ಬೆಂಗಳೂರು:- ಬೆಂಗಳೂರಿನಲ್ಲಿ ವೈರಲ್ ಇನ್ಫೆಕ್ಷನ್ ಎಫೆಕ್ಟ್ ನಿಂದಾಗಿ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲೆ ಪ್ರಮಾಣದ ಪರೀಕ್ಷೆಗಳು ನಡೆಯುತ್ತಿದ್ದು, ಲ್ಯಾಬ್ಗಳ ಮೇಲೆ ಒತ್ತಡ ಹೆಚ್ಚಿದೆ. ಬೆಳಗ್ಗೆ ಉರಿ ಬಿಸಿಲು, ಸಂಜೆ ಆಗುತ್ತಿದ್ದಂತೆ ಮಳೆ. ಹೀಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವೆದರ್, ಸದ್ಯ ಸಿಟಿ ಜನರ ಆರೋಗ್ಯ ಹದಗೆಡಿಸಿದೆ.
DK Shivakumar: ನನಗೆ ಲೋಕಾಯುಕ್ತದಿಂದಲೇ ಹಿಂಸೆ ಹೆಚ್ಚಾಗಿದೆ; ಡಿಕೆ ಶಿವಕುಮಾರ್!
ಹುಷಾರ್ ಇಲ್ಲ ಅಂತ ಆಸ್ಪತ್ರೆಗೆ ವಿಸಿಟ್ ಕೊಡುವವರ ಸಂಖ್ಯೆ ದುಪ್ಪಟ್ಟಾಗಿದ್ದು, ಟೆಸ್ಟಿಂಗ್ ಪ್ರಮಾಣ ಹೆಚ್ಚಳಗೊಂಡಿದೆ. ಜಿಗಣಿಯಲ್ಲಿ ಜೀಕಾ ವೈರಸ್ ಪತ್ತೆ ಬೆನ್ನಲ್ಲೇ ಅಲರ್ಟ್ ಆದ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಲು ನಗರದ ಆಸ್ಪತ್ರೆಗಳಿಗೆ ಸೂಚಿಸಿದೆ. ಜೀಕಾ, ಡೆಂಘಿ ಗುಣಲಕ್ಷಣಗಳನ್ನು ನೆಗ್ಲೆಟ್ ಮಾಡದಂತೆ ತಿಳಿಸಿದೆಮ ಹೀಗಾಗಿ ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಪ್ರಮಾಣ ದಾಖಲೆ ರೀತಿಯಲ್ಲಿ ಏರಿಕೆ ಕಂಡಿದೆ.
ಒಂದು ವಾರಗಳ ಕಾಲ ಶೀತ, ಕೆಮ್ಮು, ಜ್ವರ, ಮೈಕೈ ನೋವು, ತಲೆನೋವು, ಮೈ ಮೇಲೆ ರಾಶ್ ಇದ್ದರೆ ಟೆಸ್ಟಿಂಗ್ ಮಾಡಿಸಲು ತಿಳಿಸಿದೆ. ಹೀಗಾಗಿ ಈ ಗುಣಲಕ್ಷಣಗಳನ್ನು ಹೊತ್ತು ಬರುವವರಿಗೆ ಟೆಸ್ಟಿಂಗ್ ಮಾಡಿಸಲಾಗ್ತಿದೆ. ವೈರಲ್ ಇನ್ಫೆಕ್ಷನ್ ಮುಖ್ಯವಾಗಿ ಡೆಂಘಿ, ಜೀಕಾ ಗುಣಲಕ್ಷಣಗಳು ಇದ್ದರೆ ವಿವಿಧ ಮಾದರಿಯ ಬ್ಲಡ್ ಟೆಸ್ಟ್ ನಡೆಸಲಾಗ್ತಿದೆ. ಕೇವಲ ಜಯನಗರ ಸಾರ್ವಜನಿಕ ಆಸ್ಪತ್ರೆ ಒಂದರೆಲ್ಲೇ ಪ್ರತಿ ದಿನ 1200 ರಿಂದ 1400 ರೋಗಿಗಳು ಓಪಿಡಿಗೆ ಬರ್ತಿದ್ದಾರೆ. ಈ ಪೈಕಿ ರೋಗ ಲಕ್ಷಣ ಕಂಡು ಬರುವ 400 ರಿಂದ 450 ರೋಗಿಗಳಿಗೆ ಬ್ಲಡ್ ಟೆಸ್ಟ್ ಅವಶ್ಯಕತೆ ಕಂಡು ಬರ್ತಿದೆ ಎನ್ನಲಾಗಿದೆ.