ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ಇದು ಹಿಂದೂಗಳ ಅತ್ಯಂತ ಪ್ರಸಿದ್ದ ಹಬ್ಬಗಳಲ್ಲಿ ಒಂದು. ಹಿಂದೂ ಪುರಾಣಗಳ ಪ್ರಕಾರ ಭಗವಾನ್ ವಿಷ್ಣುವಿನ ಒಂಭತ್ತನೇ ಅವತಾರವಾದ ಶ್ರೀಕೃಷ್ಣನು ಈ ದಿನ ಜನಿಸಿದನು. ಆದ್ದರಿಂದ ಈ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ.
ಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದನೆಂದು ನಂಬಲಾದ ಭಕ್ತರು ಜನ್ಮಾಷ್ಟಮಿಯ ತಡರಾತ್ರಿಯಲ್ಲಿ ಕೃಷ್ಣನಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಾಲಯಗಳನ್ನು ಮತ್ತು ಮನೆಗಳನ್ನು ವಿಶಿಷ್ಟವಾಗಿ ಅಲಕಂರಿಸಲಾಗುತ್ತದೆ ಮತ್ತು ದೇವರ ವಿಗ್ರಹಗಳಿಗೆ ಹೊಸ ಬಟ್ಟೆಗಳನ್ನು ಧರಿಸಿ ಅದನ್ನು ಹೂವುಗಳಿಂದ ಅಲಂಕರಿಸುತ್ತಾರೆ. 2024 ರ ಶ್ರೀಕೃಷ್ಣ ಜನ್ಮಾಷ್ಟಮಿಯ ಕುರಿತು ಸಂಪೂರ್ಣ ಮಾಹಿತಿ ಹೀಗಿದೆ ನೋಡಿ..
ಕೃಷ್ಣ ಜನ್ಮಾಷ್ಟಮಿ 2024 ಶುಭ ಮುಹೂರ್ತ
– ಅಷ್ಟಮಿ ತಿಥಿ ಆರಂಭ: 2024 ರ ಆಗಸ್ಟ್ 26 ರಂದು ಮುಂಜಾನೆ 3:39 ರಿಂದ
– ಅಷ್ಟಮಿ ತಿಥಿ ಮುಕ್ತಾಯ: 2024ರ ಆಗಸ್ಟ್ 27 ರಂದು ಮುಂಜಾನೆ 2:19
– ರೋಹಿಣಿ ನಕ್ಷತ್ರ ಆರಂಭ: 2024 ರ ಆಗಸ್ಟ್ 26 ರಂದು ಮಧ್ಯಾಹ್ನ 3:55
– ರೋಹಿಣಿ ನಕ್ಷತ್ರ ಮುಕ್ತಾಯ: 2024ರ ಆಗಸ್ಟ್ 27 ರಂದು ಮಧ್ಯಾಹ್ನ 3:38
– ನಿಶಿತಾ ಪೂಜಾ ಸಮಯ: 2024ರ ಆಗಸ್ಟ್ 27 ರಂದು ಮಧ್ಯರಾತ್ರಿ 12:01 ರಿಂದ 12:45 ರವರೆಗೆ
– ಮಧ್ಯರಾತ್ರಿ ಶುಭ ಮುಹೂರ್ತ: 2024ರ ಆಗಸ್ಟ್ 27 ರಂದು ಮಧ್ಯರಾತ್ರಿ 12:23 ಕ್ಕೆ
– ಪಾರಣ ಮುಹೂರ್ತ: 2024ರ ಆಗಸ್ಟ್ 27 ರಂದು ಮಧ್ಯಾಹ್ನ 3:38
– ರೋಹಿಣಿ ನಕ್ಷತ್ರ ಮುಕ್ತಾಯ ಸಮಯ: 2024ರ ಆಗಸ್ಟ್ 27 ರಂದು ಮಧ್ಯಾಹ್ನ 3:38
– ಪಾರಣ ಮುಹೂರ್ತ: 2024ರ ಆಗಸ್ಟ್ 27 ರಂದು ಮಧ್ಯರಾತ್ರಿ 12:45
– ಚಂದ್ರೋದಯ ಸಮಯ: 2024 ರ ಆಗಸ್ಟ್ 26 ರಂದು ರಾತ್ರಿ 11:20
ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ
ಮುಂಜಾನೆ ಬೇಗ ಎದ್ದು, ಪವಿತ್ರ ಸ್ನಾನ ಮಾಡಿ ಮತ್ತು ಭಕ್ತಿಯಿಂದ ಕಠಿಣ ಉಪವಾಸವನ್ನು ಆಚರಿಸುವ ಸಂಕಲ್ಪವನ್ನು ತೆಗೆದುಕೊಳ್ಳಿ.
– ಪೂಜಾ ವಿಧಿವಿಧಾನಗಳನ್ನು ಪ್ರಾರಂಭಿಸುವ ಮೊದಲು ಮನೆ ಮತ್ತು ದೇವರ ಕೋಣೆಯನ್ನು ಸ್ವಚ್ಛಗೊಳಿಸಿ.
– ನಂತರ ಬಾಲ ಗೋಪಾಲನಿಗೆ ನೀರು, ಗಂಗಾಜಲ, ಪಂಚಾಮೃತದಿಂದ ಅಭಿಷೇಕ ಮಾಡಿಸಿ.
– ಶ್ರೀಕೃಷ್ಣನಿಗೆ ಅಲಂಕಾರವನ್ನು ಮಾಡಿ.
– ಹಳದಿ ಚಂದನದ ತಿಲಕವನ್ನು ಇಡಿ.
– ಮರದ ಹಲಗೆಯನ್ನು ತೆಗೆದುಕೊಂಡು ಅದರ ಮೇಲೆ ಹಳದಿ ಬಣ್ಣದ ಬಟ್ಟೆಯನ್ನು ಹರಡಿ ಅದರ ಮೇಲೆ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆ ,ಮಾಡಿ ಹೂವಿನಿಂದ ಅಲಂಕರಿಸಿ.
– ನಂತರ ಕೃಷ್ಣನ ವಿಗ್ರಹಕ್ಕೆ ತುಳಸಿ ಎಲೆ, ಪಂಚಾಮೃತ, ಸಿಹಿತಿಂಡಿಗಳು ಹಾಗೂ 5 ವಿವಿಧ ರೀತಿಯ ಹಣ್ಣುಗಳು ಮತ್ತು ಒಣಹಣ್ಣುಗಳನ್ನು ಅರ್ಪಿಸಿ.
– ಶ್ರೀಕೃಷ್ಣನನ್ನು ಒಲಿಸಿಕೊಳ್ಳಲು 21, 31 ಅಥವಾ 56 ವಿಧದ ಭೋಗಗಳನ್ನು ಅರ್ಪಿಸಿ.
– ಶ್ರೀಕೃಷ್ಣನಿಗೆ ಆರತಿಯನ್ನು ಮಾಡಿ. ಈ ದಿನ ಮಧ್ಯರಾತ್ರಿ ಶ್ರೀಕೃಷ್ಣನನ್ನು ಪೂಜಿಸುವುದು ಹೆಚ್ಚು ಫಲಪ್ರದವಾಗಿರುತ್ತದೆ.
ಕೃಷ್ಣ ಜನ್ಮಾಷ್ಟಮಿ: ಇತಿಹಾಸ ಶ್ರೀಕೃಷ್ಣನು ಈ ದಿನ ಮಥುರಾ ನಗರದಲ್ಲಿ ಜನಿಸಿದನು. ಕೃಷ್ಣ ಹುಟ್ಟಿದ ಘಳಿಗೆಯಿಂದ ಅವನ ಚಿಕ್ಕಪ್ಪ ಕಂಸನಿಂದ ಜೀವಕ್ಕೇ ಅಪಾಯವಿತ್ತು. ಕೃಷ್ಣನನ್ನು ರಕ್ಷಿಸುವ ಸಲುವಾಗಿ ಅವನ ತಂದೆ ವಾಸುದೇವ ಅವನನ್ನು ಸಣ್ಣ ಬುಟ್ಟಿಯಲ್ಲಿ ಮಲಗಿಸಿ ಯಮುನಾ ನದಿಯ ಮೂಲಕ ಬೃಂದಾವನಕ್ಕೆ ಕರೆದೊಯ್ದನು. ಕೃಷ್ಣನ್ನು ಯಶೋಧ ಮತ್ತು ನಂದಾ ಪುತ್ರನಾಗಿ ದತ್ತು ಪಡೆದರು.
ಹಿಂದೂ ಪುರಾಣಗಳ ಪ್ರಕಾರ ಈ ದಿನ ಮಹತ್ವದ ದಿನವಾಗಿದೆ. ಶ್ರೀ ಕೃಷ್ಣನ ಭಕ್ತರು ಈ ದಿನದ ವಿಶೇಷವಾಗಿ ಕೃಷ್ಣನ ದೇಗುಲಗಳಿಗೆ ಭೇಟಿ ನೀಡುತ್ತಾರೆ. ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ. ಇನ್ನು ಕೆಲವರು ಉಪವಾಸ ಕೈಗೊಳ್ಳುವ ಮೂಲಕ ಶ್ರೀಕೃಷ್ಣನ ಮೊರೆ ಹೋಗುತ್ತಾರೆ.
ಆಚರಿಸುವ ವಿಧಾನ ದೇವರ ಮನೆಯಲ್ಲಿ ಶ್ರೀ ಕೃಷ್ಣನ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತದೆ. ದೇವರ ಮುಂದೆ ದೀಪ ಬೆಳಗಿ ಪ್ರಾರ್ಥಿಸಲಾಗುತ್ತದೆ. ವಿಶೇಷವಾಗಿ ದೇವರಿಗೆ ಬೆಣ್ಣೆ, ಕಲ್ಲು ಸಕ್ಕರೆ ಜತೆಗೆ ತಯಾರಿಸಿದ ಇನ್ನಿತರ ಖಾದ್ಯಗಳನ್ನು ನೈವೇದ್ಯಕ್ಕೆ ನೀಡಲಾಗುತ್ತದೆ. ಶ್ರೀ ಕೃಷ್ಣನಿಗೆ ತುಳಸಿ ಮತ್ತು ಗಂಗಾಜಲ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಶ್ರೀಕೃಷ್ಣನ ಪ್ರಾರ್ಥನೆ ಕೈಗೊಳ್ಳುವ ಮೂಲಕ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.