ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಸೆಪ್ಟೆಂಬರ್ 9ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಆದರೆ ಈ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಹಾಗೂ ಇತರೆ ಕೆಲವು ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಗಿದೆ. ದರ್ಶನ್ ಹಾಗೂ ಇತರೆ ಕೆಲವರಿಗೆ ವಿಶೇಷ ಆತಿಥ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತಿರುವ ವಿಷಯ ಬಹಿರಂಗವಾದ ಬಳಿಕ ಪೊಲೀಸರ ಮನವಿಯಂತೆ ನ್ಯಾಯಾಲಯವು ಆರೋಪಿಗಳ ವರ್ಗಾವಣೆಗೆ ಅನುಮತಿ ನೀಡಿದೆ.
ಅದರಂತೆ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ನಿಯಮದ ಪ್ರಕಾರ ರಾತ್ರಿ ವೇಳೆ ವಿಚಾರಣಾದೀನ ಕೈದಿಗಳನ್ನು ಸ್ಥಳಾಂತರ ಮಾಡುವಂತಿಲ್ಲ. ಆದ್ರೆ ಭದ್ರತಾ ದೃಷ್ಟಿಯಿಂದ ದರ್ಶನ್ರನ್ನು ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಹೊರಟಿದ್ದರು.
Shrama Shakti Scheme: ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ 50 ಸಾವಿರ ರೂ. ಸಾಲ! 25 ಸಾವಿರ ಫ್ರೀ
ಇದೀಗ ದರ್ಶನ್ ಅವರನ್ನು ಕರೆದುಕೊಂಡು ಹೊರಟಿದ್ದ ಪೊಲೀಸ್ ವಾಹನ ಬಳ್ಳಾರಿ ಜೈಲು ತಲುಪಿವೆ. ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ. ಇನ್ನೂ ದರ್ಶನ್ ಕಪ್ಪು ಬಣ್ಣದ ಪೂಮಾ ಟೀಶರ್ಟ್ ಧರಿಸಿದ್ದರು. ಜತೆಗೆ ಕಾಲರ್ಗೆ ಕೂಲಿಂಗ್ ಗ್ಲಾಸ್, ಕೈಯಲ್ಲಿ ಜರ್ಕಿನ್, ವಾಟರ್ ಬಾಟಲ್ ಹಿಡಿದುಕೊಂಡಿದ್ದರು. ಸುತ್ತಲೂ 20 ಕ್ಕೂ ಅಧಿಕ ಪೊಲೀಸರು ಭದ್ರತೆಯೊಂದಿಗೆ ಜೈಲಿನ ವೈದ್ಯಕೀಯ ಕೊಠಡಿಗೆ ಕರೆದುಕೊಂಡು ಹೋದರು.
ಕೋಳ ಕಾಣದಂತೆ ದರ್ಶನ್ ಕೈಗೆ ಬಟ್ಟೆ ಸುತ್ತಿಕೊಂಡು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಬ್ರಾಂಡೆಟ್ ಟಿಶರ್ಟ್ ಹಾಗೂ ಅದರ ಮೇಲೆ ಕೂಲಿಂಗ್ ಹಾಕಿ ದರ್ಶನ್ ಜೈಲಿಗೆ ಬಂದಿದ್ದಾರೆ. ಜೈಲಿನಲ್ಲಿ ಕೂಲಿಂಗ್ ಗ್ಲಾಸ್ ಸೇರಿದಂತೆ ಇತರ ಕೆಲ ವಸ್ತುಗಳಿಗೆ ನಿರ್ಬಂಧವಿದೆ. ಆದರೆ ದರ್ಶನ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದಿದ್ದಾರೆ. ಹೀಗಾಗಿ ದರ್ಶನ್ಗೆ ಕೂಲಿಂಗ್ ಗ್ಲಾಸ್ ಹಾಕಲು ಅವಕಾಶ ನೀಡಿದ ಬೆಂಗಾವಲು ಪಡೆಗೆ ನೋಟಿಸ್ ನೀಡಲು ಮುಂದಾಗಿದ್ದಾರೆ.
ಜೈಲಿನ ಉಡುಪು ಯಾಕಿಲ್ಲ?
ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೀಡಾಗಿದ್ದು, ಆ ಕೇಸ್ನ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆ ಅವರನ್ನು ನ್ಯಾಯಾಂಗ ತನಿಖೆಗೆ ನೀಡಲಾಗಿದೆಯಷ್ಟೇ. ಅವರು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಜೈಲಿನ ನಿಯಮಗಳಂತೆ ಕೈದಿಗಳಿಗೆ ಮಾತ್ರವೇ ಸಮವಸ್ತ್ರ ನೀಡಲಾಗುತ್ತದೆ. ವಿಚಾರಣಾಧೀನ ಕೈದಿಗಳು ತಮ್ಮ ಇಚ್ಛೆಯ ಸಾಮಾನ್ಯ ಉಡುಪು ಧರಿಸಬಹುದು.
ಟೀಶರ್ಟ್ ಬೆಲೆ ಎಷ್ಟು?
ಆನ್ಲೈನ್ ಶಾಪಿಂಗ್ ಸೈಟ್ಗಳಲ್ಲಿ ಈ ಟೀಶರ್ಟ್ನ ಬೆಲೆ 1500 ರಿಂದ 2000 ರೂಪಾಯಿ ಇದೆ.
ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಬಂದ ದರ್ಶನ್ಗೆ ಖೈದಿ ಸಂಖ್ಯೆ 511 ನೀಡಲಾಗಿದೆ. ಬಳ್ಳಾರಿಯ ಹೈಸೆಕ್ಯೂರಿಟಿ ಜೈಲಿಗೆ ನಟ ದರ್ಶನ್ನ್ನು ಸ್ಥಳಾಂತರಿಸಲಾಗಿದೆ. ಬಳ್ಳಾರಿ ಜೈಲಿನಲ್ಲಿ ಸಹಿ ಹಾಕಿದ ದರ್ಶನ್ ಒಳ ಪ್ರವೇಶಿಸಿದ್ದಾರೆ. ಇದೇ ವೇಳೆ ದರ್ಶನ್ ತಂದಿರುವ 2 ಬ್ಯಾಗ್ಗಳನ್ನು ಜೈಲು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.