ಕೋಲಾರ:- ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಭಾರತದ ಮಾಜಿ ಕ್ರಿಕೆಟಿಗ ರುದ್ರ ಪ್ರತಾಪ್ ಸಿಂಗ್ ಮಗ ಇಂಗ್ಲೆಂಡ್ ತಂಡದ ಪರವಾಗಿ ಕಣಕ್ಕೆ
ಅಧ್ಯಕ್ಷ್ಯ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಕೋಮಲ ನಾರಾಯಣ್ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮೀ ಕೃಷ್ಣಪ್ಪ ಸ್ಪರ್ಧಿಸಿದ್ದರು.
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ವಿಜಯಲಕ್ಷ್ಮೀ ಕೃಷ್ಣಪ್ಪ ಸೇರಿದ್ದಾರೆ. 27 ಸದಸ್ಯರ ಬಲ ಹೊಂದಿರುವ ಮಾಲೂರು ಪುರಸಭೆಯಲ್ಲಿ ಶಾಸಕ ನಂಜೇಗೌಡ ಸೇರಿ ಒಟ್ಟು 28 ಮತಗಳು ಇದ್ದವು. 19 ಮತಗಳು ಪಡೆದು ಕಾಂಗ್ರೆಸ್ ಅಭ್ಯರ್ಥಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ.
ಬಿಜೆಪಿ ಗೆ 7 ಮತಗಳು ಪಡೆದು ಸೋಲಾಗಿದೆ. ಕಾಂಗ್ರೆಸ್ ನ 11 ಸದಸ್ಯರು, ಜೆಡಿಎಸ್ ನ ಒಂದು, ಮೂರು ಪಕ್ಷೇತರ,ಮೂರು ಬಿಜೆಪಿ, ಶಾಸಕ ನಂಜೇಗೌಡ ಅಧ್ಯಕ್ಷೆ ಪರ ಮತ ಹಾಕಿದ್ದಾರೆ.
ಒಬ್ಬ ಬಿಜೆಪಿ ಸದಸ್ಯ ಗೈರಾಗಿದ್ದು, ಮತ್ತೊಬ್ಬ ಬಿಜೆಪಿ ಸದಸ್ಯರಿಂದ ಮತ ಚಲಾವಣ ಮಾಡದೆ ತಟಸ್ಥವಾಗಿತ್ತು.
ಒಟ್ಟು 27 ಸದಸ್ಯರಲ್ಲಿ 11 ಕಾಂಗ್ರೆಸ್, 1 ಜೆಡಿಎಸ್,5 ಪಕ್ಷೇತರ ,10 ಬಿಜೆಪಿ ಸದಸ್ಯರ ಬಲ ಹೊಂದಿತ್ತು ಎನ್ನಲಾಗಿದೆ.