ಅಥಣಿ : ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನ ಸಭಾ ವ್ಯಾಪ್ತಿಯ ಅನಂತಪುರ ಗ್ರಾಮದಲ್ಲಿ ಅಚ್ಚರಿ ಘಟನೆ ನಡೆದಿದೆ.
ಅನಂತಪುರ ಗ್ರಾಮದ ರೈತ ವಿಜಯ ಅಪ್ಪಣ್ಣ ಗುಜರೆ ಎಂಬುವವರ ಗದ್ದೆಯಲ್ಲಿದ್ದ ಬೋರ್ವೆಲ್ ಯಾವುದೇ ಇಂದನ, ಸೌರ ಶಕ್ತಿ, ವಿದ್ಯುತ್ ಬಳಕೆಯಾಗದೆ. ಸುಮಾರು 100 ಅಡಿ ಬಾನೆತ್ತರಕ್ಕೆ ನೀರು ಚಿಮ್ಮತ್ತಿದೆ. ಈ ವಿಸ್ಮಯಕಾರಿ ಘಟನೆಗೆ ಜನರು ಅಚ್ಚರಿಗೆ ಒಳಗಾಗಿದ್ದಾರೆ.
ಹುಣಸಘಟ್ಟದಲ್ಲಿ ಕಲುಷಿತ ನೀರು ಸೇವನೆ: 7 ಮಂದಿ ಅಸ್ವಸ್ಥ, PDO ಸಸ್ಪೆಂಡ್!
ರೈತನ ಜಮೀನಿನಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಸುಮಾರು 300 ಅಡಿ ಆಳಕ್ಕೆ ಬೋರವೆಲ್ ಕೊರೆಯಲಾಗಿತ್ತು. ಸಾಕಾಗುವಷ್ಟು ನೀರು ಕೂಡ ದೊರಕಿತ್ತು.ಈ ಬೋರವೆಲ್ ಗಾಳಿಯ ಒತ್ತಡದಿಂದ ಸುಮಾರು 15 ನೀ ಗಳ ಕಾಲ ಆಕಾಶದೆತ್ತರಕ್ಕೆ ನೀರು ಚುಮ್ಮತ್ತದೆ.
ಈ ಬೋರ್ವೆಲ್ ನಿಂದ ಉಳಿದ ನೂರಾರು ರೈತರ ಬೋರ್ವೆಲ್ ಗಳಿಗೆ ಅಂತರ್ಜಲ ಕಾಯ್ದುಕೋಳ್ಳಲು ಉಪಯುಕ್ತವಾಗಿದೆ. ಕಾರಣ ಈ ಬೋರ್ವೆಲ್ ನಲ್ಲಿದ್ದ ನೀರು ಇನ್ನುಳಿದ ರೈತರ ಬೋರವೆಲ್ ಗಳಿಗೂ ನಿರೋದಗಿಸುತ್ತದೆ ಎಂದು ಸ್ಥಳೀಯ ರೈತರು ಅಚ್ಚರಿ ಸಂಗತಿಯನ್ನ ಹೇಳಿದ್ದಾರೆ.
ಒಟ್ಟಾರೆ ಪ್ರಕೃತಿ ವಿಸ್ಮಯದ ಮುಂದೆ ಯಲ್ಲವು ನಿಘುಡವಾಗಿರುತ್ತದೆ. ಬೋರ್ವೆಲ್ ನ ಅಚ್ಚರಿ ಸಂಗತಿಯನ್ನ ನೋಡಲು ಜನ ಮುಗಿಬಿಳುತ್ತಿದ್ದೂ ರೈತ ವಿಜಯ ಸಂತಸ ವ್ಯಕ್ತಪಡಿಸಿದ್ದಾರೆ.