ನವದೆಹಲಿ:- 2ನೇ ಕ್ಲಾಸ್ ಬಾಲಕಿಗೆ ಗುಪ್ತಾಂಗ ತೋರಿಸಿ, ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉತ್ತರಾಖಂಡದಲ್ಲಿ ಜರುಗಿದೆ.
ಹುಬ್ಬಳ್ಳಿ-ಬೆಳಗಾವಿ-ಧಾರವಾಡ ಜಿಲ್ಲೆ ಸ್ಟಾರ್ಟ್ ಅಪ್ & ಟೆಕ್ ಹಬ್ ಆಗಿ ಪರಿವರ್ತಿಸಲು ಸಿದ್ಧತೆ!
2ನೇ ತರಗತಿಯ ಬಾಲಕಿ ಮುಂದೆ ಪ್ಯಾಂಟ್ ಬಿಚ್ಚಿದ ಯುವಕ ತನ್ನ ಗುಪ್ತಾಂಗ ತೋರಿಸಿದ್ದಾನೆ. ನಂತರ ಆಕೆಯನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದಾನೆ.
ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಭಾನುವಾರ ರಾತ್ರಿ ಬಾಲಕಿ ಹಲ್ದ್ವಾನಿಯ ಕೊತ್ವಾಲಿ ಪ್ರದೇಶದಲ್ಲಿ ಆ ಬಾಲಕಿ ಮನೆಯಿಂದ ಹೊರಟಿದ್ದಾಗ ಈ ಘಟನೆ ನಡೆದಿದೆ. ಆರೋಪಿಯನ್ನು ಮೊಹಮ್ಮದ್ ಹಸೀಬ್ ಎಂದು ಗುರುತಿಸಲಾಗಿದೆ.
ಬಂಭುಲ್ಪುರದ ಆಜಾದ್ನಗರ ನಿವಾಸಿ ಮತ್ತು ವೃತ್ತಿಯಲ್ಲಿ ಬಡಗಿಯಾಗಿರುವ ಮೊಹಮ್ಮದ್ ಹಸೀಬ್ ಎಂದು ಗುರುತಿಸಲಾದ ಆರೋಪಿ, ಪ್ಯಾಂಟ್ ತೆಗೆದು ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಭಯಭೀತಳಾದ ಹುಡುಗಿ ಹತ್ತಿರದ ಮನೆಗೆ ಓಡಿ ಹೋಗುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದಳು. ಇದರಿಂದ ಅವಳು ಬಚಾವಾಗಿದ್ದಾಳೆ. ಆದರೂ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿರುವ ಆ ಯುವಕನ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದ್ದು, ದಾಳಿಕೋರನಿಂದ ಪರಾರಿಯಾಗುತ್ತಿದ್ದಂತೆ ಆ ಬಾಲಕಿ ಅಲುಗಾಡುತ್ತಿರುವುದು ಗೋಚರಿಸುತ್ತದೆ. ಈ ದೃಶ್ಯಾವಳಿಗಳು ಮೊಹಮ್ಮದ್ ಹಸೀಬ್ನನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿತು. ಆತನನ್ನು ಸೋಮವಾರ ಎಫ್ಟಿಐ ರಸ್ತೆಯಿಂದ ಬಂಧಿಸಲಾಗಿದ್ದು, ವಿಚಾರಣೆ ನಡೆಸಿದ ಪೊಲೀಸರು ಆತ ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿದ್ದಾರೆ.
ಮೊಹಮ್ಮದ್ ಹಸೀಬ್ನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.