ಬೆಂಗಳೂರು:- ನಗರ ಪ್ರತಿಷ್ಠಿತ ಕಾಲೇಜ್ ಗಳಲ್ಲಿ ಒಂದಾದ ಕೆ.ಆರ್. ಪುರನ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಇದೇ ಆಗಸ್ಟ್ 31ರಂದು ಬೃಹತ್ ಉದ್ಯೋಗಮೇಳವು ಏರ್ಪಡಿಸಲಾಗಿದೆ.
ಬೆಂಗಳೂರಿನ ರೋಟರಿ ಮಾನ್ಯತಾ ಅವರು ಈ ಮೇಳಕ್ಕೆ ಸಹಯೋಗವನ್ನು ನೀಡುತ್ತಿರುವುದು ವಿಶೇಷವಾಗಿದೆ ಎಂದು ಕಾಲೇಜಿನ ಅಧ್ಯಕ್ಷ ಡಾ. ಎಚ್.ಎಂ. ಚಂದ್ರಶೇಖರ್ ಅವರು ತಿಳಿಸಿದರು.
ಬಿ.ಕಾಂ, ಬಿಬಿಎ, ಬಿ.ಸಿ.ಎ ಮೊದಲಾದ ಎಲ್ಲಾ ಪದವೀಧರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಎಲ್ಲಾರಿಗೂ ಮುಕ್ತ ಅವಕಾಶವಿದ್ದು, ಉದ್ಯಮ ಹಾಗೂ ಇಂದಿನ ಮಾರುಕಟ್ಟೆಯ ಸ್ಪರ್ಧಾತ್ಮಕ ಯುಗದಲ್ಲಿ 40 ಕ್ಕಿಂತ ಹೆಚ್ಚು ಕಂಪನಿಗಳು 500 ಕ್ಕೂ ಹೆಚ್ಚಿನ ಸ್ಥಾನಗಳಿಗೆ ಈ ಉದ್ಯೋಗಾವಕಾಶವು ದೊರಕಲಿದೆ.
ಇದರಲ್ಲಿ ಪಾಲುಗೊಳ್ಳುವುದರ ಮೂಲಕ ಉದ್ಯೋಗಸ್ಥ ಯುವಕರ ಸಂಖ್ಯೆ ಹೆಚ್ಚಾಗಬೇಕು ಹಾಗೂ ಜಾಗತಿಕ ಸ್ಪರ್ಧೆಗಳಲ್ಲಿ ಯುವಜನತೆ ಭಾಗಿಗಳಾಗಬೇಕು ಎನ್ನುವುದು ನಮ್ಮ ಕನಸಾಗಿದೆ ಎಂದು ಹೇಳಿದರು.
ಈ ಮೇಳದಲ್ಲಿ ಮಾಂಡೋವಿ ಮೋಟರ್ಸ್ ಪ್ರೈವೆಟ್ ಲಿಮಿಟೆಡ್, ಎಲ್ ಅಂಡ್ ಟಿ ಫೈನಾನ್ಸ್, ಮುತ್ತೂಟ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಲ್ಸೆಕ್ ಟೆಕ್ನಾಲಜೀಸ್, ಕೆ.ಬಿ.ಎಲ್. ಸರ್ವೀಸ್ ಲಿಮಿಟೆಡ್, ಡಿ.ಬಿ.ಎಸ್ ಬ್ಯಾಂಕ್, ಹೆಚ್.ಡಿ.ಎಫ್.ಸಿ ಲೈಫ್, ನೋಬ್ರೋಕರ್.ಕಾಂ, ಐಸಿಐಸಿಐ ಬ್ಯಾಂಕ್, ಬಿಗ್ ಬ್ಯಾಸ್ಕೆಟ್, ಆಕ್ಸಿಸ್ ಬ್ಯಾಂಕ್, ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮುಂತಾದ ಉದ್ಯೋಗದಾತ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿದೆ ಎಂದು ವಿವರಿಸಿದರು.