ನವದೆಹಲಿ:- ಆಸ್ಪತ್ರೆಯ ಶವಾಗಾರದೊಳಗೆ ಹೆಣದ ಪಕ್ಕ ಸಿಬ್ಬಂದಿಯ ಸರಸ ಸಲ್ಲಾಪದ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕೋಡಿ: ಸರ್ಕಾರಿ ಕಾಲೇಜ್ ನಲ್ಲಿ ಕಳ್ಳತನ: ಖದೀಮನ ಕರಾಮತ್ತು CCTVಯಲ್ಲಿ ಸೆರೆ!
ವಿಡಿಯೋ ವೈರಲ್ ಆದ ಬಳಿಕ ಆ ಆಸ್ಪತ್ರೆಯ ಸಿಬ್ಬಂದಿಯಾದ ಮಹಿಳೆ ಮತ್ತು ಇಬ್ಬರು ಪುರುಷರು ಸೇರಿದಂತೆ ಮೂವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಶವಾಗಾರದ ಫ್ರೀಜರ್ನೊಳಗೆ ಮೈ ಕೊರೆಯುವ ಚಳಿಯಲ್ಲಿ ಜೋಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿತ್ತು. ಇದನ್ನು ಇನ್ನೊಬ್ಬ ವ್ಯಕ್ತಿ ವಿಡಿಯೋ ಕೂಡ ಮಾಡಿದ್ದಾನೆ. ಒಬ್ಬ ಮಹಿಳೆಯೊಂದಿಗೆ ಆ ಪುರುಷ ಅತ್ಯಂತ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನೊಬ್ಬ ವ್ಯಕ್ತಿ ಇದನ್ನು ಮೊಬೈಲ್ ಫೋನ್ನ ಕ್ಯಾಮೆರಾದಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ.
ಈ ಆತಂಕಕಾರಿ ಘಟನೆ ನಡೆದ ನಿಖರವಾದ ಸ್ಥಳ ಮತ್ತು ಆಸ್ಪತ್ರೆ ಇನ್ನೂ ತಿಳಿದಿಲ್ಲವಾದರೂ, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಆಸ್ಪತ್ರೆಯೊಳಗಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ನೆಟ್ಟಿಗರು ಎತ್ತುತ್ತಿದ್ದಾರೆ.
ಅನೇಕ ಇಂಟರ್ನೆಟ್ ಬಳಕೆದಾರರು ತಮ್ಮ ನಾಚಿಕೆಯಿಲ್ಲದ ವರ್ತನೆಗಾಗಿ ಆ ಜೋಡಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ವಿನಂತಿಸಿದರು. ಆದರೆ ಇತರರು ಮೃತದೇಹಗಳಿಂದ ಸುತ್ತುವರೆದಿರುವ ಸ್ಥಳದಲ್ಲಿ ಯಾರಾದರೂ ಈ ರೀತಿಯ ಅಸಭ್ಯ ಕೃತ್ಯಗಳನ್ನು ಮಾಡಲು ಸಾಧ್ಯವೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.