ಕಲಘಟಗಿ : ದೂರುದಾರರ ಮೇಲೆಯೇ ದೌರ್ಜನ್ಯ ಎಸಗಿದ ಆರೋಪದಡಿ ಪೊಲೀಸರಿಗೆ ಕೋರ್ಟ್ ಸಮನ್ಸ್ ಜಾರಿ ಆಗಿದೆ.
ಪೊಲೀಸ್ ಠಾಣೆಗೆ ದಲಿತರ ಮೇಲೆ ದೌರ್ಜನ್ಯ ಸಂಭವಿಸಿದಾಗ, ಲಮಾಣಿ ದಲಿತ ಮಹಿಳೆಯರ ಮೇಲೆ ಹಾಗೂ ಅವರ ಕುಟುಂಬದವರು ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಿಸಲು ಠಾಣೆಗೆ ಬಂದಿದ್ದರು. ಆಗ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ವಿಜಯ್ ಬಿರಾದಾರ್ ಮತ್ತು ಠಾಣಾಧಿಕಾರಿಗಳು, ದೂರು ದಾಖಲಿಸಿಕೊಳ್ಳದೆ ಠಾಣೆ ಮುಂಬಾಗ ದಲಿತ ಲಮಾಣಿ ಕುಟುಂಬದ ಮೇಲೆ ಅಸಭ್ಯವಾಗಿ ವರ್ತಿಸಿ ಕೆಟ್ಟ ಬೈಗುಳದಿಂದ ಬೈದಿದ್ದಾರೆ.
Health Tips: ನಿತ್ಯ ಮೊಸರು ತಿಂದ್ರೆ ದೇಹದಲ್ಲಿ ಹೆಚ್ಚುತ್ತಾ ಕೊಲೆಸ್ಟ್ರಾಲ್?
ಹೀಗಾಗಿ ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸುತ್ತೀದ್ದಾಗ ಬಿಡಿಸಲು ಹೋದ ಮಹಿಳೆಯರನ್ನು ಹಿಡಿದು ಎಳೆದು ನೆಲಕ್ಕೆ ಬಿಸಾಕಿ ಹೆದರಿಸಿ ಬೆದರಿಸಿ ಪೊಲೀಸರು, ಸ್ಟೇಷನ್ ಮುಂದೆ ಮೂರು ಜನ ದೂರುದಾರನ್ನು ಆಕ್ರಮವಾಗಿ ಬಂಧಿಸಿ ಕೋವಿಡ್ ಚೆಕ್ ಮಾಡಿಸಿ ಜೈಲಿಗೆ ಹಾಕಿದ್ರು. ಪೋಲೀಸರು ಸ್ಟೇಷನ್ ಹೌಸ್ ಡೈರಿಯಲ್ಲಿ ಒಬ್ಬ ದೂರುದಾರರನ್ನು ನಮೂದಿಸಿ ಠಾಣೆ ಡೈರಿ ಸಿದ್ದ ಪಡಿಸಿ ಪೊಲೀಸ್ ದೌರ್ಜನ್ಯ ಮಾಡಿದ್ದಾರೆ.
ಸದರಿ ಘಟನೆ ಬಗ್ಗೆ ಬೆಂಗಳೂರು SC : ST ಆಯೋಗ ದೌರ್ಜನ್ಯ ವೆಸಗಿದ್ದ ಅಧಿಕಾರಿಗಳಿಗೆ ವಿಚಾರಣಾ ನೊಟೀಸ್ ಜಾರಿ ಮಾಡಲಾಗಿದ್ದು, ಆಯೋಗ ವಿಚಾರಣೆ ನೊಟೀಸ್ ಜಾರಿ ಮಾಡಿದರೂ ಪೊಲೀಸ ಅಧಿಕಾರಿಗಳು ವಿಚಾರಣಾಗೆ ಗೃರು ಹಾಜರಾಗಿದ್ದಾರೆ.
ಆಯೋಗ ಅಂದಿನ ಅಧಿಕಾರಿಗಳಾದ ವಿಜಯ ಬಿರಾದಾರ್, ಪ್ರಭೂ ಸೂರಿನ, ಠಾಣಾಧಿಕಾರಿ ಇವರುಗಳಿಗೆ ಆಯೋಗ ಸಮನ್ಸ್ ಜಾರಿ ಮಾಡಿದೆ.