ಧಾರವಾಡ: ಕಾಲೇಜು ವಿದ್ಯಾರ್ಥಿನಿಯರ ಫೋಟೊಗಳನ್ನು ಬಳಸಿ ಎಡಿಟ್ ಮಾಡಿ ಅಶ್ಲೀಲ ಡೈಲಾಗ್ ಮತ್ತು ಹಾಡುಗಳನ್ನು ಹಾಕಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ 6 ಜನರನ್ನು ಉಪನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮಾತನಾಡುವಾಗ ಪದೇ ಪದೇ ಕೈ ನಡುಕ ಹುಟ್ಟುತ್ತಾ!?, ಹಾಗಿದ್ರೆ ಈ ಕಾಯಿಲೆ ಇದೆ ಎಂದರ್ಥ!
ಕಾಲೇಜು ವಿದ್ಯಾರ್ಥಿಗಳಾದ ಗೋಕಾಕ್ನ ಸಚಿನ್ ಕಡಕ್ಬಾವಿ, ಮುದ್ದೇಬಿಹಾಳದ ಆಕಾಶ ಮೇಟಿ ಹಾಗೂ ಇಲ್ಲಿನ ಕೆಲಗೇರಿಯ ಪ್ರಕಾಶ ನವಲೂರ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಬಂದು ನಗರದಲ್ಲಿ ನೆಲೆಸಿದ್ದ ರಾಮದುರ್ಗನ ಮೌನೇಶ ಬಡಿಗೇರ, ರಾಯಬಾಗನ ಆನಂದ ಸೆಂಡಗೆ, ಗೋಕಾಕ್ನ ಸುನೀಲ ಪರ್ವತೀಕರ ಬಂಧಿತರು.
ಇವರು ನಗರದ ಪ್ರತಿಷ್ಠಿತ ಕಾಲೇಜೊಂದರ 4 ವಿದ್ಯಾರ್ಥಿನಿಯರು ಮತ್ತು ಇಬ್ಬರು ವಿದ್ಯಾರ್ಥಿಗಳ ಇನ್ಸ್ಟಾಗ್ರಾಂನಿಂದ ಅಕೌಂಟ್ನಿAದ ಫೋಟೊಗಳನ್ನು ಸಂಗ್ರಹಿಸಿದ್ದರು.
ಅಸಲಿ ಫೋಟೊಗಳನ್ನು ಬಳಸಿ ಅಶ್ಲೀಲ ಡೈಲಾಗ್ ಮತ್ತು ಮಾತುಗಳಿರುವ ರೀಲ್ಸ್ ಮಾಡಿ ಇನ್ಸ್ಟಾಗ್ರಾಂ ಟ್ರೋಲ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದರು.
ಅವುಗಳನ್ನು ತೆಗೆದುಹಾಕುವಂತೆ ವಿದ್ಯಾರ್ಥಿಗಳು ವಿನಂತಿಸಿದಾಗ ಟ್ರೋಲ್ ಪೇಜ್ ಡಿಲೀಟ್ ಮಾಡಲು 15,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ಒಪ್ಪದಿದ್ದರೆ ಫೋಟೊ ಎಡಿಟ್ ಮೂಲಕ ಬೆತ್ತಲೆ ಮಾಡಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಈ ಕುರಿತು ನೊಂದ ವಿದ್ಯಾರ್ಥಿನಿಯರು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು 24 ಗಂಟೆಯೊಳಗೆ 6 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.