ತಿರುಪತಿ ದೇವಾಲಯ ಬಹಳಷ್ಟು ವಿಶೇಷತೆಯನ್ನು ಹೊಂದಿದೆ. ನಿತ್ಯ ಲಕ್ಷಾಂತರ ಭಕ್ತರು ತಿರುಮಲ ತಿಮ್ಮಪ್ಪನ ದರ್ಶನ ಪಡೆಯಲು ಭೇಟಿ ನೀಡುತ್ತಾರೆ.
ಪ್ರಯಾಣಿಕರೇ ಗಮನಿಸಿ: ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರದವರೆಗೂ ಮೆಟ್ರೋ ಸೇವೆ ಸ್ಥಗಿತ
ಪ್ರತಿದಿನ ತಿರುಮಲ ಬೆಟ್ಟಗಳು ಗೋವಿಂದನ ನಾಮಸ್ಮರಣೆಯಿಂದ ಮೊಳಗುತ್ತವೆ. ಆದರೆ ಟಿಟಿಡಿ ತಿರುಮಲಕ್ಕೆ ಬರುವ ಭಕ್ತರಿಗೆ ಕಾಲಕಾಲಕ್ಕೆ ಹೊಸ ಕ್ರಮಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ತಿರುಮಲ ಶ್ರೀಗಳ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಟಿಟಿಡಿ ಇದೀಗ ಮಹತ್ವದ ನಿಯಮವೊಂದನ್ನು ಜಾರಿಗೆ ತಂದಿದೆ.
ಹೌದು, ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ಇದುವರೆಗೆ ಬೇಕಾದಷ್ಟು ಲಡ್ಡು ಪ್ರಸಾದ ತೆಗೆದುಕೊಂಡು ಹೋಗುವ ಅವಕಾಶವಿತ್ತು. ಆದ್ರೆ ಈ ಲಡ್ಡು ಪ್ರಸಾದ ವಿತರಣೆಯಲ್ಲಿ ಇದೀಗ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ತಿರುಮಲಕ್ಕೆ ಬರುವ ಪ್ರತಿಯೊಂದು ಭಕ್ತರ ಗುಂಪು ಸಾಮಾನ್ಯವಾಗಿ 10 ರಿಂದ 20 ಲಡ್ಡುಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿ ವರ್ಷ ಬೇಡಿಕೆಗೆ ಅನುಗುಣವಾಗಿ ಲಡ್ಡು ಉತ್ಪಾದನೆಯನ್ನು ಸಹ ಟಿಟಿಡಿ ಹೆಚ್ಚಿಸುತ್ತಿತ್ತು. ಪ್ರಸ್ತುತ ಟಿಟಿಡಿ ದಿನಕ್ಕೆ 3 ಲಕ್ಷ 20 ಸಾವಿರದವರೆಗೆ ಲಡ್ಡುಗಳನ್ನು ತಯಾರಿಸುತ್ತದೆ. ಈ ರೀತಿ ತಯಾರಿಸಿದ ಲಡ್ಡುಗಳನ್ನು ದೇವಸ್ಥಾನದ ಹಿಂಭಾಗದಲ್ಲಿರುವ ಲಡ್ಡು ಕಾಂಪ್ಲೆಕ್ಸ್ಗಳಲ್ಲಿ ಟಿಟಿಡಿ ವಿತರಿಸುತ್ತದೆ.
ಕೆಲವು ವರ್ಷಗಳ ಹಿಂದೆ ಉಚಿತ ಲಡ್ಡುಗಳ ಜೊತೆಗೆ, 10 ರೂಪಾಯಿಗೆ ಒಂದು ಲಡ್ಡುವನ್ನು ಭಕ್ತರಿಗೆ ನೀಡಲಾಗುತ್ತಿತ್ತು. ಆದರೆ ಕಚ್ಚಾ ವಸ್ತುಗಳ ಬೆಲೆಗಳು ಕಾಲಕಾಲಕ್ಕೆ ಹೆಚ್ಚಾಗುತ್ತಿದ್ದಂತೆ, ಆ ಲಡ್ಡುವಿನ ಬೆಲೆ 25 ರೂಪಾಯಿಗೆ ಏರಿಕೆಯಾಯಿತು. ಆ ನಂತರ ಲಡ್ಡು ಬೆಲೆ 50 ರೂಪಾಯಿ ಮತ್ತು ನೇರವಾಗಿ ಕೌಂಟರ್ನಲ್ಲಿ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗಿತ್ತು. ನಂತರ, 2019-2024 ರ ನಡುವೆ ವಿವಿಧ ದರ್ಶನಗಳಿಗೆ ನೀಡಲಾಗುವ ಲಡ್ಡುಗಳನ್ನು ಸಹ ಟಿಟಿಡಿ ರದ್ದುಗೊಳಿಸಿತು
ಆ ನಂತರ ತಿರುಪತಿಗೆ ಬರೋ ಎಲ್ಲಾ ಭಕ್ತರಿಗೆ ಒಂದು ಲಡ್ಡು ನೀಡುವ ಕ್ರಮವನ್ನು ಟಿಟಿಡಿ ಜಾರಿಗೆ ಬಂದಿತು. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಲಡ್ಡು ಕೌಂಟರ್ಗಳಲ್ಲಿ ಭಕ್ತರು ಕೇಳಿದಷ್ಟು ಲಡ್ಡುಗಳನ್ನು ವಿತರಿಸಲಾಗುತ್ತಿತ್ತು. ಕಾಲಕಾಲಕ್ಕೆ ಭಕ್ತರ ಸಂಖ್ಯೆ ಹೆಚ್ಚಾದಂತೆ ಪ್ರತಿಯೊಬ್ಬ ಭಕ್ತನಿಗೆ ಎರಡು ಲಡ್ಡುಗಳನ್ನು ವಿತರಿಸಲಾಯಿತು. ಕಾರಣಾಂತರಗಳಿಂದ ದರ್ಶನಕ್ಕೆ ತೆರಳಲಾಗದ ಕೆಲ ಭಕ್ತರು ಲಡ್ಡು ಪ್ರಸಾದ ತೆಗೆದುಕೊಂಡು ಹೋಗುತ್ತಾರೆ. ಇದಕ್ಕಾಗಿ ಟಿಟಿಡಿ ಇದೀಗ ಹೊಸ ನೀತಿಯನ್ನು ಆರಂಭಿಸಿದೆ
ಇದರಿಂದ ಕೆಲ ಬ್ರೋಕರ್ಗಳು ಲಡ್ಡೂಗಳನ್ನು ಹೆಚ್ಚುವರಿಯಾಗಿ ಖರೀದಿಸಿ ಬ್ಲ್ಯಾಕ್ ಮಾರ್ಕೆಟ್ನಲ್ಲಿ ಹಂಚುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲಡ್ಡು ಮಾರಾಟಕ್ಕೂ ಇದೀಗ ಟಿಟಿಡಿ ಆಧಾರ್ ಕಡ್ಡಾಯಗೊಳಿಸಿದೆ.
ಲಡ್ಡೂ ನೀತಿ ಕುರಿತು ಟಿಟಿಡಿ ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಪ್ರತಿಕ್ರಿಯಿಸಿದ್ದು, ತಿಮ್ಮಪ್ಪ ದರ್ಶನಕ್ಕೆ ಭೇಟಿ ಮಾಡುವ ಪ್ರತಿಯೊಬ್ಬ ಭಕ್ತನಿಗೆ ಒಂದು ಲಡ್ಡುವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಲಡ್ಡು ವಿತರಣೆಯಲ್ಲಿ ಸಣ್ಣ ಬದಲಾವಣೆ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಭಕ್ತರನ್ನು ಹೊರತುಪಡಿಸಿ ಮಧ್ಯವರ್ತಿಗಳು ಹೆಚ್ಚಿನ ಲಡ್ಡುಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಹೊರಗಡೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ ಎಂದು ಹೇಳಿದರು.
ದರ್ಶನಕ್ಕೆ ಹೋಗದೆ ಲಡ್ಡುಗಳನ್ನು ಆಧಾರ್ ಕಾರ್ಡ್ ತೋರಿಸಿ ಖರೀದಿಸುವವರಿಗೆ ಎರಡು ಲಡ್ಡುಗಳನ್ನು ಮಾತ್ರ ನೀಡಲಾಗುತ್ತದೆ. ಆದರೆ ದರ್ಶನಕ್ಕೆ ತೆರಳುವ ಪ್ರತಿಯೊಬ್ಬ ಭಕ್ತರಿಗೆ ಹೆಚ್ಚುವರಿಯಾಗಿ 4 ಲಡ್ಡೂ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.