ಬೆಂಗಳೂರು: ಸರ್ಕಾರದಿಂದ ಸಬ್ಸಿಡಿ ಇತ್ಯಾದಿ ಸೌಲಭ್ಯ ಸಿಗುವ ಸ್ಕೀಮ್ಗಳಲ್ಲಿ ಆಧಾರ್ ದಾಖಲೆ ನೀಡುವುದು ಮತ್ತು ಲಿಂಕ್ ಮಾಡುವುದು ಕಡ್ಡಾಯ ಇದೆ. 2019ರ ಹಣ ದುರುಪಯೋಗ ನಿಯಂತ್ರಣ ಕಾಯ್ದೆಯ ಮೂರನೇ ತಿದ್ದುಪಡಿ ನಿಯಮಗಳ ಪ್ರಕಾರ ಸರ್ಕಾರೀ ಸಬ್ಸಿಡಿ ಮತ್ತಿತರ ನೆರವು ಬರುವ ನಿರ್ದಿಷ್ಟ ಯೋಜನೆಗಳಿಗೆ ಆಧಾರ್ ಕಾರ್ಡ್ ದಾಖಲೆ ಸಲ್ಲಿಸುವುದು ಕಡ್ಡಾ ಇದೆ. ಪಿಎಂ ಕಿಸಾನ್ ಯೋಜನೆ, ಗ್ಯಾಸ್ ಏಜೆನ್ಸಿ ಇತ್ಯಾದಿ ಕಡೆ ಆಧಾರ್ ಕಾರ್ಡ್ ದಾಖಲೆ ಸಲ್ಲಿಸುವುದು ಕಡ್ಡಾಯ. ಪಿಎಂ ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಖಾತೆ ತೆರೆಯಲೂ ಆಧಾರ್ ಕಾರ್ಡ್ ಕಡ್ಡಾಯ ಇದೆ.
ಇನ್ನು ನೀವು ಆನ್ ಲೈನ್ ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಬ್ಯಾಂಕಿಂಗ್ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಹೊಂದಿರೋದು ಅಗತ್ಯ. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುವ ಕಾರಣ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡೋದು ಅಗತ್ಯ. ಹಾಗಾದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
ಆನ್ ಲೈನ್ ನಲ್ಲಿ ಲಿಂಕ್ ಮಾಡೋದು ಹೇಗೆ?
-ನೀವು ಖಾತೆ ಹೊಂದಿರುವ ಬ್ಯಾಂಕ್ ಮೊಬೈಲ್ ಅಪ್ಲಿಕೇಷನ್ ಗೆ ಸೈನ್ ಇನ್ ಆಗಿ.
-‘My Account’ ಸೆಕ್ಷನ್ ಗೆ ಹೋಗಿ ‘Services’ ಪುಟಕ್ಕೆ ತೆರಳಿ ಹಾಗೂ ‘View/Update Aadhaar card details’ ಆಯ್ಕೆ ಮಾಡಿ.
-ಆಧಾರ್ ಸಂಖ್ಯೆಯನ್ನು ಎರಡು ಬಾರಿ ನಮೂದಿಸಿ ಹಾಗೂ ಆ ಬಳಿಕ ‘Submit’ ಬಟನ್ ಒತ್ತಿ.
ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ ಬಳಿಕ ನಿಮಗೆ ನೋಟೀಫಿಕೇಷನ್ ಲಭಿಸುತ್ತದೆ.
ಮೊಬೈಲ್ ಹೊರತುಪಡಿಸಿ ಆಪ್ ಲೈನ್ ಮೂಲಕ ಕೂಡ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬಹುದು. ನೀವು ಖಾತೆ ಹೊಂದಿರುವ ಬ್ಯಾಂಕಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಅನ್ನು ಖಾತೆಗೆ ಲಿಂಕ್ ಮಾಡಬಹುದು. ಇದಕ್ಕಾಗಿ ಬ್ಯಾಂಕಿನಿಂದ ಅರ್ಜಿ ಪಡೆದು, ಮಾಹಿತಿಗಳನ್ನು ಭರ್ತಿ ಮಾಡಿ. ಆ ಬಳಿಕ ಫಾರ್ಮ್ ನಲ್ಲಿ ನಿಮ್ಮ ಸಹಿ ಹಾಗೂ ದಿನಾಂಕ ನಮೂದಿಸಿ. ಬಳಿಕ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅದನ್ನು ಬ್ಯಾಂಕಿಗೆ ನೀಡಿ. ಅವರು ನಿಮ್ಮ ಒರಿಜಿನಲ್ ಆಧಾರ್ ಕಾರ್ಡ್ ತೋರಿಸುವಂತೆ ಕೇಳಬಹುದು. ಅದನ್ನು ತೋರಿಸಿ.
ನೀವು ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವ ಮನವಿ ಸಲ್ಲಿಕೆ ಮಾಡಿದ ಬಳಿಕ ಲಿಂಕ್ ಮಾಡಲು ಕೆಲವು ದಿನಗಳು ಬೇಕಾಗುತ್ತವೆ. ಆಧಾರ್ ಲಿಂಕ್ ಮಾಡಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಇದರಲ್ಲಿ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಬಗ್ಗೆ ಮಾಹಿತಿಯಿರುತ್ತದೆ.