ಚಿಕ್ಕೋಡಿ:- ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನುಗ್ಗಿ ಖದೀಮ ಕಳ್ಳತನ ಮಾಡಿದ ಘಟನೆ ಜರುಗಿದೆ.
ಹಾಡಹಗಲೇ ಮನೆಗೆ ನುಗ್ಗಿ NRI ಪ್ರಜೆಯ ಮೇಲೆ ಶೂಟೌಟ್-ಭೀಕರ ದೃಶ್ಯ ಭಾರೀ ವೈರಲ್!
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಾ ಪಟ್ಟಣದ ಹೊರವಲಯದಲ್ಲಿ ಕಾಲೇಜಿನಲ್ಲಿ ಕಳ್ಳ ತನ್ನ ಕರಾಮತ್ತು ತೋರಿದ್ದಾನೆ.
ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಂಪ್ಯೂಟರ್ ನ ಬಿಡಿ ಭಾಗಗಳು ಮತ್ತು ಸೌಂಡ್ ಬಾಕ್ಸ್ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಅಥಣಿ ಅಪರಾಧ ವಿಭಾಗದ ಪಿಎಸ್ಐ ಭೇಟಿ, ಪರಿಶೀಲನೆ ಮಾಡಿದ್ದು, ಕಳ್ಳನ ಹಿಡಿಯಲು ಬಲೆ ಬೀಸಿದ್ದಾರೆ.
ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.