ಒಬ್ಬ ಮಹಿಳೆ ಉತ್ತಮ ಫಲವತ್ತತೆಯನ್ನು ಹೊಂದಬೇಕು ಎಂದರೆ ಆಕೆಯ ದೈಹಿಕ ಪ್ರಕೃತಿ ಅಷ್ಟೇ ಚೆನ್ನಾಗಿರಬೇಕು.ಅದಕ್ಕೆ ಪೂರಕವಾದ ಆಹಾರ ಪದ್ಧತಿಯನ್ನು ಸಹ ಹೊಂದಬೇಕು. ಈ ನಿಟ್ಟಿನಲ್ಲಿ ವಾಲ್ನಟ್ ಬೀಜಗಳು ಸಹಕಾರಿ ಎಂದು ಹೇಳಬಹುದು….
ನೆನೆಸಿದ ವಾಲ್ನಟ್ ಬೀಜಗಳಲ್ಲಿ ಮಹಿಳೆಯರ ದೇಹದ ಆರೋಗ್ಯಕ್ಕೆ ಅನುಕೂಲಕರವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಸಿಗುತ್ತವೆ. ಫಲವತ್ತತೆ ಹೆಚ್ಚಿಸುವ ವಿಚಾರದಲ್ಲಿ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಒಮೆಗಾ 3 ಫ್ಯಾಟಿ ಆಮ್ಲಗಳು ಜೊತೆಗೆ ಇನ್ನಿತರ ಅಂಶಗಳು ಕೂಡ ನೆರವಾಗುತ್ತವೆ.
ಹೀಗಾಗಿ ನೆನೆಸಿದ ವಾಲ್ನಟ್ ಬೀಜಗಳನ್ನು ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಸಂಪೂರ್ಣ ಆರೋಗ್ಯ ಉತ್ತಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ
ಅಂಡಾಣುಗಳ ಆರೋಗ್ಯ ಅಭಿವೃದ್ಧಿ:
ಮಹಿಳೆಯರ ದೇಹದ ಫಲವತ್ತತೆ ಚೆನ್ನಾಗಿರಬೇಕು ಅಂದರೆ ಅಂಡಾಣುಗಳ ಗುಣಮಟ್ಟ ಕೂಡ ಅಷ್ಟೇ ಚೆನ್ನಾಗಿರಬೇಕು.
ನೆನೆಸಿದ ವಾಲ್ನಟ್ಗಳಲ್ಲಿ ಮೇಲೆ ಹೇಳಿದಂತೆ ವಿವಿಧ ಬಗೆಯ ಆಂಟಿ ಆಕ್ಸಿಡೆಂಟ್ ಗಳು ಮತ್ತು ಫಾಲೆಟ್ ಜೊತೆಗೆ ಒಮೇಗಾ 3 ಫ್ಯಾಟಿ ಆಮ್ಲಗಳು ಸೇರಿರುತ್ತವೆ.
ಇವುಗಳು ಸಮತೋಲನವಾದ ಆಹಾರ ಪದ್ಧತಿಯನ್ನು ನಿರ್ವಹಣೆ ಮಾಡುವುದರ ಜೊತೆಗೆ ಆರೋಗ್ಯಕರವಾದ ಅಂಡಾಣುಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಜನನಾಂಗದ ಆರೋಗ್ಯಕ್ಕೆ ಕೂಡ ಸಹಕಾರಿಯಾಗಿರುತ್ತವೆ.
ಬ್ಲಡ್ ಶುಗರ್ ಲೆವೆಲ್ ನಿರ್ವಹಣೆ:
ನಮ್ಮ ಆರೋಗ್ಯ ಯಾವಾಗಲೂ ಚೆನ್ನಾಗಿರಬೇಕು ಎಂದರೆ ಅದರಲ್ಲಿ ಬ್ಲಡ್ ಶುಗರ್ ಲೆವೆಲ್ ಪಾತ್ರ ಕೂಡ ಬಹಳ ದೊಡ್ಡದು. ಹೀಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ವಾಲ್ನಟ್ಗಳನ್ನು ಸೇರಿಸಿ ಕೊಳ್ಳುವುದರಿಂದ ಸಮತೋಲನವಾದ ಆರೋಗ್ಯ ನಿರ್ವಹಣೆ ಯನ್ನು ನೀವು ಮಾಡಿಕೊಳ್ಳಬಹುದು.
ನೆನೆಸಿದ ವಾಲ್ನಟ್ ಬೀಜಗಳಲ್ಲಿ ಆರೋಗ್ಯಕರವಾದ ಕೊಬ್ಬು, ಪ್ರೋಟೀನ್ ಮತ್ತು ನಾರಿನ ಪ್ರಮಾಣ ಇರುವುದರಿಂದ ಇದು ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ನಿರ್ವಹಣೆ ಮಾಡುತ್ತದೆ.
ಶಕ್ತಿ ಹೆಚ್ಚಿಸುತ್ತದೆ
ಮಹಿಳೆಯರ ಫಲವತ್ತತೆಯನ್ನು ಹೆಚ್ಚಿಸುವ ಜೊತೆಗೆ ನೆನೆಸಿದ ವಾಲ್ನಟ್ ಬೀಜಗಳನ್ನು ಸೇವಿಸುವುದರಿಂದ ದೇಹದ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣವೆಂದರೆ ವಾಲ್ನಟ್ ಬೀಜಗಳಲ್ಲಿ ಆರೋಗ್ಯಕರವಾದ ಕೊಬ್ಬುಗಳು, ಪ್ರೋಟೀನ್ ಮತ್ತು ನಾರಿನ ಪ್ರಮಾಣ ಇರುವುದು. ಇವುಗಳು ಸಹಜವಾಗಿ ದೈಹಿಕ ಶಕ್ತಿಯನ್ನು ಹೆಚ್ಚಿಸಬಲ್ಲವು.
ಜನನಾಂಗದ ಆರೋಗ್ಯಕ್ಕೆ ಒಳ್ಳೆಯದು
ಮೇಲೆ ಹೇಳಿದಂತೆ ವಾಲ್ನಟ್ ಬೀಜಗಳನ್ನು ಸೇವಿಸುವುದರಿಂದ ಸಮತೋಲನವಾದ ಆಹಾರ ಪದ್ಧತಿಯಲ್ಲಿ ಸಹಕಾರಿಯಾಗುವ ವಾಲ್ನಟ್ ತನ್ನಲ್ಲಿರುವ ಪೌಷ್ಟಿಕಾಂಶಗಳಿಂದ ಮತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣ ಗಳಿಂದ ಮಹಿಳೆಯರ ದೇಹಕ್ಕೆ ಫಲವತ್ತತೆಗೆ ಸಹಕಾರಿ ಯಾಗಿರುವ ಅಂಶಗಳನ್ನು ನೀಡುತ್ತದೆ.
ಆಂಟಿ ಆಕ್ಸಿಡೆಂಟ್ ಲಕ್ಷಣಗಳು
ವಾಲ್ನಟ್ ಬೀಜಗಳಲ್ಲಿ ನಮ್ಮ ದೇಹದ ಉರಿಯುತವನ್ನು ಕಡಿಮೆ ಮಾಡುವ ಗುಣ ಹೆಚ್ಚಾಗಿ ಕಂಡುಬರುತ್ತದೆ. ಇದು ಮಹಿಳೆಯರ ದೇಹದ ಫಲವತ್ತತೆಯನ್ನು ಅಭಿವೃದ್ಧಿಪಡಿಸುವ ಲಕ್ಷಣವನ್ನು ಹೊಂದಿದ್ದು, ಅಂಡಾಣುಗಳನ್ನು ಹಾಳಾಗದಂತೆ ಕಾಪಾಡಿ ಜನನಾಂಗದ ಆರೋಗ್ಯವನ್ನು ಹೆಚ್ಚಿಸುತ್ತದೆ
ಒಮೇಗಾ 3 ಫ್ಯಾಟಿ ಆಮ್ಲಗಳು
ವಾಲ್ನಟ್ ಬೀಜಗಳನ್ನು ನೀರಿನಲ್ಲಿ ನೆನೆಸಿ ಸೇವಿಸುವುದರಿಂದ ಮಹಿಳೆಯರ ಫಲವತ್ತತೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಮಹಿಳೆಯರು ತಮ್ಮ ಆಹಾರ ಪದ್ಧತಿಯಲ್ಲಿ ವಾಲ್ನಟ್ ಬೀಜಗಳನ್ನು ಸೇರಿಸಿ ಸೇವಿಸುವುದರಿಂದ ಈ ವಿಷಯದಲ್ಲಿ ಹೆಚ್ಚು ಅನುಕೂಲವಾಗಲಿದೆ
ಫಾಲೆಟ್ ಮೂಲ ಇದು!
ನೆನೆಸಿದ ವಾಲ್ನಟ್ ಬೀಜಗಳನ್ನು ಸೇವನೆ ಮಾಡುವುದರಿಂದ ಮಹಿಳೆಯರ ಫಲವತ್ತತೆಗೆ ಸಾಕಷ್ಟು ಅನುಕೂಲವಿದೆ. ಏಕೆಂದರೆ ಇದು ಗರ್ಭಾವಸ್ಥೆಯ ಸಂದರ್ಭದಲ್ಲಿ ಬಹಳ ಅವಶ್ಯಕವಾದ ಅಂಶವಾಗಿದ್ದು, ಮಹಿಳೆಯರಿಗೆ ಈ ಸಂದರ್ಭದಲ್ಲಿ ಈ ಅಂಶದ ಕೊರತೆ ಆಗಬಾರದು ಎಂದು ವೈದ್ಯರು ಹೇಳುತ್ತಾರೆ