ಮೈಸೂರು: ಮೈಸೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸ ಲಾಗಿದೆ. ಒಂದೇ ಕುಟುಂಬದ ನಾಲ್ವರಿಂದ 80ಕ್ಕೂ ಪ್ರಕರಣಗಳನ್ನು ಬೇಧಿಸಿದ್ದು, ಬರೋಬ್ಬರಿ 45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಮೂರು ಬೈಕ್, ಎರಡು ಪಿಸ್ತೂಲ್ ಜತೆಗೆ 4.6 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ ನಡೆದಿತ್ತು.
ತನಿಖೆಗೆ ಮುಂದಾದ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದರು. ಆರೋಪಿ ನೀಡಿದ ಸುಳಿವಿನ ಮೇರೆಗೆ ಕಳ್ಳರ ಜಾಲ ಬಯಲಾಗಿದೆ. ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ಕಳ್ಳತನ ನಡೆದಿದೆ. ಬಂಧಿತ ನಾಲ್ವರು ಆರೋಪಿ ಗಳು ಮೈಸೂರು ನಗರದವರು. ನಾಲ್ವರಲ್ಲಿ ಒಬ್ಬನ ಮೇಲೆ 3 ಪ್ರಕರಣ, ಮತ್ತೊಬ್ಬನ ಮೇಲೆ 36 ಪ್ರಕರಣ ಹಾಗೂ ಇನ್ನೊಬ್ಬನ ಮೇಲೆ 17 ಪ್ರಕರಣ ದಾಖಲಾಗಿದೆ. ಗಾಂಜಾ ಹೊಂದಿದ್ದ ಆರೋಪಿಯ ಮೇಲೆ 18 ಪ್ರಕರಣಗಳು ದಾಖಲಾಗಿದೆ.