ಬಾಗಲಕೋಟೆ :- ಅದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೇ ಅದೃಷ್ಟದ ಕ್ಷೇತ್ರ.ಸರ್ಕಾರ ಯಾವುದೆ ಇರಲಿ ಈ ಕ್ಷೇತ್ರಕ್ಕೆ ಸಂಪುಟ ದರ್ಜೆ ಸಚಿವ ಸ್ಥಾನ ಫಿಕ್ಸ್.ಕಳೆದ ಮೂರು ದಶಕಗಳಿಂದ ಸಚಿವರ ಆಳ್ವಿಕೆಗೆ ಒಳಪಟ್ಟ ವಿಧಾನ ಸಭಾ ಕ್ಷೇತ್ರವಿದು.ಈ ಮೀಸಲು ಕ್ಷೇತ್ರದ ಈ ಹಳ್ಳಿಯ ಮಹಿಳೆಯರ ಪರಿಸ್ಥಿತಿ ಆ ದೇವರಿಗೆ ಪ್ರೀತಿ.ಈ ಗ್ರಾಮದ ಮಹಿಳೆಯರಿಗೆ ಬಹಿರ್ದೆಸೆ ಚಿಂತೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನಿಮಗಿದು ಗೊತ್ತಾ!?, ವಾಲ್ನಟ್ ಖರೀದಿಸುವಾಗ ಯಾವಾಗಲೂ ಸಿಪ್ಪೆ ಇರುವುದನ್ನೇ ಖರೀದಿಸಬೇಕಂತೆ: ಯಾಕೆ?
ಒಂದೆಡೆ ಬಹಿರ್ದೆಸೆಗೆ ಪರದಾಡ್ತಿರೋ ಮಹಿಳೆಯರು. ಮತ್ತೊಂದೆಡೆ ಚುನಾವಣೆ ಬಂದಾಗ ಸಮಸ್ಯೆ ಪರಿಹರಿಸುವ ಆಶ್ವಾಸನೆ ನೀಡಿ ಮತಗಿಟ್ಟಿಸಿಕೊಂಡು ಹೊದವರ ವಿರುದ್ಧ ಆಕ್ರೋಶ ಹೊರಹಾಕ್ತಿರೋ ಮಹಿಳೆಯರು.
ಇನ್ನೊಂದೆಡೆ ಕಳೆದ ಮೂರು ದಶಕಗಳಿಂದ ಮಂತ್ರಿಗಿರಿ ಸ್ಥಾನ ಒಲಿಸಿಕೊಂಡ ಅದೃಷ್ಟದ ಕ್ಷೇತ್ರದ ಹೆಗ್ಗಳಿಕೆಗೆ ಪಾತ್ರವಾಗಿರೋ ಮೀಸಲು ವಿಧಾನಸಭಾ ಕ್ಷೇತ್ರ.ಇಂತಹದೊಂದು ಸಮಸ್ಯೆಗೆ ಸಾಕ್ಷಿಯಾಗಿದ್ದು ಮುಧೋಳ ಕ್ಷೇತ್ರದ ವೆಂಕಟಾಪೂರ ಗ್ರಾಮ.ಹೌದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ವೆಂಕಟಾಪೂರ ಗ್ರಾಮದಲ್ಲಿ ಸೌಚಾಲಯವೇ ಇಲ್ಲ.ಗ್ರಾಮದ ಮಹಿಳೆಯರು ಶೌಚಾಲಯಕ್ಕೆ ಹೋಗಬೇಕು ಅಂದ್ರೆ ಸ್ಥಳವೇ ಇಲ್ಲ.ಗ್ರಾಮದ ಬಳಿ ಒಂದುಕಡೆ ರಾಜ್ಯ ಹೆದ್ದರಿ, ಇನ್ನೊಂದುಕಡೆ ಗ್ರಾಮದ ಮುಖ್ಯರ ರಸ್ತೆ ಮದ್ಯವಿರೋ 2 ಗುಂಟೆ ಜಾಗವೇ ಮಹಿಳೆಯರ ಬಹಿರ್ದೆಸೆ ಸ್ಥಳ.ಮಹಿಳೆಯರು ಮಾನ ಮುಚ್ಚಿಕೊಳ್ಳಲು ಜಾಗದ ಸುತ್ತ ಸೀರೆ ಕಟ್ಟಿ ಬಹಿರ್ದೆಸೆ ಮಾಡುತ್ತಿದ್ದಾರೆ.ಮಹಿಳೆಯರು ಸರ್ಕಾರ ಹಾಗೂ ಜನಪ್ರತಿನಿದಿಗಳ ವಿರುದ್ಧ ಹಿಡಿ ಶಾಪ ಹಾಕ್ತಿದ್ದಾರೆ…
ಇನ್ನು ಮುಧೋಳ ಮತಕ್ಷೇತ್ರ ಕಳೆದ ಮೂರು ದಶಕಗಳಿಂದ ಸಚಿವರನ್ನ ಹೊಂದಿದೆ.ಒಂದ ಅವದಿಗೆ ಕಶರಹೋಳ ಮಂತ್ರಿಯಾಗಿದ್ರೆ ಮತ್ತೊಂದ ಅವದಿಗೆ ತಿಮ್ಮಾಪೂರ ಸಚಿವರಾಗಿರುತ್ತಾರೆ.ಆದ್ರೆ ಈ ಕ್ಷೇತ್ರದ ವೆಂಕಟಾಪೂರ ಗ್ರಾಮದ ಮಹಿಳೆಯ ಸಮಸ್ಯೆ ಮಾತ್ರ ಯಾರ ಅರಿವಿಗೂ ಬಂದಿಲ್ಲ. ಈ ದೃಶ್ಯ ನೋಡಿದರೆ ಎಂಥವರಿಗೂ ಖೇದಕರ ಸಂಗತಿ ಅನಿಸಲಾರದು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಮಹಿಳೆಯರ ಬಹಿರ್ದೆಸೆಗೆ ಕುಳಿತುಕೊಳ್ಳಬೇಕು ಅಂದ್ರೆ ಮಹಿಳೆಯರು ತಮ್ಮ ಬಟ್ಟೆಗಳಿಂದಲೇ ಬಯಲು ಶೌಚಾಲಯ ನಿರ್ಮಾಣ ಮಾಡಿಕೊಂಡು ಬೈಹಿರ್ದೆಸೆ ಮಾಡುತ್ತಾರೆ.ಈ ಗ್ರಾಮದಲ್ಲಿ ನನಸಾಗದ ಬಯಲು ಮುಕ್ತ ಶೌಚಾಲಯದ ಕನಸು. ವೆಂಕಟಾಪುರ ಗ್ರಾಮದ ಜನರಿಗೆ ಭರವಸೆ ಕೊಟ್ಟು ವರ್ಷ ಕಳೆದರೂ ಆಗದ ಕಾಮಗಾರಿಗೆ ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತ ಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನ ಜಾರಿಗೆ ತಂದು ಅಧಿಕಾರಿಗಳು ಮಾತ್ರ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಗಳ ಅಸಡ್ಡೆಗೆ ವೆಂಕಟಾಪೂರ ಗ್ರಾಮದ ಮಹಿಳೆಯರ ಪರದಾಟವೇ ಸಾಕ್ಷಿ.ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿ ಇಂತಹ ಸಮಸ್ಯಾತ್ಮಕ ಗ್ರಾಮ ಇದೆ ಅಂದ್ರೆ ಬಲಾಗ್ತಿಲ್ಲ.ಸಚಿವರೇ ಇನ್ನಾದ್ರೂ ಎಚ್ಚತ್ತುಕೊಂಡು ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಅವರ ಪ್ರೀತಿವಿಶ್ವಾದ ಗೆಲ್ಲಿ ಅನ್ನೋದು ನಮ್ಮ ಆಶಯ.