ಬೆಂಗಳೂರು:- ಮದ್ಯಪ್ರಿಯರಿಗೆ ಗುಡ್ ಆ್ಯಂಡ್ ಬ್ಯಾಡ್ ನ್ಯೂಸ್ ಸಿಕ್ಕಿದ್ದು, ಪ್ರೀಮಿಯಂ ವಿಸ್ಕಿ, ಸ್ಕಾಚ್ ದರ ಇಳಿಕೆ ಆಗಿದ್ದು, ಬಿಯರ್ ದರ ಹೆಚ್ಚಳವಾಗಿದೆ.
ವಾಕಿಂಗ್ ಯಾವಾಗ ಮಾಡಿದ್ರೆ ಬೆಸ್ಟ್!?, ತಿನ್ನೋಕೂ ಮುನ್ನವಾ!?, ತಿಂದ್ಮೇಲೆ ಮಾಡಿದ್ರೆ ಒಳ್ಳೆಯದೋ?
ಪ್ರೀಮಿಯಂ ವಿಸ್ಕಿ, ಸ್ಕಾಚ್ ದರ ಇಳಿಕೆ ಆಗಿದ್ದು, ಬಿಯರ್ ದರ ಹೆಚ್ಚಳವಾಗಿದೆ. ರಾಜ್ಯ ಸರ್ಕಾರ ನಿನ್ನೆಯಿಂದ ಪ್ರೀಮಿಯಂ ವಿಸ್ಕಿ, ಸ್ಕಾಚ್ಗಳ ದರವನ್ನು ಕಡಿಮೆ ಮಾಡಲು ಮುಂದಾಗಿದೆ. ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಸ್ಕಾಚ್ ಗಳದರ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗ್ತಿರೋದು. ಮದ್ಯದಲ್ಲಿ 16 ಸ್ಲ್ಯಾಬ್ಗಳಿವೆ. ಅದರಲ್ಲಿ ಒಂದರಿಂದ ಐದು ಸ್ಲ್ಯಾಬ್ಗಳ ವರೆಗೆ ಮದ್ಯದ ದರವನ್ನು ಕಡಿಮೆ ಮಾಡಿಲ್ಲ. ಅದು ಬಡ ವರ್ಗದ ಮದ್ಯಪ್ರಿಯರು ಕುಡಿಯುವ ಮದ್ಯ. 60% ರಷ್ಟು ಮದ್ಯಪ್ರಿಯರು ಈ ವರ್ಗದ ಮದ್ಯವನ್ನು ಕುಡಿಯುತ್ತಾರೆ. 6 ರಿಂದ 18 ರವರೆಗೆ ಮಧ್ಯಮವರ್ಗ, ಶ್ರೀಮಂತ ಮತ್ತು ಅತಿ ಶ್ರೀಮಂತ ವರ್ಗ ಕುಡಿಯುತ್ತಾರೆ. ಪ್ರೀಮಿಯಂ ಮದ್ಯವನ್ನು ರಾಜ್ಯದಲ್ಲಿ ಶೇ- 40% ರಷ್ಟು ಮದ್ಯಪ್ರಿಯರು ಕುಡಿಯುತ್ತಾರೆ. ಆರರಿಂದ ಹದಿನಾರರವರೆಗೆ ಬರುವ ಎಲ್ಲಾ ಮಾದರಿಯ ಮದ್ಯದ ದರವನ್ನು ಕಡಿಮೆ ಮಾಡಲಾಗ್ತಿದೆ.
ಕರ್ನಾಟಕ ರಾಜ್ಯದ ಅಕ್ಕಪಕ್ಕದ ರಾಜ್ಯಗಳಲ್ಲಿ ಮತ್ತು ಮಹಾರಾಷ್ಟ್ರ, ಗೋವಾ, ಗುರ್ಗಾವ್, ದೆಹಲಿ ರಾಜ್ಯಗಳಲ್ಲಿ ನಮ್ಮ ರಾಜ್ಯದಲ್ಲಿ 3 ಸಾವಿರಕ್ಕೆ ಮಾರಾಟ ಮಾಡುವ ಮದ್ಯ ಕೇವಲ 900 ರುಪಾಯಿಗೆ ಸಿಗುತ್ತದೆ. ಇದರಿಂದ ರಾಜ್ಯದ ಹೈಕ್ಲಾಸ್ ಮದ್ಯಪ್ರಿಯರು ಬೇರೆಬೇರೆ ರಾಜ್ಯದ ಮದ್ಯಕ್ಕೆ ಮೊರೆ ಹೋಗುತ್ತಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಸುಮಾರು 2,500 ರಿಂದ 3 ಸಾವಿರ ಕೋಟಿಯಷ್ಟು ನಷ್ಟ ಆಗ್ತಿತ್ತು. ಇಂದಿನಿಂದ ದರ ಇಳಿಕೆ ಆಗ್ತಿರೋದ್ರಿಂದ ಆದಾಯ ಹೆಚ್ಚಾಗಲಿದೆ.
ಈ ಹಿಂದೆ 2,500 ರಿಂದ 3 ಸಾವಿರ ರುಪಾಯಿ ಬೆಲೆ ಇರುವ ಒಂದು ಫುಲ್ ಬಾಟಲ್ ಪ್ರೀಮಿಯಂ ವಿಸ್ಕಿ ಬೆಲೆ ನಿನ್ನೆಯಿಂದ 600 ರಿಂದ 800 ರುಪಾಯಿ ವರೆಗೆ ಕಡಿಮೆ ಆಗಿದೆ. ಐದು ಸಾವಿರದಿಂದ ಎಂಟು ಸಾವಿರ ರುಪಾಯಿ ವರೆಗೆ ಇದ್ದ ಒಂದು ಫುಲ್ ಬಾಟಲ್ ಸ್ಕಾಚ್ ನ ಮೇಲೆ ಒಂದು ಸಾವಿರ ರುಪಾಯಿ ವರೆಗೆ ಕಡಿಮೆ ಆಗಿದೆ. ಸ್ಕಾಚ್ ಗಳ ಮೇಲೆ ಶೇ 20 ರಿಂದ 25% ರಷ್ಟು ಕಡಿಮೆ ಆಗಿದೆ ಎಂದು ಬೆಂಗಳೂರು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಕರುಣಾಕರ ಹೆಗ್ಡೆ ತಿಳಿಸಿದರು.