ವಿಜಯಪುರ:- ಜಿಲ್ಲೆಯ ಸಚಿವ ಶಿವಾನಂದ ಪಾಟೀಲ ಮತಕ್ಷೇತ್ರದ ಮನಗೂಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ ನಡೆದಿದೆ.
ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸದಸ್ಯರ ಹೈಜಾಕ್ ನಿಂದಾಗಿ ಮತ್ತೆ ಮೀಸಲಾತಿ ಪ್ರಶ್ನಿಸಿ
ಬಿಜೆಪಿಯವರು ಹೈಕೋರ್ಟ್ ಮೊರೆ ಹೋಗಿದ್ದು ತಾತ್ಕಾಲಿಕವಾಗಿ ಗದ್ದುಗೆ ಜಿದ್ದಾ ಜಿದ್ದಿಗೆ ಬ್ರೇಕ್ ಬಿದ್ದಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಮನಗೂಳಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು ಮೂರು ವರ್ಷಗಳಾಗಿತ್ತು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಜಟಾಪಟಿಯಿಂದಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಭಾಗ್ಯ ದೊರೆತಿರಲಿಲ್ಲ . ಇದೀಗ ಆಗಸ್ಟ್ 27 ರಂದು ಅಮದರೆ ಇಂದು ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗಗಳ ಅ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾತಿಯಂತೆ ಚುನಾವಣಾ ಪ್ರಕ್ರಿಯೆಗೆ ಆದೇಶ ಹೊರಬಿದ್ದಿತ್ತು. ಮನಗೂಳಿ ಪಟ್ಟಣ ಪಂಚಾಯಿತಿಗೆ 16 ಸದಸ್ಯ ಬಲ ಹೊಂದಿದೆ. ಚುನಾವಣೆಯಲ್ಲಿ ಬಿಜೆಪಿ 12 ಕಾಂಗ್ರೆಸ್ 4 ಸ್ಥಾನ ಗೆದ್ದಿದೆ. ಹಿಂದೆ ಬಿಜೆಪಿಯಲ್ಲಿದ್ದ ಮುಖಂಡ ಅಪ್ಪುಗೌಡ ಪಾಟೀಲ್ ಮನಗೂಳಿ ಪ್ರಭಾವದಿಂದಾಗಿ ಬಿಜೆಪಿಗೆ ಹೆಚ್ಚು ಸ್ಥಾನ ಬಂದಿದ್ದವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದೆ ಇರೋದಕ್ಕೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಅಪ್ಪುಗೌಡ ಪಾಟೀಲ್ ಮನಗೂಳಿ ಪರಾಭವ ಹೊಂದಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಮನಗೂಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲೂ ಜಿದ್ದಾಜಿದ್ದಿ ಏರ್ಪಟ್ಟಿದೆ. ಇದೀಗ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಬಿಜೆಪಿಯ 8 ಸದಸ್ಯರನ್ನು ಹೈಜಾಕ್ ಮಾಡಿ ಮಾಡಿತ್ತು. ಆಪರೇಷನ್ ಹಸ್ತದ ಮೂಲಕ ಮನಗೂಳಿ ಪಟ್ಟಣ ಪಂಚಾಯಿತಿ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮುಂದಾಗಿತ್ತು. ಕಾಂಗ್ರೆಸ್ ನಡೆ ಬಿಜೆಪಿಗರಿಗೆ ನಿದ್ದೆಗೆಡಿಸಿತ್ತು. ಇದೀಗ ಮತ್ತೆ ಮೀಸಲಾತಿ ಪ್ರಶ್ನಿಸಿ ಕಲಬುರ್ಗಿ ಹೈಕೋರ್ಟ್ ಮೊರೆ ಹೋಗಿದ್ದು, ಆಗಸ್ಟ್ 27 ರಂದು ನಡೆಯಬೇಕಿದ್ದ ಚುನಾವಣೆಗೆ ಕಾರ್ಮೋಡ ಕವಿದಿದೆ. ಹೈಕೋರ್ಟ್ ನಲ್ಲಿ ಆಗಸ್ಟ್ 29ರಂದು ವಿಚಾರಣೆ ನಡೆಯಲಿರುವ ಕಾರಣ ಮತ್ತೆ ಚುನಾವಣೆ ಮುಂದೂಡಲಾಗಿದೆ…