ್ ಅವರನ್ನು ನೋಡಿ ಪತ್ನಿ ವಿಜಯಲಕ್ಷ್ಮಿ ಭಾವುಕರಾಗಿದ್ದಾರೆ ಎಂದು ಹೇಳಲಾಗಿದೆ.