ಬೆಂಗಳೂರು/ ರಾಷ್ಟ್ರೀಯ:- ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ಸಿಕ್ಕಿದ್ದು, ವರ್ಷಾಂತ್ಯದೊಳಗೆ ಹೊಸಬರ ನೇಮಕಕ್ಕೆ ಶೇ. 72ರಷ್ಟು ಕಂಪನಿಗಳು ಮುಂದಾಗಿದೆ.
ಈ ನೇಮಕಾತಿ ಪ್ರಕ್ರಿಯೆಯು ಡಿಸೆಂಬರ್ನೊಳಗೆ ನಡೆಯಲಿದೆ. ಶೇ. 72ರಷ್ಟು ನೇಮಕಾತಿ ಉದ್ದೇಶವು ಈ ವರ್ಷದ ಪ್ರಾರಂಭದಲ್ಲೇ ಕಾಣಿಸಿಕೊಂಡಿತ್ತು. ವರ್ಷದ ಮೊದಲಾರ್ಧದಿಂದ ನೇಮಕಾತಿಯಲ್ಲಿ ಶೇ. 4ರಷ್ಟು ಹೆಚ್ಚಳವಾಗಿದೆ. 2023ರ ದ್ವಿತೀಯಾರ್ಧಕ್ಕೆ ಹೋಲಿಸಿದರೆ ಶೇ. 7 ಏರಿಕೆಯಾಗಿದೆ.
ಹೊಟ್ಟೆ ಉಬ್ಬರ ನಿತ್ಯ ಕಾಡುತ್ತಾ!?, ಗ್ಯಾಸ್ಟ್ರಿಕ್ ಸಮಸ್ಯೆಗೆ ಈ ಸರಳ ಮನೆಮದ್ದು ಟ್ರೈ ಮಾಡಿ!
ಇದು ಹೊಸ ಪ್ರತಿಭೆಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಭರವಸೆಯನ್ನು ಮೂಡಿಸಿದೆ. ಟೀಮ್ ಲೀಸ್ ಇಡಿ ಟೆಕ್ನ ‘ಕೆರಿಯರ್ ಔಟ್ಲುಕ್ʼ ಈ ಕುರಿತು ವರದಿ ಬಿಡುಗಡೆ ಮಾಡಿದ್ದು, ಇದು ಏಪ್ರಿಲ್ ಮತ್ತು ಜೂನ್ 2024ರ ಅವಧಿಯಲ್ಲಿನ ನೇಮಕಾತಿಗೆ ಸಂಬಂಧಿಸಿ ಭಾರತದಾದ್ಯಂತ 603ಕ್ಕೂ ಹೆಚ್ಚು ಕಂಪನಿಗಳ ಸಮೀಕ್ಷೆಯನ್ನು ಆಧರಿಸಿದೆ.
ಫ್ರೆಷರ್ಗಳಿಗೆ ನೇಮಕಾತಿ ಉದ್ದೇಶದ ಹೆಚ್ಚಳವು ಉತ್ತೇಜಕ ಸಂಕೇತವಾಗಿದೆ. ಇದು ಉದ್ಯೋಗದಾತರಲ್ಲಿ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಉದ್ಯೋಗಿಗಳಿಗೆ ಪ್ರವೇಶಿಸುವ ಹೊಸ ಪ್ರತಿಭೆಗಳಿಗೆ ಅಮೂಲ್ಯವಾದ ಅವಕಾಶಗಳನ್ನು ಒದಗಿಸುತ್ತದೆ ಎಂದು ಟೀಮ್ ಲೀಸ್ ಇಡಿ ಟೆಕ್ನ ಸಂಸ್ಥಾಪಕ ಮತ್ತು ಸಿಇಒ ಶಾಂತನು ರೂಜ್ ತಿಳಿಸಿದ್ದಾರೆ.
ಇ-ಕಾಮರ್ಸ್ ಮತ್ತು ತಂತ್ರಜ್ಞಾನದ ಸ್ಟಾರ್ಟ್-ಅಪ್ಗಳು, ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಮತ್ತು ಚಿಲ್ಲರೆ ವ್ಯಾಪಾರವು ಈ ವರ್ಷದ ದ್ವಿತೀಯಾರ್ಧದಲ್ಲಿ ಫ್ರೆಶರ್ಗಳನ್ನು ನೇಮಿಸಿಕೊಳ್ಳುವ ಉದ್ದೇಶವನ್ನು ತೋರಿಸುವ ಪ್ರಮುಖ ಮೂರು ಉದ್ಯಮಗಳಾಗಿವೆ ಎಂದು ವರದಿ ತಿಳಿಸಿದೆ.
ಭೌಗೋಳಿಕವಾಗಿ ವಿಶ್ಲೇಷಿರುವ ವರದಿಯು, ಬೆಂಗಳೂರಿನ ಶೇ. 74ರಷ್ಟು ಉದ್ಯೋಗದಾತರು ಫ್ರೆಶರ್ಗಳನ್ನು ನೇಮಿಸಿಕೊಳ್ಳಲು ಉದ್ದೇಶಿಸಿದ್ದಾರೆ. ಇದು ಮುಂಬಯಿನಲ್ಲಿ ಶೇ. 60 ಮತ್ತು ಚೆನ್ನೈನಲ್ಲಿ ಶೇ. 54 ರಷ್ಟಿದೆ ಎಂದು ಹೇಳಿದೆ.
ಪೂರ್ಣ ಸ್ಟಾಕ್ ಡೆವಲಪರ್, ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಎಕ್ಸಿಕ್ಯೂಟಿವ್, ಡಿಜಿಟಲ್ ಸೇಲ್ಸ್ ಅಸೋಸಿಯೇಟ್ ಮತ್ತು ಯೂಸರ್ ಇಂಟರ್ಫೇಸ್/ಯೂಸರ್ ಎಕ್ಸ್ಪೀರಿಯೆನ್ಸ್ ಡಿಸೈನರ್ ಫ್ರೆಶರ್ಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ವರದಿ ತಿಳಿಸಿದೆ.
ಉದ್ಯೋಗದಾತರು ವಿಶೇಷವಾಗಿ ಸೈಬರ್ ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಅನಾಲಿಟಿಕ್ಸ್ ಮತ್ತು ಸರ್ಚ್ ಎಂಜಿನ್ ಆಪ್ಟಿಮೈಸೇಶನ್ನಲ್ಲಿ ಕೌಶಲ ಹೊಂದಿರುವ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ ಎಂದು ಅದು ಹೇಳಿದೆ.
ಶೇ. 70ರಷ್ಟು ಉದ್ಯೋಗದಾತರು ಪ್ರಾಯೋಗಿಕ ಕಲಿಕೆಯೊಂದಿಗೆ ಪಠ್ಯಕ್ರಮವನ್ನು ವರ್ಧಿಸಲು ಸಲಹೆ ನೀಡಿದ್ದಾರೆ. ಆದರೆ ಶೇ. 62ರಷ್ಟು ಉದ್ಯಮದ ಅಗತ್ಯತೆಗಳೊಂದಿಗೆ ಶೈಕ್ಷಣಿಕ ತರಬೇತಿಯನ್ನು ಉತ್ತಮವಾಗಿ ಜೋಡಿಸಲು ಉದ್ಯಮ-ಅಕಾಡೆಮಿಯ ಪಾಲುದಾರಿಕೆಯನ್ನು ಪ್ರತಿಪಾದಿಸುತ್ತಾರೆ.
ಉತ್ಪಾದನೆ ವಲಯದಲ್ಲಿ ಶೇ. 25 ಉದ್ಯೋಗದಾತರು ಪದವಿ ಅಪ್ರೆಂಟಿಸ್ಗಳನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ. ಅನಂತರ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯವು ಶೇ. 19 ಮತ್ತು ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಶೇ. 11ರಷ್ಟು ಎಂದು ಅದು ಹೇಳಿದೆ,