ಬೆಂಗಳೂರು:- ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್ ಬೇಟೆಗೆ ಇಳಿದ ಟ್ರಾಫಿಕ್ ಪೊಲೀಸರು ಒಂದೇ ದಿನಕ್ಕೆ 779 ಪ್ರಕರಣ ದಾಖಲಾಗಿದೆ.
ನಿನ್ನೆ ಒಂದೇ ದಿನ 1200 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಫೀಲ್ಡ್ಗೆ ಇಳಿದಿದ್ದು 34,676 ವಾಹನಗಳ ತಪಾಸಣೆ ನಡೆಸಿ 779 ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ವಾಹನಗಳನ್ನು ವಶಕ್ಕೆ ಪಡೆದು ನೋಟಿಸ್ ಕೊಟ್ಟು ಕಳಿಸಿದ್ದಾರೆ. ಅಷ್ಟೇ ಅಲ್ಲಾ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಡ್ರೈವಿಂಗ್ ಲೈಸನ್ಸ್ ರದ್ದು ಪಡಿಸಲು ಕ್ರಮ ಕೈಗೊಂಡಿದ್ದಾರೆ.
ಇದೇ ಕಾರ್ಯಾಚರಣೆ ನಗರದಾದ್ಯಂತ ಇಂದು ಕೂಡ ಮುಂದುವರೆಯಲಿದೆ. ಇಂದು ಶನಿವಾರ ಆಗಿರೋದ್ರಿಂದ ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗೊ ಸಾಧ್ಯತೆ ಇದೆ. ಹಾಗಾಗಿ ಸಂಚಾರ ಪೊಲೀಸರು ಮತ್ತಷ್ಟು ಅಲರ್ಟ್ ಆಗಲಿದ್ದಾರೆ. ಸಿಟಿ ಜನ ಯಾವುದಕ್ಕೂ ಸೇಫ್ ಆಗಿರಿ. ಕುಡಿದು ವಾಹನ ಚಾಲನೆ ಮಾಡಿದ್ರೆ ದಂಡ ಬೀಳೋದು ಫಿಕ್ಸ್. ಇದು ಒಂದು ಕಡೆ ಆದ್ರೆ ನಿಮ್ಮ ಜೀವಕ್ಕೆ ಕುತ್ತು ತರುವ ಸಾಧ್ಯತೆ ಕೂಡ ಇದೆ.