ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ವೈದ್ಯಕೀಯ ಅಧೀಕ್ಷಕರ ಕಚೇರಿ ಕೆ.ಸಿ ಜನರಲ್ ಆಸ್ಪತ್ರೆಯು ತನ್ನಲ್ಲಿ ಖಾಲಿ ಇರುವ ಹಲವು ಉದ್ಯೋಗಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!
ಮಲ್ಲೇಶ್ವರಂನ ವೈದ್ಯಕೀಯ ಅಧೀಕ್ಷಕರ ಕಚೇರಿ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಅನುಭವಿ ಲೆಕ್ಕಪತ್ರ ಸಹಾಯಕರು, ಕ್ಷ- ಕಿರಣ ತಜ್ಞರು, ಪ್ರಯೋಗ ಶಾಲಾ ತಜ್ಞರು, ಕಾನೂನು ಸಲಹೆಗಾರರು, ಕಂಪ್ಯೂಟರ್ ಆಪರೇಟರ್ ಹಾಗೂ ನೇತ್ರ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಇನ್ನು ಈ ಹುದ್ದೆಗಳಿಗೆ ಬೇಕಾದ ವಯೋಮಿತಿ, ಅನುಭವ, ವಿದ್ಯಾರ್ಹತೆ, ವಯಸ್ಸು ಇತ್ಯಾದಿಗಳನ್ನು ಈ ಕೆಳಗೆ ನೀಡಲಾಗಿದೆ.
ಅನುಭವಿ ಲೆಕ್ಕಪತ್ರ ಸಹಾಯಕರು- 2
ಕಾನೂನು ಸಲಹೆಗಾರರು- 1
ಪ್ರಯೋಗ ಶಾಲಾ ತಜ್ಞರು- 2
ಕ್ಪ-ಕಿರಣ ತಜ್ಞರು- 1
ನೇತ್ರಸಹಾಯಕರು- 2
ಫಾರ್ಮಸಿಸ್ಟ್- 1
ಪ್ರೋಗ್ರಾಮರ್- 1
ಗಣಕ ಯಂತ್ರ- 3
ಉದ್ಯೋಗ ಸ್ಥಳ ಮಾಡುವ ಬೆಂಗಳೂರು ಆಗಿದ್ದು ಒಟ್ಟು ಹುದ್ದೆಗಳು 13 ಆಗಿವೆ.
ವಿದ್ಯಾರ್ಹತೆ: ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೋಮಾ, ಬಿಫಾರ್ಮ್, ಕಾನೂನು ಪದವಿ, ಬಿಇ, ಬಿಟೆಕ್, ಬಿಸಿಎ ಪಡೆದಿರಬೇಕು. ಅಲ್ಲದೇ ಬೇಸಿಕ್ ಕಂಪ್ಯೂಟರ್ ಜ್ಞಾನ ಇರಬೇಕು.
ವಯಸ್ಸಿನ ಮಿತಿ: 40 ವರ್ಷದ ಒಳಗಿನವರಿಗೆ ಅವಕಾಶ
ಸ್ಯಾಲರಿ: ಆ ಹುದ್ದೆಗಳಿಗೆ ಅನುಸಾರ ಸಂಬಳ ಇರುತ್ತದೆ (₹12 ಸಾವಿರದಿಂದ ₹25 ಸಾವಿರವರೆಗೆ ಇದೆ)
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?
ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಇದೇ ಸೆಪ್ಟೆಂಬರ್ 05 ರಂದು ನಡೆಯುವ ಸಂದರ್ಶನದಲ್ಲಿ ಮೂಲ ದಾಖಲೆಗಳೊಂದಿಗೆ ಹಾಜರಾಗಬಹುದು. ಆರೋಗ್ಯ ರಕ್ಷಾ ಸಮಿತಿಯ ಗೌರವಧನ ಆಧಾರದ ಮೇಲೆ ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಇಂಟರ್ವ್ಯೂವ್ ಸ್ಥಳ-
DNB ಸೆಮಿನಾರ್ ಹಾಲ್, DNB ಬ್ಲಾಕ್, ಕೆ.ಸಿ ಸಾರ್ವಜನಿಕ ಆಸ್ಪತ್ರೆ, ಮಲ್ಲೇಶ್ವರಂ, ಬೆಂಗಳೂರು.