ಕಲಘಟಗಿ (ಧಾರವಾಡ): ಪಟ್ಟಣ ಪಂಚಾಯಿತಿ ಎರಡನೆಯ ಬಾರಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ಸರಕಾರ ಮೀಸಲಾತಿ ಪ್ರಕಟಿಸಿದ್ದು, ಚುನಾವಣೆ ದಿನಾಂಕ ಪ್ರಕಟಗೊಂಡ ಪೂರ್ವದಲ್ಲಿ ರಾಜಕೀಯ ಚಟುವಟಿಕೆಗಳು ಶುರುವಾಗಿದೆ. ಕಳೆದ 18 ತಿಂಗಳಿನ ನಂತರ ಗದ್ದಿಗೆ ಇರಲು ಆಕಾಂಕ್ಷಿಗಳು ಜಾಲಕ್ಕೆ ಪ್ರತಿಜಾಲ ಹೆಣೆಯುತ್ತಿದ್ದು ಪಟ್ಟಣ ಪಂಚಾಯಿತಿ ಎಲ್ಲಿ 17 ವಾರ್ಡುಗಳಿದ್ದು. ಬಿಜೆಪಿ 10, ಕಾಂಗ್ರೆಸ್ 4, ಜೆಡಿಎಸ್ 2, ಬಿಜೆಪಿಯ ಅಭ್ಯರ್ಥಿ ನಿಧನ ಹೊಂದಿರುವುದರಿಂದ ವಾರ್ಡ ತೆರವಾಗಿದೆ. ಆಯ್ಕೆಯಾಗಿದ್ದ ಅಭ್ಯರ್ಥಿಗಳು ಪಟ್ಟಿಯ ವಿವರ ಈ ರೀತಿಯಾಗಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು, ವಾರ್ಡ್ ನಂಬರ 14ನೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಯಾದ ಶ್ರೀಮತಿ ಶಿಲ್ಪ ವಿನಾಯಕ ಪಾಲ್ಕರ್ ಅದೇ ರೀತಿ ಪ್ರತಿಪರ್ಧಿಯಾಗಿ ಜೆಡಿಎಸ್ ಅಭ್ಯರ್ಥಿ ಶಕುಂತಲಾ ಬೋಳಾರ್ ಬಿಜೆಪಿಯ ಸಂಖ್ಯಾಬಲಗಳನ್ನು ಪಡೆದುಕೊಳ್ಳಲು ಮಾತು ಕೇಳಿ ಬರುತ್ತಿವೆ. ಪಟ್ಟಣ ಪಂಚಾಯತಿ ಮೇಲ್ನೋಟಕ್ಕೆ ಬಹುಮತ ಬಿಜೆಪಿಯ ಪರವಾಗಿದ್ದು.
ಕುಕ್ಕರ್ ವಿಜಲ್ ಕೂಗಿದ್ರೆ ಸಾಕು, ನೀರು ಉಕ್ಕಿ ಸುರಿಯುತ್ತಾ? ಹಾಗಾದ್ರೆ ಹೀಗೆ ಮಾಡಿ ಸಾಕು!
ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರವಾಗಿದ್ದು ಪಟ್ಟಣ ಪಂಚಾಯಿತಿ ಗದ್ದುಗೆ ಏರಲು ತೆರೆಯ ಮರೆಯ ಕಸರತ್ತು ನಡೆಸಿದ್ದಾರೆ. ಕಾರ್ಯತಂತ್ರ ರೂಪಿಸಿ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿ ಜಯಶಾಲಿ ಆಗುತ್ತಾರೆ ಕಾದು ನೋಡಬೇಕಾಗಿದೆ. ಪಟ್ಟಣ್ಯಾದ್ಯಂತ ಯಾವುದೇ ಕೆಲಸ ಕಾರ್ಯಗಳಿಲ್ಲದೆ ವಾರ್ಡ್ಗಳಲ್ಲಿ ಅಭಿವೃದ್ಧಿಪೂರ್ವಕವಾಗಿ ಅನುದಾನದ ಕೊರತೆ ಇದರ ನಡುವೆ ಇನ್ನಾದರೂ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಪೂರ್ವಕವಾಗಿ ಕೆಲಸ ನಿಭಾಯಿಸಲು ನೂತನ ಅಧ್ಯಕ್ಷರು ಮುಂದೆ ಬರುತ್ತಾರೆ.