ಹುಬ್ಬಳ್ಳಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನಗರದ ಶ್ರೀನಿವಾಸ ಗಾರ್ಡನ್ನಲ್ಲಿಂದು ನಡೆದ ಯು-ಜೀನಿಯಸ್ 3.0 ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಳಗಾವಿ ಜಿಎಸ್ಎಸ್ ಪಿಯು ಕಾಲೇಜಿನ ತನ್ಮಯ್ ಕುರುಂದ್ದಾಡ, ರಾಜಿ ಗೊಜಗೆರ್ಕ ಜಯಗಳಿಸಿದರು.
ನಿಮಗಿದು ಗೊತ್ತಾ!?, ವಾಲ್ನಟ್ ಖರೀದಿಸುವಾಗ ಯಾವಾಗಲೂ ಸಿಪ್ಪೆ ಇರುವುದನ್ನೇ ಖರೀದಿಸಬೇಕಂತೆ: ಯಾಕೆ?
ಬೆಳಗಾವಿಯ ಗೋಗಟೆ ವಾಣಿಜ್ಯ ಹಾಗೂ ವಿಜ್ಞಾನ ಪಿಯು ಕಾಲೇಜಿನ ಪಾರ್ಥ ವಿ. ಶಿಂಧೆ, ಪೂರ್ವಿ ವಿ. ರಾಜಪುರೋಹಿತ ಅವರು ರನ್ನರ್ಅಪ್ ಆದರು. ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ 13 ಜಿಲ್ಲೆಗಳ 120 ಶಾಲೆಗಳ 906 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆಗೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲಾದ ಜೋಶಿ, “ವಿದ್ಯಾರ್ಥಿಗಳು ಮೊದಲು ಓದಬೇಕು. ಓದಿದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸರಿಯಾದ ಸಮಯಕ್ಕೆ ಚಾಕಚಕ್ಯತೆಯಿಂದ ಪ್ರಶ್ನೆಗೆ ಉತ್ತರಿಸಬೇಕು. ಇಂತಹ ಜ್ಞಾನ ಪ್ರತಿಫಲನಕ್ಕೆ ರಸಪ್ರಶ್ನೆ ಸ್ಪರ್ಧೆ ಸಹಕಾರಿಯಾಗಿದೆ’ ಎಂದರು.
‘ಮೊಬೈಲ್ ಪೋನ್, ಟಿವಿಯನ್ನು ಅವಶ್ಯಕತೆಗೆ ತಕ್ಕಷ್ಟೇ ನೋಡಿದವರು ಅದೇ ಮೊಬೈಲ್, ಪೋನ್, ಟಿವಿಯಲ್ಲಿ ಕಾಣಿಸಿಕೊಳ್ಳುವಷ್ಟು ಸಾಧನೆ ಮಾಡಬಹುದು. ಮೊಬೈಲ್ ಫೋನ್ನಲ್ಲಿನ ಗೇಮ್ ಬಿಟ್ಟು ನಿಜವಾದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಆತ್ಮವಿಶ್ವಾಸ ಹೆಚ್ಚಿಸುವ ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು. “ಧಾರವಾಡ ಲೋಕಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಡೆಸ್ಕ್ ವಿತರಣೆ, ಕೊಠಡಿ ನಿರ್ಮಾಣಕ್ಕೆ ಸಿಎಸ್ಆರ್ ನಿಧಿಯಡಿ ಯೂನಿಯನ್ ಬ್ಯಾಂಕ್ ಸಹ ಕೈಜೋಡಿಸಬೇಕು’ ಎಂದರು.
ಬ್ಯಾಂಕ್ನ ಹುಬ್ಬಳ್ಳಿ ಪ್ರಾದೇಶಿಕ ಮುಖ್ಯಸ್ಥರಾದ ಕೆ. ಭೈರೇಗೌಡ, ಬೆಳಗಾವಿ ಪ್ರಾದೇಶಿಕ ಮುಖಸ್ಥೆ ಆರತಿ ರೌರ್ನಿಯಾರ್, ಕಲಬುರ್ಗಿ ಪ್ರಾದೇಶಿಕ ಮುಖ್ಯಸ್ಥೆ ತೇಜಸ್ವಿನಿ ವಿ.ಸಿ, ಕ್ವಿಜ್ ಮಾಸ್ಟರ್ ಬ್ರೆಟಿ ಅಲ್ಲೆ, ಉದ್ಯಮಿ ವಿ.ಎಸ್.ವಿ.ಪ್ರಸಾದ್, ಮೋಹನ್ ಕುಮಾರ, ವೈ.ಎನ್. ರಿತೇಶ್ ಇದ್ದರು. ವಿಜೇತ ತಂಡವು ಮೈಸೂರಿನಲ್ಲಿ ನಡೆಯುವ ವಲಯ ಮಟ್ಟದ ರಸಪಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಅಲ್ಲಿ ಜಯಗಳಿಸುವ 2 ತಂಡಗಳು ನವೆಂಬರ್ 7 ರಂದು ಮುಂಬೈನಲ್ಲಿ ಆಯೋಜಿಸಿರುವ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿವೆ
ಪ್ರಾದೇಶಿಕ ಮುಖ್ಯಸ್ಥರಾದ ಕೆ.ಭೈರೇಗೌಡ, ಬ್ಯಾಂಕ್ ನ ವಿವಿಧ ವಿಭಾಗದ ಪ್ರಮುಖರು,ಸಿಬ್ಬಂದಿ ವರ್ಗ ಮುಂತಾದವರು ಇದ್ದರು.