ಚಿತ್ರದುರ್ಗ: ದರೋಡೆ ಪ್ರಕರಣದ ಆರೋಪಿಯೊಬ್ಬ ಚಿತ್ರದುರ್ಗ ಜಿಲ್ಲಾ ಕೋರ್ಟ್ ನಲ್ಲಿ ಕಿಟಕಿಯ ಗ್ಲಾಸ್ ಕೈನಿಂದ ಗುದ್ದಿ, ರಂಪಾಟ ಮಾಡಿರುವ ಘಟನೆ ಜರುಗಿದೆ.
ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ: ದೆಹಲಿಗೆ ತೆರಳಿದ ಸಿಎಂ, ಹೈಕಮಾಂಡ್ ಜೊತೆ ಚರ್ಚೆ!
ಆರೋಪಿ ಸಮ್ಮು ಅಲಿಯಾಸ್ ಬಷೀರ್ ಎಂಬಾತನಿಂದ ಈ ಕೃತ್ಯ ನಡೆಸಲಾಗಿದೆ. ಆಗಸ್ಟ್ 23 ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಚಾರಣೆಗೆಂದು ಕೋರ್ಟ್ ಗೆ ಕರೆತರಲಾಗಿತ್ತು. ಈ ವೇಳೆ ಕ್ಷುಲ್ಲಕ ವಿಷಯಕ್ಕೆ ಕೋರ್ಟ್ ಕಾರಿಡಾರ್ ನಲ್ಲಿದ್ದ ಕಿಟಕಿಯ ಗ್ಲಾಸ್ ಗೆ ಕೈನಿಂದ ಗುದ್ದಿ, ರಂಪಾಪ ಮಾಡಿದ್ದಾನೆ.
ಇನ್ನೂ ಇದೇ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಪೇದೆಗಳ ಮೇಲೂ ಕೂಡಾ ಹಲ್ಲೆಗೆ ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ಕೂಡಲೇ ಎಚ್ಚತ್ತ ಪೊಲೀಸರು ಆತನಿಂದ ಗ್ಲಾಸ್ ಕಸಿದುಕೊಂಡು ರಕ್ಷಣೆ ಮಾಡಿದ್ದಾರೆ.
ಚಿತ್ರದುರ್ಗ ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಮಿ ಸಮೀರ್ ಎಂಬುವವರ ಮನೆಯಲ್ಲಿ ಲಕ್ಷಾಂತರ ಹಣ ದರೋಡೆ ನಡೆಸಿದ್ದ ಪ್ರಕರಣದಲ್ಲಿ ಸಮ್ಮು ಅಲಿಯಾಸ್ ಬಷೀರ್ ಬಂಧನವಾಗಿತ್ತು. ಕೂಡಲೇ ಸಮ್ಮು ಕೈಗೆ ಗಾಯವಾಗಿದ್ದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಾ ನೀಡಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಬಂಡಾರು, ಜೈಲು ಅಧಿಕ್ಷಕರಾದ ಸಿದ್ದರಾಮ ಬಿ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಕೋರ್ಟ್ ಆವರಣದ ಹೊರಭಾಗದಲ್ಲಿ ಪೊಲೀಸ್ ಜೀಪಿನಲ್ಲಿ ಕುಳಿತಿದ್ದ ಆರೋಪಿ ಸಮ್ಮು ಜೈಲು ಅಧಿಕಾರಿಗಳು & ಸಿಬ್ಬಂದಿಗಳ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.