ವೆಸ್ಟ್ ಇಂಡೀಸ್ ತಂಡದ ಹಿರಿಯ ವೇಗಿ ಶನಾನ್ ಗೇಬ್ರಿಯಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ 12 ವರ್ಷಗಳ ಇಂಟರ್ನ್ಯಾಷನಲ್ ಕ್ರಿಕೆಟ್ ವೃತ್ತಿ ಜೀವನಕ್ಕೆ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ.
“ಕಳೆದ 12 ವರ್ಷಗಳ ಕಾಲ ವೆಸ್ಟ್ ಇಂಡೀಸ್ ಪರ ಇಂಟರ್ನ್ಯಾಷನಲ್ ಕ್ರಿಕೆಟ್ ಆಡಲು ನನ್ನನು ಅರ್ಪಿಸಿಕೊಂಡಿದ್ದೇನೆ. ನಾನು ತುಂಬಾ ಇಷ್ಟಪಡುವ ಆಟವನ್ನು ಅಗ್ರ ದರ್ಜೆಯಲ್ಲಿ ಆಡುವ ಮೂಲಕ ನನಗೆ ಅತೀಯ ಸಂತೋಷವನ್ನು ತಂದಿದೆ.
ಶನಾನ್ ಗೇಬ್ರಿಯಲ್ ಅವರು ವೆಸ್ಟ್ ಇಂಡೀಸ್ಗೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಗಣನೀಯ ಕೊಡುಗೆಯನ್ನು ನೀಡಿದ್ದಾರೆ. ಅವರು 59 ಟೆಸ್ಟ್ ಪಂದ್ಯಗಳಿಂದ 166 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ಆರು ಬಾರಿ 5 ವಿಕೆಟ್ಗಳ ಸಾಧನೆ ಮಾಡಿದ್ದಾರೆ. 2018ರಲ್ಲಿ ಅವರು ಶ್ರೀಲಂಕಾ ವಿರುದ್ದ 121 ರನ್ಗಳನ್ನು ನೀಡುವ 13 ವಿಕೆಟ್ಗಳನ್ನು ಕಬಳಿಸಿದ್ದರು. ಇದು ಇವರ ವೃತ್ತಿ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.
ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದುದ್ದಕ್ಕೂ ತಮಗೆ ಬೆಂಬಲ ನೀಡಿದ್ದ ಎಲ್ಲರಿಗೂ ವೆಸ್ಟ್ ಇಂಡೀಸ್ ವೇಗಿ ಇದೇ ವೇಳೆ ಧನ್ಯವಾದ ಅರ್ಪಿಸಿದ್ದಾರೆ. “ವೆಸ್ಟ್ ಇಂಡೀಸ್ ಪರ ಆಡುವಾಗ ನನ್ನ ಕುಟುಂಬದಿಂದ ಹಾಗೂ ಎಲ್ಲರಿಂದ ಸಿಕ್ಕ ಬೆಂಬಲ ಹಾಗೂ ಪ್ರೋತ್ಸಾಹಕ್ಕಾಗಿ ನಾನು ದೇವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ,” ಎಂದು ಶನಾನ್ ಗೇಬ್ರಿಯಲ್ ಬರೆದಿದ್ದಾರೆ.